ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಗರ ಯುವ ಘಟಕ ಪದಾಧಿಕಾರಿಗಳ ಆಯ್ಕೆ

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ನಗರ ಯುವ ಘಟಕ ಪದಾಧಿಕಾರಿಗಳ ಆಯ್ಕೆ
ಕಲಬುರಗಿ: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಅಧ್ಯಕ್ಷ ಶರಣಕುಮಾರ ಮೋದಿ, ಪ್ರಧಾನ ಕಾರ್ಯದರ್ಶಿ ಸೋಮಶೇಖರ ಹಿರೇಮಠ ಹಾಗೂ ಜಿಲ್ಲಾ ಯುವ ಘಟಕ ಅಧ್ಯಕ್ಷ ಉದಯ ಪಾಟೀಲ ಅವರ ಆದೇಶದ ಮೇರೆಗೆ ಕಲಬುರಗಿ ನಗರ ಯುವ ಘಟಕದ ೨೦೨೪-೨೯ನೇ ಅವಧಿಯ ಹೊಸ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ನಗರ ಘಟಕದ ಅಧ್ಯಕ್ಷ ಶಾಂತರೆಡ್ಡಿ ಪೇಠಶಿರೂರ ತಿಳಿಸಿದ್ದಾರೆ.
ಹೊಸದಾಗಿ ಆಯ್ಕೆಯಾದ ಪದಾಧಿಕಾರಿಗಳ ವಿವರ ಹೀಗಿದೆ: ದತ್ತು ಪಾಟೀಲ ಗೌಡಗೌಂವ, ಮಂಜುನಾಥ ಕಾಳೆ, ಸಂತೋಷ ನಂದ್ಯಳ, ಸಿದ್ದು ತುಪ್ಪದ, ಮಂಜುನಾಥ ಜೆ.ಹುಲಿ, ಪ್ರಶಾಂತ ರೆಡ್ಡಿ ಮತ್ತು ಸಚಿನ್ ನಂದ್ಯಳ ಅವರು ಉಪಾಧ್ಯಕ್ಷರಾಗಿ, ಶರಣಪ್ಪ ಅವಂಟಿಗಿ ಉಪಾಧ್ಯಕ್ಷರಾಗಿ, ಲಿಂಗರಾಜ ಈಶ್ವರಪ್ಪ ಭಾವಿಕಟ್ಟಿ ಪ್ರಧಾನ ಕಾರ್ಯದರ್ಶಿಯಾಗಿ, ಪ್ರಭವ ಕೆ.ಪಟ್ಟಣಕರ್ ಕಾರ್ಯದರ್ಶಿಯಾಗಿ, ಮಹಾಂತೇಶ್ ರೋಜೆ ಸಂಘಟನಾ ಕಾರ್ಯದರ್ಶಿಯಾಗಿ, ಮಹಾದೇವ ಶಹಾಬಾದಿ ಸಹ ಕಾರ್ಯದರ್ಶಿಯಾಗಿ ಹಾಗೂ ಮಂಜುನಾಥ ಅಣಕಲ್ ಖಜಾಂಚಿಯಾಗಿ ನೇಮಕಗೊಂಡಿದ್ದಾರೆ.
ಈ ಸಂದರ್ಭ ಸಮಾಜದ ಹಲವು ಮುಖಂಡರು ಉಪಸ್ಥಿತರಿದ್ದು, ನೂತನ ಪದಾಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.