"ಧರ್ಮದ ಹೆಸರಿನಲ್ಲಿ ಅಮಾಯಕರ ರಕ್ತಪಾತ – ಪಹಲ್ಗಾಂ ಮತ್ತೆ ಒಂದು ಮಾನವೀಯ ದುರಂತ!"

"ಧರ್ಮದ ಹೆಸರಿನಲ್ಲಿ ಅಮಾಯಕರ ರಕ್ತಪಾತ – ಪಹಲ್ಗಾಂ ಮತ್ತೆ ಒಂದು ಮಾನವೀಯ ದುರಂತ!"

"ಪಹಲ್ಗಾಮ್ ದಾಳಿ 22.04.2025...ಧಾರ್ಮಂಧರಿಂದ ಧರ್ಮ ರಕ್ಷಣೆ ಸಾಧ್ಯವೇ"

ಯಾವ ಧರ್ಮ ಹೇಳುತ್ತೆ ಹೇಳಿ? ನೆಲ ಜಲಕ್ಕಾಗಿ 

ಧರ್ಮದ ಹೆಸರಿನಲ್ಲಿ ಅಮಾಯಕ ಹಿಂದೂಗಳನ್ನು ಕೊಲೆ ಮಾಡಿ ಅಟ್ಟಹಾಸ ಮೆರೆದಿದ್ದು .

ಇದಕ್ಕೆ ಕೊನೆ ಆಗಬೇಕಾದರೆ ಜಮ್ಮು ಕಾಶ್ಮೀರದ ಮನೆ ಮನೆಯ ಪ್ರತಿ ವ್ಯಕ್ತಿಯು ಆತಂಕವಾದಿಗಳ ಹುಟ್ಟಡಗಿಸಲು ಹೆಗಲಿಗೆ ಹೆಗಲು ಕೊಟ್ಟು ಗಟ್ಟಿಯಾಗಿ ನಿಲ್ಲಬೇಕು.

ವಿಪರ್ಯಾಸ ಎಂದರೆ ಪಾಕಿಸ್ತಾನ ದಿಂದ ಅವರಿಗೆ ತರಬೇತಿ ನೀಡಿ ವ್ಯವಸ್ಥೆ ಕಲ್ಪಿಸಿ ಕೊಡುವುದು. ಹಾಗೂ ಕಾಶ್ಮೀರದಲ್ಲಿ ವಾಸ್ತವ್ಯಕ್ಕೆ ಅವಕಾಶ ಮಾಡಿಕೊಡುವುದು ಹಾಗೂ ಜಮ್ಮು ಕಾಶ್ಮೀರದಲ್ಲಿ ಅವರಿಗೆ ಅವಕಾಶ ಮಾಡಿಕೊಡುವುದು ದುರ್ದೈವ.

ಯಾವ ಧರ್ಮ ಕೊಡ ಹೇಳಿಕೊಡುವುದಿಲ್ಲ ನೆಲ ಜಲಕ್ಕಾಗಿ ಅಮಾಯಕರನ್ನು ಕೊಲೆ ಮಾಡುವುದು ಯಾವ ಧರ್ಮದಲ್ಲಿಯೂ ಕೂಡ ಬರೆದಿಲ್ಲ.

ಧರ್ಮಗಳು ನ್ಯಾಯ ನೀತಿ ಶಾಂತಿ ಸತ್ಯ ಸಹಬಾಳೆ ಅದರಲ್ಲೂ ಸರ್ವ ಧರ್ಮ ಸಹಿಷ್ಣುತೆಯ ಆಧಾರದ ಮೇಲೆ ನಿಂತಿವೆ.

ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ನ 22.04.2025 ರಂದು ನಡೆದ ದಾಳಿಯಲ್ಲಿ ಆಗಿದ್ದು ಧರ್ಮದ ಹೆಸರಿನಲ್ಲಿ ಕೊಲೆ. "ಧರ್ಮೋ ರಕ್ಷತಿ ರಕ್ಷಿತಃ... ಅಯ್ಯೊ ಇದರ ತದ್ವಿರುದ್ಧ ಆಗಿದೆ...

