ಕಾಯಕ ಭಕ್ತಿ ಮಾರ್ಗದಿಂದ ಮಾನವನ ಪ್ರಗತಿ ಸಾಧ್ಯ:ಡಾ.ಚಿ.ಸಿ.ನಿಂಗಣ್ಣ

ಕಾಯಕ ಭಕ್ತಿ ಮಾರ್ಗದಿಂದ ಮಾನವನ ಪ್ರಗತಿ ಸಾಧ್ಯ:ಡಾ.ಚಿ.ಸಿ.ನಿಂಗಣ್ಣ
ಕಲಬುರಗಿ: ವಿಶ್ವಗುರು ಬಸವಣ್ಣನವರ ಪ್ರಯತ್ನದಿಂದ ವೈಚಾರಿಕ ಕ್ರಾಂತಿ ಜರುಗಿದ್ದರಿಂದ ಲಿಂಗಭೇದ ತಾರತಮ್ಯ, ಅನಿಷ್ಠ ಪದ್ಧತಿಗಳು ನಿರ್ಮೂಲನೆ ಆಗಿವೆ,ಕಾಯಕ ಭಕ್ತಿ ದಾಸೋಹ ಮಾರ್ಗದಿಂದ ಮನುಷ್ಯನು ಪ್ರಗತಿ ಸಾಧಿಸಲು ಸಾಧ್ಯ ಎಂದು ಸಾಹಿತಿ,ಶರಣ ಚಿಂತಕರಾದ ಡಾ.ಚಿ.ಸಿ.ನಿಂಗಣ್ಣ ಹೇಳಿದರು,
ಜಯನಗರ ಶಿವ ಮಂದಿರ ಅಭಿವೃದ್ಧಿ ಟ್ರಸ್ಟ್ ವತಿಯಿಂದ ಜಯನಗರ ಶಿವಮಂದಿರದಲ್ಲಿ ಜಗಜ್ಯೋತಿ ಶ್ರೀ ಬಸವೇಶ್ವರರ 892ನೆ ಜಯಂತಿ ಅಂಗವಾಗಿ ಹಮ್ಮಿಕೊಂಡಿದ್ದ ಸಾಂಸ್ಕೃತಿಕ ನಾಯಕ ಬಸವಣ್ಣ ವಿಚಾರ ಸಂಕಿರಣದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಬಸವಣ್ಣನವರು ಸಮಾನತೆ ಸಮಾಜ ನಿರ್ಮಾಣ ಆಗಬೇಕೆಂದು ಕನಸು ಕಂಡಿದ್ದರು.ಸಮೋಜದಲ್ಲಿ ಸಾಮಾಜಿಕ, ಆರ್ಥಿಕ, ಆಧ್ಯಾತ್ಮಿಕ, ಸಾಂಸ್ಕೃತಿಕವಾಗಿ ಪ್ರತಿಯೋಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಬಸವಣ್ಣನವರ ಬಯಕೆಯಾಗಿತ್ತು.ಪ್ರತಿಯೊಬ್ಬ ಕನ್ನಡಿಗನು ಬಸವಣ್ಣನವರ ವಿಚಾರಗಳನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಅನುಷ್ಠಾನಗೊಳಿಸಲು ಪ್ರಯತ್ನಿಸಬೇಕು.ಆಧುನಿಕ ಜೀವನ ಶೈಲಿಗೆ ಮಾರು ಹೋಗದೆ ತಮ್ಮ ಕುಟುಂಬದಿಂದಲೇ ಬಸವ ತತ್ವವನ್ನು ಆಚರಣೆ ತರುವ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದ ಅವರು ಸರಕಾರವೇ ಎಲ್ಲವನ್ನು ಮಾಡಲಾರದು.ಸಂಘ ಸಂಸ್ಥೆಗಳು ಬಸವಣ್ಣನವರ ಆಚಾರ ವಿಚಾರ ಕುರಿತು ಸಮಾಜಕ್ಕೆ ತಿಳಿಸುವ ಕೆಲಸ ಮಾಡಬೇಕು.ಪ್ರತಿಯೋಬ್ಬರು ಹಣೆಯ ಮೇಲೆ ವಿಭೂತಿ ಧರಿಸಬೇಕು ಎಂದು ಕರೆ ಕೊಟ್ಟರು.
ಇನ್ನೊರ್ವ ಅತಿಥಿಗಳಾಗಿ ಆಗಮಿಸಿದ್ದ ಚಿಂತಕ ಮಲ್ಲಣ್ಣ ನಾಗರಾಳ ಅವರು ಮಾತನಾಡಿ ಸಮಾನತೆ ಮೂಡಬೇಕಾದರೆ ಮೇಲು,ಕೀಳು, ಜಾತಿ ಇವೆಲ್ಲವೂ ತೊಲಗಿಸಿದರೆ ಮಾತ್ರ ನಾವು ಬಸವಣ್ಣನವರಿಗೆ ನಿಜವಾದ ಗೌರವ ಸಲ್ಲುತ್ತದೆ ಎಂದರು.
ಟ್ರಸ್ಟ್ ಅಧ್ಯಕ್ಷ ಲಿಂಗರಾಜ ಸಿರಗಾಪೂರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.ಹಿರಿಯ ಸದಸ್ಯರಾದ ಎಂ.ಡಿ.ಮಠಪತಿ, ಬಸವರಾಜ ಅನ್ವರಕರ, ಮಹಿಳಾ ಘಟಕದ ಅಧ್ಯಕ್ಷೆ ಶೈಲಜಾ ವಾಲಿ ಮಾತನಾಡಿದರು.ಪ್ರಧಾನ ಕಾರ್ಯದರ್ಶಿ ಸೂರ್ಯಕಾಂತ ಕೆ.ಬಿ ಪ್ರಾಸ್ತಾವಿಕವಾಗಿ ಮಾತನಾಡಿದರು.
ಬಂಡೆಪ್ಪ ಕೇಸೂರ,ಸಿದ್ಧಲಿಂಗ ಗುಬ್ಬಿ, ಬಸವರಾಜ ಮಾಗಿ, ಭೀಮಾಶಂಕರ ಶೆಟ್ಟಿ,ಗುರುಪಾದಪ್ಪ ಕಾಂತಾ, ನಾಗರಾಜ ಖೂಬಾ,ಎಸ್.ಡಿ.ಸೇಡಂಕರ, ವೀರಪ್ಪ ಹುಡುಗಿ, ಮಲ್ಲಯ್ಯ ಸ್ವಾಮಿ ಗಂಗಾಧರ ಮಠ, ಪರಮೇಶ್ವರ್ ಹಡಪದ,ಅಮೀತ ನಾಗನಹಳ್ಳಿ, ಮಲ್ಲಯ್ಯ ಸ್ವಾಮಿ ಬೀದಿಮನಿ,ಮಹಿಳಾ ಘಟಕದ ಸದಸ್ಯರಾದ ಅನುರಾಧ ಕುಮಾರಸ್ವಾಮಿ, ಸುಜಾತಾ ಭೀಮಳ್ಳಿ, ಸುಷ್ಮಾ ಮಾಗಿ,ಲತಾ ತುಪ್ಪದ ಸೇರಿದಂತೆ ಬಡಾವಣೆಯ ಅನೇಕರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.