ಬಸವಣ್ಣನ ಜಯಂತಿ: ಸಮಾನತೆಯ ಸಂದೇಶ ಪುನರುಚ್ಛರಣೆ : ವಳಕೇರಿ

ಬಸವಣ್ಣನ ಜಯಂತಿ: ಸಮಾನತೆಯ ಸಂದೇಶ ಪುನರುಚ್ಛರಣೆ : ವಳಕೇರಿ

ಬಸವಣ್ಣನ ಜಯಂತಿ: ಸಮಾನತೆಯ ಸಂದೇಶ ಪುನರುಚ್ಛರಣೆ : ವಳಕೇರಿ 

ಜಗಜ್ಯೋತಿ ಬಸವೇಶ್ವರ ಜಯಂತಿ ಆಚರಣೆ

ಅನುಭವ ಮಂಟಪದ ಸ್ಥಾಪಕನಿಗೆ ಗೌರವ– ಸಮಾನತೆಯ ಹರಿಕಾರ ಬಸವಣ್ಣನಿಗೆ ನಮನ

ನಂದಿಕೂರ್: ಜಗತ್ತಿನ ಮೊದಲ ಸಂಸತ್ತಾದ ಅನುಭವ ಮಂಟಪವನ್ನು ಸ್ಥಾಪಿಸಿ, ವಚನಗಳ ಮೂಲಕ ಸಮಾನತೆ ಸಾರಿದ ಜಗಜ್ಯೋತಿ ಬಸವೇಶ್ವರರು ವಿಶ್ವಗುರುಗಳಾಗಿದ್ದಾರೆ ಎಂದು ನಂದಿಕೂರ್ ವೆಂಕಟಗಿರಿ ಗ್ರಾಮೀಣಾಭಿವೃದ್ಧಿ ಸೌಹಾರ್ದ ಸಹಕಾರಿ ನಿಯಮಿತ (ರಿ) ಸಂಸ್ಥೆಯ ಅಧ್ಯಕ್ಷ ಪವನಕುಮಾರ ಬಿ. ವಳಕೇರಿ ಹೇಳಿದರು.

ಗ್ರಾಮದ ವೆಂಕಟಗಿರಿ ಸೌಹಾರ್ದ ಸಹಕಾರಿ ಕಚೇರಿಯಲ್ಲಿ ಜಗಜ್ಯೋತಿ ಬಸವಣ್ಣನವರ ಜಯಂತಿ ಕಾರ್ಯಕ್ರಮದಲ್ಲಿ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ ಅವರು ಮಾತನಾಡಿದರು. “ಸಾಮಾಜಿಕ ಅಸಮಾನತೆ ಹಾಗೂ ಮೌಢ್ಯತೆಗಳನ್ನು ತೊಲಗಿಸಲು ಶ್ರಮಿಸಿದ ಮಹಾನ್ ಚಿಂತಕ ಬಸವಣ್ಣ. ಸಮಸಮಾಜದ ಕನಸು ಕಂಡು, ಅದನ್ನು ವಚನಗಳ ಮೂಲಕ ಜನರ ಬಳಿ ತಲುಪಿಸಿದರು,” ಎಂದರು.

ಸಂಸ್ಥೆಯ ಕಾರ್ಯದರ್ಶಿ ಶರಣಗೌಡ ಎಂ. ಪಾಟೀಲ ಮಾತನಾಡುತ್ತಾ, “ಬಸವಣ್ಣನವರು ತೋರಿಸಿದ ಸನ್ಮಾರ್ಗದಲ್ಲಿ ಎಲ್ಲರೂ ಕೈಜೋಡಿಸಿ ನಡೆಯಬೇಕು. ಅವರ ವಚನಗಳು ನಮ್ಮೆಲ್ಲರ ಬದುಕಿಗೆ ದಾರಿದೀಪವಾಗಿದೆ,” ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಕಲಬುರ್ಗಿ ಜಿಲ್ಲಾ ಪಂಚಾಯತ್‌ ಮಾಜಿ ಉಪಾಧ್ಯಕ್ಷೆ ಶ್ರೀಮತಿ ಅನಿತಾ ಪವನಕುಮಾರ ವಳಕೇರಿ, ಉಪಾಧ್ಯಕ್ಷ ಬಸವಲಿಂಗ ಬಿ. ಪಾಟೀಲ (ಸಿರನೂರ), ನಿರ್ದೇಶಕರು ಶ್ರೀಮತಿ ಜಗದೇವಿ ರಾಘವೇಂದ್ರ ಮರತುರ, ವಿಠಾಬಾಯಿ ಪಾಟೀಲ, ಬೀರಪ್ಪ ಪೂಜಾರಿ ಹಾಗೂ ಶ್ರೀಮತಿ ರೋಶನಬಿ ಉತ್ತನಾಳ ಉಪಸ್ಥಿತರಿದ್ದರು.

ರಾಘವೇಂದ್ರ ಮರತುರ ಸ್ವಾಗತಿಸಿ, ಶಖಿಲ ಉತ್ತನಾಳ ವಂದಿಸಿದರು .