ಬ್ರಹ್ಮಾಂಡ ವೀಕ್ಷಿಸಿದ ಮಕ್ಕಳು ಹೆಳಿದ್ದೇನು....!

ಬ್ರಹ್ಮಾಂಡ ವೀಕ್ಷಿಸಿದ ಮಕ್ಕಳು ಹೆಳಿದ್ದೇನು....!

ಬಹಳ ದಿನಗಳ ನಂತರ ಜಿಲ್ಲಾ ವಿಜ್ಞಾನ ಕೇಂದ್ರಕ್ಕೆ ನಾನು ಮತ್ತು ಶ್ರೀರಕ್ಷಾ (5th standerd) ಹೋಗಿದ್ದೆವು. ಅಲ್ಲೆ ಇದ್ದ ಆತ್ಮೀಯ ಸ್ನೇಹಿತ ಶ್ರೀ ಲಕ್ಷ್ಮಣಜಿ ಅವರು ಪ್ರತಿಯೊಂದನ್ನು ವಿವರಿಸಿ ಹೇಳಿದರು. ಡೈನೋಸಾರಸನ ವಿವಿಧ ಪ್ರಭೇದಗಳನ್ನು ಪರಿಚಯಿಸಿದರು.ಅಲ್ಲಿಂದ ತಾರಮಂಡಲ ವೀಕ್ಷಣೆಗೆ ಹೊರಟೆವು ತರಮಂಡಲದಲ್ಲಿ "wonder of the Universe" ವೀಕ್ಷಿಸಿದೆವು 12 billion ವರ್ಷಗಳ ಹಿಂದೆ ಬ್ರಹ್ಮಾಂಡದ ಉಗಮ ನಕ್ಷತ್ರ ಪುಂಜಗಳ ತಿಕ್ಕಾಟ ವಿವಿಧ ಅನಿಲಗಳಿಂದ ನಕ್ಷತ್ರ ಗಳ ರೂಪಗೊಳ್ಳುವಿಕೆ. ಮಿಲ್ಕಿ ಗ್ಯಾಲಾಕ್ಸಿಯ ಲಕ್ಷಾಂತರ ನಕ್ಷತ್ರಗಳಲ್ಲಿ ನಮ್ಮ ಸೂರ್ಯನು ಒಂದು.4.6ಬಿಲಿ ಯನ್ ವರ್ಷಗಳ ಹಿಂದೆ ಭೂಮಿಯ ಉಗಮ ಜೀವಿಗಳು ಜೀವಿಸಲು ಯೋಗ್ಯವಾದ ಏಕೈಕ ಸ್ಥಾನ. ಇಡಿ ಬ್ರಹ್ಮಾಂಡದಲ್ಲಿ ನಮ್ಮನ್ನು (ಭೂಮಿ) ಬಿಟ್ಟು ಅನ್ಯ ಗ್ರಹ ಜೀವಿಗಳ ಅನ್ವೇಷಣೆಯ(ಯಾರಾದರೂ ಇದ್ದೀರಾ?) ಕುತೂಹಲ, ಜಿಜ್ಞಾಸೆ ಹಾರುವ ತಟ್ಟೆಗಳ (flying Saucers ) ಪರಿಚಯ ಜೇಮ್ಸ್ & ಹಬಲ್ ದೂರದರ್ಶಕಗಳ ಚಿತ್ರಗಳು ಜೊತೆಗೆ ಸೌರ ಮಂಡಳದ ಇನ್ನಿತರ ಗ್ರಹಗಳ ವಿಶ್ಲೇಷಣೆ ನೋಡಿ ನಾನು ಜೀವಿಸುವ ಭೂಮಿ ಎಷ್ಟು ಸುಂದರ ಎಂದು ಮನದಲ್ಲಿ ಮೂಡಿತು

ಸಂಗಮೇಶ ಎಸ್ ಹಿರೇಮಠ