ರುದ್ರಾಕ್ಷಿ ಧಾರಣೆಯಿಂದ ಆಧ್ಯಾತ್ಮಿಕ ಹಾಗೂ ಆರೋಗ್ಯ ಲಾಭ – ಚರಲಿಂಗ ಮಹಾಸ್ವಾಮಿಗಳು

ರುದ್ರಾಕ್ಷಿ ಧಾರಣೆಯಿಂದ ಆಧ್ಯಾತ್ಮಿಕ ಹಾಗೂ ಆರೋಗ್ಯ ಲಾಭ – ಚರಲಿಂಗ ಮಹಾಸ್ವಾಮಿಗಳು

ರುದ್ರಾಕ್ಷಿ ಧಾರಣೆಯಿಂದ ಆಧ್ಯಾತ್ಮಿಕ ಹಾಗೂ ಆರೋಗ್ಯ ಲಾಭ – ಚರಲಿಂಗ ಮಹಾಸ್ವಾಮಿಗಳು

ಕಲಬುರಗಿ, ಆ.4:ಪವಿತ್ರ ರುದ್ರಾಕ್ಷಿಯನ್ನು ಧರಿಸುವುದರಿಂದ ಆಧ್ಯಾತ್ಮಿಕ ಉನ್ನತಿ ಮಾತ್ರವಲ್ಲದೆ, ಹೃದಯ ಸಂಬಂಧಿ ಸಮಸ್ಯೆಗಳು, ರಕ್ತದೊತ್ತಡ ಮತ್ತು ಚರ್ಮದ ತೊಂದರೆಗಳಿಗೆ ಪರಿಹಾರ ದೊರೆಯುತ್ತದೆ ಎಂದು ಗದ್ದುಗೆ ಮಠದ ಪೂಜ್ಯಶ್ರೀ ವ.ನಿ.ಪ್ರ. ಚರಲಿಂಗ ಮಹಾಸ್ವಾಮಿಗಳು ಹೇಳಿದರು.

ನಗರದ ವಿದ್ಯಾನಗರ ಕಾಲೋನಿಯ ವೆಲ್‌ಫೇರ್ ಸೊಸೈಟಿಯಲ್ಲಿ ಇಂದು ಬೆಳಿಗ್ಗೆ 7ರಿಂದ 8 ಗಂಟೆಯವರೆಗೆ ನಡೆದ ರುದ್ರಾಕ್ಷಿ ಧಾರಣಾ ಕಾರ್ಯಕ್ರಮದಲ್ಲಿ ಮಹಾಸ್ವಾಮಿಗಳು ಭಕ್ತರ ಮನೆಗಳಿಗೆ ತೆರಳಿ ರುದ್ರಾಕ್ಷಿ ಧಾರಣೆ ಮಾಡಿದರು.

ಕಾರ್ಯಕ್ರಮದ ಆರಂಭದಲ್ಲಿ ಸೊಸೈಟಿ ಕಾರ್ಯದರ್ಶಿ ಶಿವರಾಜ ಅಂಡಗಿಯವರು ಭಕ್ತರಿಗೆ ಭಗವಾತೋಪಿ ಹಾಗೂ ಟವೆಲ್‌ ಹಾಕಿಸಿ ಸ್ವಾಗತಿಸಿದರು. ಈ ಸಂದರ್ಭದಲ್ಲಿ ಶ್ರೀಮತಿ ಲಲಿತಾ, ಕಮಲಾಕರ ಸಂಗೋಳಗಿ, ಡಾ. ಓಂಪ್ರಕಾಶ ಹೆಬ್ಬಾಳ, ಶ್ರೀಮತಿ ಸುನಂದಾ ಚಿನ್ಮಳ್ಳಿ, ಶ್ರೀಮತಿ ವಿಜಯಶ್ರೀ, ಶ್ರೀಮತಿ ರೇಖಾ ಶಿವರಾಜ ಅಂಡಗಿ ಮತ್ತು ಇತರರು ರುದ್ರಾಕ್ಷಿ ಧಾರಿಸಿಕೊಂಡರು.

ಪಾದಯಾತ್ರೆಯಲ್ಲಿ ಸೊಸೈಟಿಯ ಅಧ್ಯಕ್ಷ ಮಲ್ಲಿನಾಥ ದೇಶಮುಖ, ಖಜಾಂಚಿ ಗುರುಲಿಂಗಯ್ಯ ಮಠಪತಿ, ನಾಗಭೂಷಣ ಹಿಂದೊಡ್ಡಿ, ಶಾಂತಯ್ಯ ಬೀದಿಮನಿ, ನಾಗರಾಜ ಹೆಬ್ಬಾಳ, ಅಣವೀರಪ್ಪ ಆಂದೇಲಿ, ಶ್ರೀವಸ್ತ ಸಂಗೋಳಗಿ ಸೇರಿದಂತೆ ಹಲವಾರು ಭಕ್ತರು ಭಾಗವಹಿಸಿದರು.