ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೮ನೇ ಜಯಂತಿ ವಿಜೃಂಭಣೆಯಿಂದ ಆಚರಣೆ

ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೮ನೇ ಜಯಂತಿ ವಿಜೃಂಭಣೆಯಿಂದ ಆಚರಣೆ

ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೮ನೇ ಜಯಂತಿ ವಿಜೃಂಭಣೆಯಿಂದ ಚಿಂಚೋಳಿಯಲ್ಲಿ  ಆಚರಣೆ 

ಚಿಂಚೋಳಿ, ಏಪ್ರಿಲ್ ೧: ತ್ರಿವಿಧ ದಾಸೋಹಿ ಶ್ರೀ ಶಿವಕುಮಾರ ಸ್ವಾಮೀಜಿಯವರ ೧೧೮ನೇ ಜಯಂತಿ ಇಂದು ಚಿಂಚೋಳಿಯ ಕನ್ನಡ ಭವನದಲ್ಲಿ ಅದ್ಧೂರಿಯಾಗಿ ಆಚರಿಸಲಾಯಿತು. ಕಾರ್ಯಕ್ರಮವನ್ನು ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಚಿಂಚೋಳಿ ಶಾಖೆಯ ಅಧ್ಯಕ್ಷ ಸುರೇಶ್ ದೇಶಪಾಂಡೆ ಅವರ ಅಧ್ಯಕ್ಷತೆಯಲ್ಲಿ ಹಮ್ಮಿಕೊಳ್ಳಲಾಗಿತ್ತು.  

ಈ ಸಂದರ್ಭದಲ್ಲಿ ಕಸಾಪ ಕೋಶ್ಯಾಧ್ಯಕ್ಷ ಶಶಿಕಾಂತ್ ಆಡಿಕಿ, ಪದಾಧಿಕಾರಿಗಳಾದ ಗಣಪತಿ ದೇವಕತೆ, ಬಸವರಾಜ್ ಬೇಲೂರು, ರೈತ ಮುಖಂಡ ವೀರಣ್ಣ ಗಂಗಾನೆ, ಶ್ರೀಗಳ ಪರಮ ಭಕ್ತ ಶಿವಪ್ರಸಾದ್ ಪಿ.ಜಿ., ಸುರೇಶ್ ವಾಲಿಕಾರ್ ಹಾಗೂ ಶಿಕ್ಷಣ ಇಲಾಖೆಯ ನಾಗೇಶ್ ದುತರಗ ಉಪಸ್ಥಿತರಿದ್ದರು.  

ಕಾರ್ಯಕ್ರಮದಲ್ಲಿ ಶ್ರೀ ಶಿವಕುಮಾರ ಸ್ವಾಮೀಜಿಯವರ ಸೇವಾ ಪರಂಪರೆ, ದಾಸೋಹ ತತ್ತ್ವ ಮತ್ತು ಅವರ ಸಮಾಜ ಸೇವೆಯ ಬಗ್ಗೆ ವಕ್ತಾರರು ವಿವರಣೆ ನೀಡಿದರು. ಅವರನ್ನು ಅನುಸರಿಸುವ ಮೂಲಕ ಸಮಾಜಮುಖಿ ಸೇವೆ ಮಾಡಲು ಹಾಜರಿದ್ದ ಭಕ್ತರಿಗೆ ಕರೆ ನೀಡಲಾಯಿತು.  

-KKP News ಕಲಬುರಗಿ