ಬಸವ ಜಯಂತಿ ಏ. 30ಕ್ಕೆ : ಅರ್ಥಪೂರ್ಣವಾಗಿ ಜರುಗಿಸಲು ತಾಲೂಕ ಆಡಳಿತ ಸಜ್ಜು:ತಹಸೀಲ್ದಾರ್

ಬಸವ ಜಯಂತಿ ಏ. 30ಕ್ಕೆ : ಅರ್ಥಪೂರ್ಣವಾಗಿ ಜರುಗಿಸಲು ತಾಲೂಕ ಆಡಳಿತ ಸಜ್ಜು:ತಹಸೀಲ್ದಾರ್ 

ಚಿಂಚೋಳಿ : ವಿಶ್ವಗುರು ಬಸವಣ್ಣನವರು ಕೊಟ್ಟ ಭೀಕ್ಷೆಯಿಂದಲೇ ನಾವೆಲ್ಲ ಕುಳಿತುಕೊಳಲಿಕೆ ಸಾಧ್ಯವಾಗಿದೆ. ಬಸವಣ್ಣನವರು ಬದುಕುವ ಮಾರ್ಗ ತೋರಿಸಿರುವ ಮಹಾನಾಯಕ ಎಂದು ಗ್ರೇಡ್ 1 ತಹಸೀಲ್ದಾರ ಸುಬ್ಬಣ್ಣ ಜಮಖಂಡಿ ಅವರು ಹೇಳಿದರು. 

ತಾಲೂಕ ಆಡಳಿತ ಸೌಧ ತಹಸೀಲ್ ಕಾರ್ಯಾಲಯದಲ್ಲಿ ಏ. 30 ರಂದು ಜರಗುವ 892ನೇ ಬಸವ ಜಯಂತಿಯ ಅಂಗವಾಗಿ ಪೂರ್ವಭಾವಿ ಸಭೆ ನಡೆಸಿ,ಮಾತನಾಡಿದರು. 

ಸಂವಿಧಾನ ಜಾರಿ ಆಗುವ ಪೂರ್ವದಲ್ಲಿ ಬಸವಣ್ಣನವರ ವಚನಗಳೇ ನಮಗೆ ಸಂವಿಧಾನವಾಗಿತ್ತು. ಹೀಗಾಗಿ ಬಸವಣ್ಣನವರ ಜಯಂತಿ ತಾಲೂಕ ಆಡಳಿತ ಅರ್ಥಪೂರ್ಣವಾಗಿ ಜರುಗಿಸಲು ಕ್ರಮಕೈಗೊಳಲಿದೆ. ತಾಲೂಕ ಮಟ್ಟದ ಅಧಿಕಾರಿಗಳು ಬಸವಣ್ಣನವರ ಜಯಂತಿ ಆಚರಣೆ ಕಡ್ಡಾಯ ಆಚರಿಸಿಕೊಂಡು ತಾಲೂಕ ಆಡಳಿತದಿಂದ ನಡೆಯುವ ಜಯಂತಿ ಕಾರ್ಯಕ್ರಮದಲ್ಲಿ ತಪ್ಪದೇ ಕಡ್ಡಾಯವಾಗಿ ಇಲಾಖೆ ಎಲ್ಲಾ ಸಿಬ್ಬಂದಿಗಳು ಭಾಗವಹಿಸಿಬೇಕು. ಸರಕಾರಿ ಶಾಲೆ-ಕಾಲೇಜುಗಳು ಹಾಗೂ ಅಂಗನವಾಡಿ ಕೇಂದ್ರಗಳಲ್ಲಿಯೂ ಕೂಡ ಜಯಂತಿ ಆಚರಣೆ ನಡೆಯಬೇಕು. ಶಾಲೆಗಳಿಗೆ ರಜೆ ಇದೆ, ಮಕ್ಕಳಿಲಿಲ್ಲ ಎಂಬ ಕುಂಟು ನೆಪ ಹೇಳುವಂತಿಲ್ಲ. ಜಯಂತಿ ಆಚರಿಸದೇ ಮತ್ತು ಭಾಗವಹಿಸದೇ ಇರುವಂತಹ ಪ್ರಕರಣಗಳು ಗಮನಕ್ಕೆ ಬಂದರೆ ಶಿಸ್ತು ಕ್ರಮಕ್ಕಾಗಿ ಜಿಲ್ಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಲಾಗುತ್ತದೆ ಎಂದರು. 