ಪಹಲ್ಗಾಂ ದಾಳಿಯ ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲಿದು.... ಯಾರು ಗೊತ್ತೆ ?

 ಈತನ ರಾಷ್ಟ್ರೀಯತೆ ಭಾರತೀಯ ಪಕ್ಕಾ ಹಿಂದುಸ್ತಾನಿ. ಇವನ ಮಾರ್ಗದರ್ಶನದಲ್ಲಿ ತರಬೇತು ಪಡೆದು ತನ್ನ ಜನ್ಮ ಭೂಮಿಯಲ್ಲಿ ಯೆ ತನ್ನ ದೇಶದ ಪ್ರಜೆಯನ್ನು ನೆಲ ಜಲಕ್ಕಾಗಿ ಧರ್ಮದ ಹೆಸರಲ್ಲಿ , ಯುವಕರಿಗೆ ತರಬೇತಿ ನೀಡಿ ಆತಂಕ ಸೃಷ್ಟಿ ಮಾಡುತ್ತಿರುವ ಆತಂಕಿ ಇವನು.

ನೋಡಿ 

4 ಆತಂಕಿಗಳಲ್ಲಿ ಇಬ್ಬರು ಕಾಶ್ಮೀರದವರು 

ಆದಿಲ್ ಅಹಮದ್  ,ಆಶಿಫ್ ಶೇಕ್ ,ಅಬ್ದುಲ್ ತಲಹಾ ಜಮಾತೆ ಊತಾವಾ ಹಾಗೂ ಸುಲೇಮಾನ್ 

ಇವರು ಅನೇಕ ದಿನಗಳಿಂದ ಕಾಶ್ಮೀರದಲ್ಲಿ ವಾಸ್ತವ್ಯ ಹೂಡಿದ್ದು ನಮ್ಮ ಇಂಟೆಲಿಜೆನ್ಸಿ ಬ್ಯುರೋ ಗೆ ಗೊತ್ತಿದ್ದ ವಿಷಯವಂತ್ತೆ ,ಹಿಂದೆ ಚಕ್ರವರ್ತಿ ಸೂಲಿ ಬೆಲೆ ಅವರು ಕೂಡ ಜಮ್ಮು ಕಾಶ್ಮೀರಕ್ಕೆ ಹೋಗಿದ್ದಾಗ ಆತಂಕಗಳ ಸಂಚಿನ ಬಗ್ಗೆ ಸುಳಿವು ಸಿಕ್ಕಿದೆ ಎಂಬ ಸಂದೇಶ ಹೇಳಿದ್ದಾರಂತೆ ಎಂಬ ವಿಷಯ ತಿಳಿಸಿದರು ಖುದ್ದಾಗಿ ಸುಲಿ ಬೇಲಿ ಹೇಳಿಕೆ ನೀಡಿದ್ದಾರೆ.

ಆದರೂ ಸರಕಾರ ಎಚ್ಚರಿಕೆ ಕ್ರಮ ವಹಿಸುವಲ್ಲಿ ಯಾಕೆ ಎಡವಿದೆ ಗೊತ್ತಿಲ್ಲ.ಇವರು  ಅನೇಕ ದಿನಗಳಿಂದ ಕಾಶ್ಮೀರದಲ್ಲಿ ಓಡಾಡುತ್ತಿದ್ದರು.ದಾಳಿಯ ಸಮಯಕ್ಕೂ ಮುಂಚೆ ಇವರು ಜನರ ಎದುರಿಗೆ ಬಂದಿದ್ದು ಕೆಮೋ ಪ್ಲಾಝ್ ಉಡುಪು ಧರಿಸಿ ಎ ಕೆ 47 ನೊಂದಿಗೆ ಬಂದಿದ್ದು.

ಅಮಾಯಕ ಪ್ರವಾಸಿಗರು ಇವರು ನಮ್ಮ ಸೈನಿಕರೆಂದು ಭಾವಿಸಿದ್ದರು.

