ಭಜನಾ ತಂಡದೊಂದಿಗೆ ಗಮನ ಸೆಳೆದ ಶಾಸಕ ಪ್ರಭು ಚವ್ಹಾಣ
ಮುರ್ಕಿ ರೇಣುಕಾ ಭವಾನಿ ಮಂದಿರದ ಕಳಸಾರೋಹಣ
ಭಜನಾ ತಂಡದೊಂದಿಗೆ ಗಮನ ಸೆಳೆದ ಶಾಸಕ ಪ್ರಭು ಚವ್ಹಾಣ
ಕಮಲನಗರ ತಾಲ್ಲೂಕಿನ ಮುರ್ಕಿ ಗ್ರಾಮದ ರೇಣುಕಾ ಭವಾನಿ ದೇವಿ ದೇವಸ್ಥಾನದಲ್ಲಿ ಅ.22ರಂದು ನಡೆದ ಕಳಸಾರೋಹಣ ಮಹೋತ್ಸವದಲ್ಲಿ ಮಾಜಿ ಸಚಿವರು ಹಾಗೂ ಔರಾದ(ಬಿ) ಶಾಸಕರಾದ ಪ್ರಭು ಬಿ.ಚವ್ಹಾಣ ಅವರು ಭಾಗವಹಿಸಿ ದೇವಿಯ ಆಶೀರ್ವಾದ ಪಡೆದರು.
ಈ ಸಂದರ್ಭದಲ್ಲಿ ದೇವಸ್ಥಾನದ ಆವರಣದಲ್ಲಿ ನಡೆಯುತ್ತಿದ್ದ ಭಜನಾ ತಂಡದವರೊಂದಿಗೆ ಕುಳಿತು ಭಜನಾ ಪದಗಳಿಗಳಿಗೆ ತಾಳ ಹಾಕಿ ಗಮನ ಸೆಳೆದರು.
ನಂತರ ಶಾಸಕರು ಮಾತನಾಡಿ ಗ್ರಾಮದಲ್ಲಿರುವ ಭವಾನಿ ದೇವಿಯ ಶಕ್ತಿ ಅಪಾರವಾಗಿದೆ. ಕಷ್ಟವೆಂದು ಬೇಡಿ ಬರುವ ಭಕ್ತರನ್ನು ಕಾಯುತ್ತಾಳೆ. ಗ್ರಾಮದಲ್ಲಿನ ಸಂಕಷ್ಟಗಳನ್ನು ನಿವಾರಿಸಿ ಜನರ ಸುಖಮಯ ಜೀವನಕ್ಕಾಗಿ ಪ್ರಾರ್ಥಿಸಿ ಕಳಸಾರೋಹಣ ಹಾಗೂ ಮತ್ತಿತರೆ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸುತ್ತಿರುವುದು ಶ್ಲಾಘನೀಯ ಎಂದರು.
ಮುರ್ಕಿ ಗ್ರಾಮ ನನಗೆ ಅತ್ಯಂತ ಪ್ರೀತಿಯ ಗ್ರಾಮವಾಗಿದೆ. ಊರಿನ ಜನತೆ ಕೂಡ ಸಾಕಷ್ಟು ಪ್ರೀತಿಯಿಂದ ಕಾಣುತ್ತಾರೆ. ಗ್ರಾಮದಲ್ಲಿ ಆದ್ಯತೆಯ ಮೇರೆಗೆ ಅಭಿವೃದ್ಧಿ ಕೆಲಸಗಳನ್ನು ಕೈಗೊಳ್ಳುತ್ತಿದ್ದೇನೆ. ಮಂದಿರದ ಅಭಿವೃದ್ಧಿಗೆ ನನ್ನ ಸಹಕಾರ ಸದಾ ಇರುತ್ತದೆ. ಗ್ರಾಮದ ಸಮಗ್ರ ಅಭಿವೃದ್ಧಿಗೆ ಎಲ್ಲ ಬೇಡಿಕೆಗಳನ್ನು ಹಂತ ಹಂತವಾಗಿ ಈಡೇರಿಸುತ್ತೇನೆ ಎಂದರು.
ಮುಖ್ಯ ಅರ್ಚಕರಾದ ಅರ್ಜುನ ಮಹಾರಾಜರ ನೇತೃತ್ವದಲ್ಲಿ ವಿವಿಧ ಪೂಜಾ ಕಾರ್ಯಕ್ರಮಗಳು ನಡೆದವು. ಈ ಸಂದರ್ಭದಲ್ಲಿ ಮುಖಂಡರಾದ ಕಿರಣ ಪಾಟೀಲ, ಸಚಿನ ಬಿರಾದಾರ, ಅನೀಲ ಬಿರಾದಾರ, ಸಚಿನ ರಾಠೋಡ, ಸಂತೋಷ ವೀರಶೆಟ್ಟಿ, ಕಾಳಿದಾಸ ಆಡೆ, ಅಶೋಕ ಹಲಮಂಡಗೆ, ದಯಾನಂದ ಕಾಳೆ, ಅಮಲ ಠಾಕೂರ, ನಾಗನಾಥ ಸಗರ್, ಸಂತೋಷ ಖಿಂಡಿವಾಲೆ, ದಿಲೀಪ ಚಾಂಡೇಸುರೆ, ಗೋವಿಂದ ಹಿಲಾಲಪೂರೆ, ರಾಜಕುಮಾರ ಬಾರೋಳೆ, ದೀಪಕ ಕುಲಕರ್ಣಿ, ಬಾಲಾಜಿ ಸಗರ್, ವೀರೇಶ ಹಲಮಂಡಗೆ ಸೇರಿದಂತೆ ಇತರರು ಉಪಸ್ಥಿತರಿದ್ದರು.
