ಕಮಲನಗರ: ವಿವಿಧೆಡೆ 77ನೇ ಗಣರಾಜ್ಯೋತ್ಸವ ಸಮಾರಂಭ, ಡಾ.ಅಂಬೇಡ್ಕರ ಅವರು ವೈಚಾರಿಕ ನಿಲುವ ದೇಶದ ಪ್ರಗತಿಗೆ ಭದ್ರಬುನಾದಿ : ಪದ್ಮಾ ಭವರಾ

ಕಮಲನಗರ: ವಿವಿಧೆಡೆ 77ನೇ ಗಣರಾಜ್ಯೋತ್ಸವ ಸಮಾರಂಭ,   ಡಾ.ಅಂಬೇಡ್ಕರ ಅವರು ವೈಚಾರಿಕ ನಿಲುವ ದೇಶದ ಪ್ರಗತಿಗೆ ಭದ್ರಬುನಾದಿ : ಪದ್ಮಾ ಭವರಾ

ಕಮಲನಗರ: ವಿವಿಧೆಡೆ 77ನೇ ಗಣರಾಜ್ಯೋತ್ಸವ ಸಮಾರಂಭ,  ಡಾ.ಅಂಬೇಡ್ಕರ ಅವರು ವೈಚಾರಿಕ ನಿಲುವ ದೇಶದ ಪ್ರಗತಿಗೆ ಭದ್ರಬುನಾದಿ : ಪದ್ಮಾ ಭವರಾ

ಕಮಲನಗರ : ನಿರಂಕುಶ ಪ್ರಭುತ್ವ ಕಿತ್ತೆಸೆದು ಪ್ರಜಾಪ್ರಭುತ್ವ ರಾಷ್ಟ್ರದ ಮೂಲ ಆಶಯಗಳನ್ನು ಮುಂದಿಟ್ಟುಕೊಂಡು ರಚಿಸಲಾದ ಸಂವಿಧಾನ ಸರ್ವರಿಗೆ ಸಮಬಾಳು, ಜಾತ್ಯಾತೀತ, ಸಮಾನತೆ, ಭಾತೃತ್ವ, ಸಾರ್ವಭೌಮತ್ವ ಮತ್ತು ಸ್ವಾತಂತ್ರವನ್ನು ದಯಪಾಲಿಸಿದೆ. ಡಾ.ಅಂಬೇಡ್ಕರ ಅವರು ವೈಚಾರಿಕ ನಿಲುವು ದೇಶದ ಪ್ರಗತಿಗೆ ಭದ್ರಬುನಾದಿ ಹಾಕಿದೆ ಎಂದು ಶಿಕ್ಷಕಿ ಪದ್ಮಾ ಭವರಾ ನುಡಿದರು.

ಪಟ್ಟಣದ ತಹಸೀಲ ಕಾರ್ಯಾಲಯದಲ್ಲಿ ಸೋಮವಾರ ಜಿಲ್ಲಾಡಳಿತ, ಕಂದಾಯ ಮತ್ತು ತಾ.ಪಂ.ಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 77ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ಮಾತನಾಡಿದರು. 

ಪ್ರಜಾಪ್ರಭುತ್ವದ ಮೌಲ್ಯಗಳು ಮತ್ತು ಏಕತೆಯ ಶಕ್ತಿಯನ್ನು ಸ್ಮರಿಸುವ ದಿನ ತನ್ನದೆ ಆದ ಐತಿಹಾಸಿಕ ಕ್ಷಣವಾಗಿದೆ.ವಂದೇ ಮಾತರಂ ಗೀತೆ ರಚನೆಯಾಗಿ 150 ವರ್ಷ ಕಳೆದಿವೆ.ದೇಶದ ಪ್ರಗತಿ ಮತ್ತು ಅಖಂಡತೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಾವೆಲ್ಲರು ಒಗ್ಗೂಡಬೇಕು. ಅಂತರಿಕ ಉಗ್ರವಾದ ಅತ್ಯಂತ ಅಪಾಯಕಾರಿಯಾಗಿದ್ದು, ಸ್ವಾಭಿಮಾನ ಮತ್ತು ಸ್ವಾವಲಂಬನೆ ಮೂಲಕ ದೇಶದ ಪ್ರಗತಿ ಜೊತೆಗೆ ಸಮನ್ವಯತೆ ಸಾಧಿಸಬೇಕಾದ ಅನಿವಾರ್ಯತೆ ಒದಗಿದೆ ಎಂದರು.

ದ್ವಜಾರೋಹಣ ನೆರವೇರಿಸಿದ ತಹಶೀಲ್ದಾರ್ ಅಮಿತಕುಮಾರ ಕುಲಕರ್ಣಿ ಮಾತನಾಡಿ ಜನರಿಂದ , ಜನರಿಗೋಸ್ಕರ ಮತ್ತು ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಂದ ನಡೆಸುವ ಸರಕಾರ ಪ್ರಜಾಪ್ರಭುತ್ವ ಮೌಲ್ಯಗಳನ್ನು ಹೊಂದಿರುತ್ತದೆ. ಮೂಲ ಸವಲತ್ತುಗಳಿಂದ ವಂಚಿತರಾದ ನಾಗರೀಕರ ಮನೆ ಬಾಗಿಲಿಗೆ ಸರಕಾರದ ಯೋಜನೆಗಳನ್ನು ಕೊಂಡೊಯ್ಯುವ ಕಾಳಜಿ ಪ್ರತಿಯೊಬ್ಬ ಅಧಿಕಾರಿಗಳ ಕಾರ್ಯವಾಗಿದೆ. ಈ ನಿಟ್ಟಿನಲ್ಲಿ ಸಾರ್ವಜನಿಕರು ಮತ್ತು ಅಧಿಕಾರಿಗಳ ಸಮನ್ವಯತೆಯಿಂದ ಕಾರ್ಯ ಕೈಗೊಂಡರೆ ದೇಶ ಪ್ರಗತಿಯಾಗುತ್ತದೆ ಎಂದರು. 