ಸಾಮಾನ್ಯವಾಗಿ ಪ್ರವಾಸಿ ತಾಣಗಳಲ್ಲಿ ಗೆಳೆಯರೊಂದಿಗೆ ತಮ್ಮ ಕುಟುಂಬಸ್ಥರೊಂದಿಗೆ ಕಾಶ್ಮೀರದ ನಿಸರ್ಗದ ಸವಿಯನ್ನು ಅನುಭವಿಸುತ್ತಿದ್ದ ಪ್ರವಾಸಿಗರಿಗೆ ಒಮ್ಮೆಲೆ ಗುಂಡಿನ ಸದ್ದು ಕೇಳಿ ಬಂತು.. ಏನು ಅರಿಯದ ಪ್ರವಾಸಿಗರ ಹತ್ತಿರ ಒಮ್ಮೆಲೆ ಬಂದುಕುದಾರಿಗಳು ಬಂದು

ಪುರುಷರನ್ನು, ಮಹಿಳೆ ಮಕ್ಕಳನ್ನು ಬೇರ್ಪಡಿಸಿ..... ಪುರುಷರಿಗೆ ಗುರಿ ಮಾಡಿ ನೀನು ಯಾವ ಜಾತಿಯವನು ನಿನ್ನ ಧರ್ಮ ಯಾವುದು, ನೀನು ಕಲ್ಮ ಓದು.... ಎನ್ನುತ್ತಿರುವಾಗ ಭಯಭಿತರಾದ 

 ಪ್ರವಾಸಿಗರು ಏನು ಹೇಳದೆ ಇದ್ದಾಗ ಅವರ ಬಟ್ಟೆಗಳನ್ನು ಬಿಚ್ಚಿ ಇವರು ಹಿಂದು ವೊ,ಮುಸ್ಲಿಂ ಅನ್ನೋದಕ್ಕೆ ಖಾತರಿ ಪಡಿಸಿ ಕೊಳ್ಳಳ್ಳಿಕ್ಕೆ ಹೀಗೆ ಮಾಡಿದ್ದು ಅತ್ಯಂತ ಹೀನಾಯ ಸಂಗತಿ. ಯಾವ ಧರ್ಮವು ಈ ರೀತಿಯ ಪಾಠ ಕಲಿಸುವುದಿಲ್ಲ. ಆದರೆ ಇವರು ಮಾಡಿದ ನಾಚಿಕೆಗೇಡಿ ಕೆಲಸಕ್ಕೆ ಮುಸ್ಲಿಂ ಧರ್ಮಕ್ಕೆ ಧಕ್ಕೆ ಆಗುವುದು ಸಹಜ ಹಾಗೂ ಮುಜುಗರದ ಸಂಗತಿಯೂ ಕೂಡ ಹೌದು. 

ಇವರು ಪಾಸ್ತುನಿ ಭಾಷೆಯಲ್ಲಿ ಮಾತನಾಡುತ್ತಿದ್ದರು, ಈ ಭಾಷೆಯು ಆಫ್ಘಾನಿಸ್ತಾನ್ ಹಾಗೂ ಪಾಕಿಸ್ತಾನದಲ್ಲಿ ಆಡುತ್ತಾರೆ. ಇದರ ಅರ್ಥ, ಪಾಕಿಸ್ತಾನದಿಂದ ಬಂದವರು ಪಾಕಿಸ್ತಾನದಲ್ಲಿ ತರಬೇತಿ ಪಡೆದಿದ್ದಾರೆ.

ಪಾಕಿಸ್ತಾನಿಗಳಿಗೆ ಬುದ್ಧಿ ಬರುವುದು ಯಾವಾಗ?

27 ಜೀವಗಳ ಬಲಿ. ಇನ್ನು ಎಷ್ಟು ಸಾವು ನೋವುಗಳಾಗಿವೆ? 

