ಪುರುಷಾರ್ಥ ಸಾಧನೆಗೆ ಆರೋಗ್ಯ ಮುಖ್ಯ : ಅಮೃತಾನಂದ ಮಹಾಸ್ವಾಮಿಗಳು

ಪುರುಷಾರ್ಥ ಸಾಧನೆಗೆ ಆರೋಗ್ಯ ಮುಖ್ಯ : ಅಮೃತಾನಂದ ಮಹಾಸ್ವಾಮಿಗಳು
ಬಸವಕಲ್ಯಾಣ: ನಮ್ಮ ದೇಶದಲ್ಲಿ ಪ್ರಾಚೀನ ಕಾಲದಿಂದ ಇಂದಿನವರೆಗೂ ಶ್ರೇಷ್ಠವಾದ ವೈದ್ಯ ಪದ್ಧತಿಯಿದೆ. ಪುರುಷಾರ್ಥಗಳು ಪಡೆಯಲು ಆರೋಗ್ಯ ಮುಖ್ಯವಾಗಿದೆ ಎಂದು ಬಾಲಗಾಂವನ ಗುರುದೇವಾಶ್ರಮದ ಅಮೃತಾನಂದ ಮಹಾಸ್ವಾಮಿಗಳು ಹೇಳಿದರು.
ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ವತಿಯಿಂದ ಶ್ರೀ ಬಸವೇಶ್ವರ ಜಾತ್ರೆ ಮಹೋತ್ಸವ ಅಮೃತ ಮಹೋತ್ಸವ ಪ್ರಯುಕ್ತ ನಗರದ ಅಕ್ಕಮಹಾದೇವಿ ಕಾಲೇಜು ಆವರಣದಲ್ಲಿ ಭಾನುವಾರ ಆಯೋಜಿಸಿದ್ದ ಆರೋಗ್ಯ ತಪಾಸಣೆ, ರಕ್ತ ಮತ್ತು ಅಂಗದಾನ ಶಿಬಿರ ಉದ್ಘಾಟಿಸಿ ಮಾತನಾಡಿದ ಅವರು, ಶ್ರಮಕ್ಕೆ, ಬೆವರಿಗೆ ಆದ್ಯತೆ ನೀಡಿದರೆ ಆರೋಗ್ಯ ಚೆನ್ನಾಗಿರುತ್ತದೆ ಎಂದರು.
ವೈದ್ಯರು ಆರೋಗ್ಯ ತಪಾಸಣೆ ಮಾಡಿ ಔಷಧಿ ಕೊಡುತ್ತಾರೆ. ಆದರೆ ನಾವು ನಮ್ಮ ಆರೋಗ್ಯ ಚೆನ್ನಾಗಿ ಇಟ್ಟುಕೊಳ್ಳಬೇಕು. ಆರೋಗ್ಯ ಚನ್ನಾಗಿರಲು ಉತ್ತಮ ಕೆಲಸ ಮಾಡಬೇಕು. ಬೆಳೆವ ಭೂಮಿ, ಸುಳಿವ ಗಾಳಿ, ಕುಡಿವ ನೀರು ಸೇರಿ ನಿಸರ್ಗ ಕೆಟ್ಟಿದೆ ಎನ್ನುತ್ತೇವೆ. ಸಹಜತೆ ಬಿಟ್ಟು ಕೃತಕತೆಗೆ ಜೋತು ಬಿದ್ದಿರುವ ನಮ್ಮ ಜೀವನ ವಿಧಾನ ಕೆಟ್ಟಿದೆ. ಅದಕ್ಕೇ ಬಿಪಿ, ಶುಗರ್, ಕ್ಯಾನ್ಸರ್, ಬೊಜ್ಜು ಹೆಚ್ಚಾಗುತ್ತದೆ. ನಮ್ಮ ದೇಹ ಹಗುರಾಗುಂತ ಆಹಾರ ಸೇವಿಸಬೇಕು ಎಂದರು.
