ಯಡ್ರಾಮಿ ತಾಲ್ಲೂಕಿನಲ್ಲಿ ಜೆಜೆಎಂ ಯೋಜನೆಯ ಅಕ್ರಮತೆ ವಿರುದ್ಧ ಮಹಾಂತಗೌಡ ಹಂಗರಗಾ ಕೆ ಆಕ್ರೋಶ

ಯಡ್ರಾಮಿ ತಾಲ್ಲೂಕಿನಲ್ಲಿ ಜೆಜೆಎಂ ಯೋಜನೆಯ ಅಕ್ರಮತೆ ವಿರುದ್ಧ ಮಹಾಂತಗೌಡ ಹಂಗರಗಾ ಕೆ ಆಕ್ರೋಶ

ಯಡ್ರಾಮಿ ತಾಲ್ಲೂಕಿನಲ್ಲಿ ಜೆಜೆಎಂ ಯೋಜನೆಯ ಅಕ್ರಮತೆ ವಿರುದ್ಧ ಮಹಾಂತಗೌಡ ಹಂಗರಗಾ ಕೆ ಆಕ್ರೋಶ 

ವರದಿ: ಜೆಟ್ಟೆಪ್ಪ ಎಸ. ಪೂಜಾರಿ | ಯಡ್ರಾಮಿ ಸುದ್ದಿ

ಯಡ್ರಾಮಿ:  ಯಡ್ರಾಮಿ ತಾಲೂಕಿನ ಹಳ್ಳಿಗಳಲ್ಲಿ ಜಾರಿಯಾಗುತ್ತಿರುವ ಜಲಜೀವನ್ ಮಿಷನ್ (ಜೆಜೆಎಂ) ಯೋಜನೆಯ ಕಾರ್ಯ ನಿರ್ವಹಣೆಯಲ್ಲಿ ಹಲವಾರು ಅಕ್ರಮತೆಗಳು, ಲೋಪಗಳು ನಡೆದಿದೆ ಎಂಬ ಆರೋಪಗಳ ಮೇಲೆ ರಾಷ್ಟ್ರೀಯ ಅಹಿಂದ್ ಸಂಘಟನೆಯ ತಾಲೂಕಾಧ್ಯಕ್ಷರಾದ ಮಹಾಂತಗೌಡ ಆರ್. ಪಾಟೀಲ್ ಹಂಗರಗಾ ಕೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

2018ರಿಂದ ಕೇಂದ್ರ ಸರ್ಕಾರದ ಮೂಲಕ ಜಾರಿಯಾದ ಜೆಜೆಎಂ ಯೋಜನೆಯು ಹಳ್ಳಿಗಳ ಮನೆಮನೆಯಿಗೂ 24 ಗಂಟೆ ಶುದ್ಧ ಕುಡಿಯುವ ನೀರನ್ನು ಪೂರೈಸುವ ಗುರಿಯೊಂದಿಗೆ ಆರಂಭವಾಗಿತ್ತು. ಆದರೆ ಯೋಜನೆ ಪ್ರಾಯೋಗಿಕವಾಗಿ ವಿಫಲವಾಗಿದೆ. ಸಿಸಿ ರಸ್ತೆಗಳು ಹಾಳಾಗಿವೆ, ಪೈಪುಗಳು ಜಾರಾಗಿವೆ, ವಾಹನ ಸವಾರರಿಗೆ ತೊಂದರೆ ಉಂಟಾಗಿದೆ. ಕೆಲವು ಗ್ರಾಮಸ್ಥರು ತಮ್ಮ ಮನೆಯೊಳಗೆ ಅಳವಡಿಸಲಾಗಿದ್ದ ಪೈಪುಗಳನ್ನು ಕಿತ್ತು, ಕಾಮಗಾರಿ ಬೇರೇನೂ ನಡೆಯದ ಹಿನ್ನಲೆಯಲ್ಲಿ ಮನೆಯಲ್ಲಿಯೇ ಇಟ್ಟುಕೊಂಡಿರುವ ಉದಾಹರಣೆಗಳು ಕಂಡುಬಂದಿವೆ.

ತಾಲೂಕು ಮತ್ತು ಜಿಲ್ಲಾ ಪಂಚಾಯತ್‌ನ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ಮಾಡುವುದಿಲ್ಲವೆಂಬ ಆರೋಪಗಳು ಕೇಳಿಬರುತ್ತಿವೆ. ಅಧಿಕಾರಿಗಳ ನಿರ್ಲಕ್ಷ್ಯ, ಸ್ಥಳೀಯ ಗ್ರಾಮ ಪಂಚಾಯತ್‌ಗಳ ಶಿಥಿಲ ಧೋರಣೆಯಿಂದ ಕೋಟ್ಯಾಂತರ ರೂಪಾಯಿ ವೆಚ್ಚದ ಯೋಜನೆ ಜನತೆಗೆ ಅನುಕೂಲವಾಗದೆ ಹೋಗುತ್ತಿದೆ ಎಂದು ಮಹಾಂತಗೌಡ ಅವರು ದೂರಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿದ ಅವರು, “ಒಂದು ವೇಳೆ ಈ ಅಕ್ರಮತೆಗಳು ಸರಿಪಡಿಸಲಾಗದಿದ್ದರೆ, ಯಡ್ರಾಮಿ ತಾಲೂಕಿನ ಗ್ರಾಮಸ್ಥರೊಂದಿಗೆ ತಾಲೂಕು ಪಂಚಾಯತ್ ಕಚೇರಿ ಎದುರು ಮುತ್ತಿಗೆ ಹಾಕಿ ಉಗ್ರ ಹೋರಾಟ ನಡೆಸಲಾಗುವುದು,” ಎಂದು ಎಚ್ಚರಿಸಿದ್ದಾರೆ.