ಹೈದರಾಬಾದಿನ ಇಂಟಲಿಜೆನ್ಸಿಜೆನ್ಸಿ ಬ್ಯುರೋ ಮನೀಶ್ ನಂದನ್ ಸಾವು.6 ದಿನಗಳ ಹಿಂದೆಯೇ ಮದುವೆಯಾದ ವಿನಯ್ ನರವಾಳ್.

ನಮ್ಮ ಶಿವಮೊಗ್ಗದ ಉದ್ಯಮಿ ಮಂಜುನಾಥ್ 

ತನ್ನ ಮಗುವಿನೊಂದಿಗೆ ಅವಿತು ಕೂತ್ತಿದ್ದ ಭಾರತ್ ಹೀಗೆ 27 ಅಮಾಯಕರನ್ನು ಕೊಲೆ ಮಾಡಲಾಗಿದೆ.

ಧರ್ಮದ ಹೆಸರಿನಲ್ಲಿ ನಡೆದ ಕೊಲೆಯನ್ನು ನೋಡಿದಾಗ ನನಗೆ ಅಜ್ಜಿ ಹೇಳಿದ ಕಥೆ ನೆನಪಾಗುತ್ತದೆ, ಭಾರತ ಸ್ವಾತಂತ್ರ್ಯವಾದ ಆರಂಭದಲ್ಲಿ ಕಲ್ಯಾಣ ಕರ್ನಾಟಕಕ್ಕೆ ಸ್ವತಂತ್ರ ಸಿಕ್ಕಿರಲಿಲ್ಲ, ಆಗ ಇಲ್ಲಿ ರಜಾಕಾರರ ಅಟ್ಟಹಾಸ ಇತ್ತು. ರಜಾಕಾರರು ಕೂಡ ಧರ್ಮದ ಹೆಸರಿನಲ್ಲಿ ದಾಳಿ ಮಾಡಿದ್ದು ನಮ್ಮ ಹಿರಿಯರು ಇವತ್ತಿಗೂ ಹೇಳುತ್ತಾರೆ.

ಭಾರತ ದೇಶ ಸ್ವತಂತ್ರವಾದರೂ 

ಕೂಡ ಹೈದರಾಬಾದ್ ಹಾಗೂ ಕಲ್ಯಾಣ ಕರ್ನಾಟಕ ಪ್ರದೇಶಗಳಲ್ಲಿ ನಿಜಾಮರ ಆಳ್ವಿಕೆ ಇನ್ನು ಮುಂದುವರೆದಿತ್ತು. ಹೈದರಾಬಾದ್ ಕಲ್ಯಾಣ ಕರ್ನಾಟಕದಲ್ಲಿ ಗಟ್ಟಿಯಾಗಿ ನೆಲೆಯೂರಿದ ರಜಾಕಾರರು ಹಿಂದುಗಳ ಮಾರಣ ಹೋಮ ಮಾಡುತ್ತಿದ್ದರು. ಕಂಡ ಕಂಡಲ್ಲಿ ಹಿಂದು ಜನರನ್ನು ಕೊಲೆಗಯುತಿದ್ದರು. ಹಿಂದು ಜನರು ಭಯ ಭೀತರಾಗಿ ಸ್ವತಂತ್ರವಾಗಿ ಓಡಾಡು ಹಾಗೆ ಇರಲಿಲ್ಲ. 