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾ ಸಭಾ ತಾಲೂಕ ಅಧ್ಯಕ್ಷ ಶರಣು ಪಾಟೀಲ ಮೋತಕಪಳ್ಳಿ ಅವರು ಮಾತನಾಡಿ, ಬಸವೇಶ್ವರರನ್ನು ಸರಕಾರ ಸಾಂಸ್ಕೃತಿಕ ನಾಯಕನೆಂದು ಘೋಷಣೆ ಮಾಡಿದೆ. ಆದರೆ ಬಸವಣ್ಣನ ಜಯಂತಿ ಪೂರ್ವಭಾವಿ ಸಭೆಗೆ ಅಧಿಕಾರಿಗಳು ಹಾಜರಾಗದೆ, ಸರಕಾರಕ್ಕೆ ಕಪ್ಪು ಚುಕ್ಕೆ ತರುವಂತಹ ಕೆಲಸ ಚಿಂಚೋಳಿಯಲ್ಲಿ ಆಗುತ್ತಿದೆ ಎಂದು ಖಂಡನೆ ವ್ಯಕ್ತಪಡಿಸಿದರು. ಅಧಿಕಾರಿಗಳು ಯಾವುದೇ ಮಹಾಪುರುಷರ ಜಯಂತಿಗಳನ್ನು ತಾತ್ಸರ ಮನೋಭಾವನೆಯಿಂದ ನೋಡದೆ ಸರಕಾರದ ಆದೇಶ ಚಾಚುತಪ್ಪದೆ ಪಾಲಿಸಿಕೊಂಡು ಜಯಂತಿಗಳು ಅರ್ಥ ಪೂರ್ಣವಾಗಿ ಜರಗುವಂತೆ ಆಡಳಿತ ಕ್ರಮಕೈಗೊಳಬೇಕೆಂದರು. ಇನ್ನೂ ಸಮಾಜದ ಹೆಸರಿನ ಮೇಲೆ ಕೆಲವರು ಹಣ ವಸೂಲಿ ಮಾಡುವ ಕೆಲಸ ಮಾಡುತ್ತಿರುವುದು ಗಮನಕ್ಕೆ ಬಂದಿದ್ದು, ಸಮಾಜದ ಅಧ್ಯಕ್ಷ ಎಂದು ಹೆಸರು ಬಳಸಿಕೊಂಡು ಹಣ ವಸೂಲಿಗೆ ಬರುವ ವ್ಯಕ್ತಿಗಳ ಬಗ್ಗೆ ಅಧಿಕಾರಿಗಳು ಎಚ್ಚರ ವಹಿಸಬೇಕೆಂದು ಸಮಾಜ ತಹಸೀಲ್ದಾರರ ಸಮ್ಮುಖದಲ್ಲಿ ಎಲ್ಲಾ ಅಧಿಕಾರಿಗಳ ಗಮನಕ್ಕೆ ಅಧ್ಯಕ್ಷ ಶರಣು ಪಾಟೀಲ ತಂದರು.

ಈ ಸಂದರ್ಭದಲ್ಲಿ ಇಒ ಶಂಕರ ರಾಠೋಡ್, ಡಾ. ಗಫಾರ, ಅನುಸೂಯ ಚವ್ಹಾಣ, ಪ್ರಭುಲಿಂಗ್ ವಾಲಿ, ವೀರಶೆಟ್ಟಿ ರಾಠೋಡ್, ಮಲ್ಲಿಕಾರ್ಜುನ್, ನವಾಬ್, ಪರಿಮಳ, ಬಸವಣ್ಣಪ್ಪ ಪಾಟೀಲ್ ಹುಡುದಳ್ಳಿ, ಸುಭಾಷ ಸಿಳ್ಳಿನ, ಮಲ್ಲಿಕಾರ್ಜುನ ಪಾಲಾಮೂರ್, ಬಸವರಾಜ ಐನೋಳಿ, ದಂಡಿನಕುಮಾರ, ನೀಲಕಂಠ ಸಿಳ್ಳಿನ, ಸೋಮಶೇಖರ ಹುಲಿ, ಶಿವು ಸ್ವಾಮಿ, ಶಾಂತು ಯಂಪಳ್ಳಿ, ಸುಭಾಶ ಚಂದ್ರ ಪಾಟೀಲ್, ಚಿತ್ರಶೇಖರ ಪಾಟೀಲ್, ಸೂರ್ಯಕಾಂತ ಚೆನ್ನೂರ್ ಹುಲಿ, ಮಲ್ಲಿಕಾರ್ಜುನ ಸ್ವಾಮಿ, ಸಂತೋಷ ಗಡಂತಿ, ರಾಜು ಮುಸ್ತರಿ ಅವರು ಸೇರಿದಂತೆ ಸಮಾಜದ ಮುಖಂಡರು ಉಪಸ್ಥಿತರಿದ್ದರು.