ವೇದಿಕೆಯಲ್ಲಿ ಗ್ರಾ.ಪಂ.ಅಧ್ಯಕ್ಷೆ ಸುಶೀಲಾಬಾಯಿ ಮಹೇಶ ಸಭೆ ಅಧ್ಯಕ್ಷತೆ ವಹಿಸಿದರು. 

ತಾ.ಪಂ.ಇ.ಒ. ಹಣಮಮತರಾಯ ಕೌಟಗೆ, ಗ್ರೇಡ್-2.ತಹಸೀಲದಾರ ರಮೇಶ ಪೆದ್ದೆ, ಪಿಡಿಒ.ದಿಲೀಪ ,ಸಿ ಆರ್‍ಸಿ.ಶಿವಕುಮಾರ ಹೊನ್ನಾಳೆ, ಪಿ ಎಸ್ ಐ.ಆಶಾ ರಾಠೋಡ, ಬಾಲಾಜಿ ತೆಲಂಗ್, ಶ್ರೀರಂಗ ಪರಿಹಾರ, ಮನೋಜಕುಮಾರ ಪೊಲೀಸ್ ಪಾಟೀಲ, ಸುಭಾಷ ಗಾಯಕವಾಡ, ರಾಜಕುಮಾರ ಪೊ.ಪಾಟೀಲ, ಶಿವೂ ವಡ್ಡೆ, ನೀಲಕಂಠರಾವ ಕಾಂಬಳೆ ಹಾಗೂ ಪ್ರಮುಖರಿದ್ದರು. 

ರೋಹಿದಾಸ ಮೇತ್ರೆ ಕಾರ್ಯಕ್ರಮ ನಿರೂಪಿಸಿದರು. ಹಣಮಂತರಾಯ ಕೌಟಗೆ ವಂದಿಸಿದರು. ವಿವಿಧ ಶಾಲಾ ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಜರುಗಿದವು.

ಭಾಗಿರಥಿ ಪಬ್ಲಿಕ್ ಶಾಲೆ : ಪಟ್ಟಣದ ಶಾಸ್ತ್ರೀ ಶಿಕ್ಷಣ ಸಂಸ್ಥೆ ಸಹಯೋಗದಲ್ಲಿ ನಡೆಯುತ್ತಿರುವ ಭಾಗಿರಥಿ ಪಬ್ಲಿಕ್ ಶಾಲೆಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ದಿನ ಆಚರಿಸಲಾಯಿತು.

ಮುಖ್ಯಶಿಕ್ಷಕ ಮನೋಜಕುಮಾರ ಹಿರೇಮಠ ಅವರು ಧ್ವಜಾರೋಹಣ ನೆರವೇರಿಸಿ, ಮಾತನಾಡಿದರು.

ಉದ್ಯಮಿ ಶಿವಲಿಂಗ ಬೆಂಬುಳಗೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು. 

ಶ್ರೀದೇವಿ ಸೋನಕಾಂಬಳೆ, ದೀಪಮಾಲಾ ಸೂರ್ಯವಂಶಿ, ರಾಜಶ್ರೀ ಸಿರಗಿರೆ, ಅಂಬಿಕಾ ಗಾಯಕವಾಡ್, ಯೋಗೆಶ್ವರಿ ಮದನೂರು, ಮಲ್ಲಿಕಾರ್ಜುನ ಮೇತ್ರೆ, ಜನಾಬಾಯಿ ಇದ್ದರು.

ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಥಮ ಸ್ಥಾನ ಮತ್ತು ದ್ವಿತೀಯ ಸ್ಥಾನ ಪಡೆದ ಪ್ರತಿಭಾವಂತ ಮಕ್ಕಳಿಗೆ ಪ್ರಶಸ್ತಿ ಪತ್ರ ನೀಡಿ ಪ್ರೋತ್ಸಾಹಿಸಲಾಯಿತು.

ನಂತರ ಶಾಲಾ ಮಕ್ಕಳಿಂದ ದೇಶಭಕ್ತಿ ಹಾಡುಗಳಿಗೆ ಸಾಂಸ್ಕøತಿಕ ಚಟುವಟಿಕೆ ನಡೆಸಿಕೊಟ್ಟರು.

ರಾಂಪುರ ಶಾಲೆ: ತಾಲ್ಲೂಕಿನ ರಾಂಪುರ ಗ್ರಾಮದ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ 77ನೇ ಗಣರಾಜ್ಯೋತ್ಸವ ಆಚರಿಸಲಾಯಿತು.

ಮುಖ್ಯಶಿಕ್ಷಕಿ ಮಂಗಲಾ ಅವರು ಧ್ವಜಾರೋಹಣ ನೆರವೇರಿಸಿದರು.ರಾಷ್ಟ್ರೀಯ ಮೋದಿ ಸೇವಾ ಸಮಿತಿ ಕಮಲನಗರ ತಾಲ್ಲೂಕು ಘಟಕ ಅಧ್ಯಕ್ಷ ಬಬನ ರಾಠೋಡ್ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.

ಗಣಪತರಾವ ಬಿರಾದಾರ, ಬಾಲಿಕಾ ರೇಷ್ಮಾ, ಸುನೀತಾ, ಅನುಸೂಯಾ ಹಾಗೂ ಮಕ್ಕಳು ಇದ್ದರು.