ಹಣೆಯ ಮೇಲೆ ಕುಂಕುಮ, ಹಣಚ್ಚಿ ಬೊಟ್ಟು ಅಂದರೆ ಹಣೆಯ ಮೇಲೆ ಟ್ಯಾಟೂ ಹಾಗೂ ದೇವರ ನಾಮ ಹಾಗೂ ಹಣೆಯ ಮೇಲೆ ಬಟ್ಟು ಇರುವ ಹಾಗೂ ತಲೆಯ ಮೇಲೆ ಜುಟ್ಟು ಇರುವ ಹಿಂದೂ ಜನರನ್ನು ಮನಬಂದಂತೆ ಥಳಿಸಿ ಕೊಲೆಗಯುತಿದ್ದರು. ಅದರಲ್ಲಿಯೂ ಗರ್ಭಿಣಿ ಹಿಂದು ಸ್ತ್ರೀ ಯರನ್ನು ಅತ್ಯಾಚಾರ ಮಾಡಿ ಅವರ ಕೊಲೆಗಯುತಿದ್ದರು, ಪುರುಷರ ವರ್ಮಾಂಗವನ್ನು ಕತ್ತರಿಸುತ್ತಿದ್ದರಂತ್ತೆ,ಇವರ ಉದ್ದೇಶ ಇವರ ಧರ್ಮವನ್ನು ಸ್ವೀಕರಿಸುವುದು ಹಾಗೂ ನೆಲ ಜಲದ ಮೇಲೆ ಇವರ ಹಿಡಿತ ಹಾಗೂ ಪ್ರಭುತ್ವ ಸಾಧಿಸುವುದಾಗಿತ್ತು. 

ಪಾಕಿಸ್ತಾನ ಅತಿ ಚಿಕ್ಕ ದೇಶ, ಆತಂಕಿಗಳಿಗೆ ರಕ್ಷಣೆ ನೀಡಿ ಕುಂಮ್ಮಕ್ಕೂ ಕೊಡುತ್ತಿರುವುದು ಬೇಸರದ ಸಂಗತಿ. 

ಪಹಲ್ಗಾಂ ದಾಳಿ ಕೂಡ ಜನರಲ್ಲಿ ತುಂಬಾ ಭಯ ಹುಟ್ಟಿಸಿದೆ.

ಇವರನ್ನು ಹೀಗೆ ಬಿಡಬಾರದು ಭಾರತ ಸರಕಾರ ಆತಂಕಿಗಳ ನೆಲೆಬೀಡು ಹಾಗೂ ಇವರಿಗೆ ರಕ್ಷಣೆ ಕೊಟ್ಟು ಸಹಕರಿಸುತ್ತಿರುವ ದೇಶಗಳಲ್ಲಿ ನಮ್ಮ ಭಾರತೀಯ ಸೈನ್ಯವನ್ನು ಮುನ್ನುಗ್ಗಿಸಿ , ಸರ್ಜಿಕಲ್ ಸ್ಟ್ರೈಕ್ ಮಾಡಿ ಇವರನ್ನು ಧ್ವಂಸಗೊಳಿಸಬೇಕು. ನಮ್ಮ ಸೈನಿಕರು ಯಾರಿಗೂ ಕಮ್ಮಿ ಇಲ್ಲ..... ನಮ್ಮ ಸರಕಾರ ತುರ್ತು ಸಭೆ ಕರೆದಿದ್ದು ,ತುರ್ತಾಗಿ ಇವರಿಗೆ ಪಾಠ ಕಲಿಸಬೇಕು..... ದಾಳಿಯಲ್ಲಿ ಬಲಿಯಾದವರ ಆತ್ಮಕ್ಕೆ ಶಾಂತಿ ಸಿಗಲಿ ಅವರ ಕುಟುಂಬ ವರ್ಗದವರಿಗೆ ಅವರ ದೇವರು ಧೈರ್ಯ ಕೊಡಲಿ, ಹಾಗೂ ಗಾಯವಾದ ನಮ್ಮ ಬಂಧುಗಳಿಗೆ ಗುಣಮುಖವಾಗಲಿ..... ಹೆದರಬೇಡಿ ಭಾರತಮಾತೆಯ ವೀರ ಸೈನಿಕರು ಗಟ್ಟಿಯಾಗಿದ್ದಾರೆ.. ಇದರ ಪ್ರತಿಕಾರ ತೀರಿಸಿಕೊಳ್ಳುತ್ತಾರೆ...

ಜಮ್ಮು ಕಾಶ್ಮೀರದಲ್ಲಿ ಮತ್ತೆ ಶಾಂತಿ ನೆಲಸಲಿ....

ಲೇಖಕರು -ನಂದಿನಿ ಸುರೇಂದ್ರ ಸನಬಾಳ್ ಕಲಬುರಗಿ.....