ಬೀದರ ಬ್ರೀಮ್ಸ್ ನ ಅಂಗರಚನಾಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಸಂದೀಪ ದೇಶಮುಖ ಮಾತನಾಡಿ, ಅಂಗಾಂಗ ದಾನ ಮಾಡಿ ಹಲವರ ಜೀವನ ಉಳಿಸಲು ಸಾಧ್ಯವಾಗುತ್ತದೆ. ಅಂಗಾಂಗ ಅಧ್ಯಯನಕ್ಕಾಗಿ ಅಂಗ ರಚನಾ ಶಾಸ್ತ್ರದ ವಿದ್ಯಾರ್ಥಿಗಳ ಕಲಿಕೆಯಲ್ಲಿ ಇದು ಅನುಕೂಲ ಎಂದರು.
ಬ್ರೀಮ್ಸ್ ನ ಡಾ. ಜ್ಯೋತಿ ಅವರು ಮಾತನಾಡಿ, ಶರೀರದ ಪ್ರತಿಯೊಂದು ಅಂಗಗಳು ಮುಖ್ಯ. ಸಾವಿನ ನಂತರ ಅದರ ದಾನದಿಂದ ಅವರ ಅಂಗಾಂಗ ಬೇರೆಯವರ ಕಷ್ಟಕ್ಕೆ ಸಹಾಯಕವಾಗುತ್ತದೆ ಎಂದರು.
ಬಿಡಿವಿಸಿ ಉಪಾಧ್ಯಕ್ಷ ಡಾ ಜಿ.ಎಸ್. ಭುರಾಳೆ ಮಾತನಾಡಿ, ಶ್ರೀ ಬಸವೇಶ್ವರ ದೇವಸ್ಥಾನ ಪಂಚ ಕಮಿಟಿ ಮತ್ತು ವಿಶ್ವಸ್ಥ ಸಮಿತಿ ವತಿಯಿಂದ ಕಳೆದ ಹತ್ತು ವರ್ಷಗಳಿಂದ ಆರೋಗ್ಯ ತಪಾಸಣೆ ಮತ್ತು ರಕ್ತದಾನ ಶಿಬಿರ ನಡೆಸಿಕೊಂಡು ಬರುಲಾಗುತ್ತಿದೆ. ಈ ಸಲ ಅಂಗಾಂಗ ದಾನ ಮತ್ತು ದೇಹದಾನ ಹಾಗೂ ಆಯುಷ್ಮಾನ್ ಭಾರತ ಕಾರ್ಡ್ ಹಾಗೂ ಆರೋಗ್ಯ ವಿಮೆ ಮಾಡಿಸುವ ಹೊಸ ಯೋಜನೆ ಹಮ್ಮಿಕೊಂಡಿದ್ದೇವೆ ಎಂದರು.
ಬಿಡಿಪಿಸಿ ಅಧ್ಯಕ್ಷ ಬಸವರಾಜ ಕೋರಕೆ ಅಧ್ಯಕ್ಷತೆ ವಹಿಸಿದ್ದರು. ಅಮೋಘ ಸಿದ್ಧ ಮಹಾಸ್ವಾಮಿಗಳು, ಬಿಡಿವಿಸಿ ಅಧ್ಯಕ್ಷ ಶಶಿಕಾಂತ ದುರ್ಗೆ, ಬ್ರೀಮ್ಸ್ ನ ಡಾ. ವಿಜಯಕುಮಾರ್ ಅಂತಪ್ಪ , ಹಿರಿಯ ನಾಗರಿಕರ ಸಂಘದ ಅಧ್ಯಕ್ಷ ಸಿ.ಬಿ. ಪರತಾಪುರೆ, ತಜ್ಞ ವೈದ್ಯರಾದ ಡಾ. ಶರದ ಮಸೂದಿ, ಡಾ. ಗುರುಬಸವ ಲಕಮಾಜಿ, ಡಾ. ಅನಿಲ್ ಮುದ್ದಾ, ಡಾ. ಸದಾನಂದ ಪಾಟೀಲ, ಡಾ. ಪೃಥ್ವಿರಾಜ್ ಬಿರಾದಾರ, ಡಾ.ಸಂದೀಪ ರಂಗದಾಳ, ಆರೋಗ್ಯ ವಿಮೆ ಸಂಯೋಜಕ ಪ್ರವೀಣ ಮಹೇಂದ್ರಕರ, ಆಯುಷ್ಮಾನ್ ಭಾರತ ನ ಸಂಯೋಜಕ ರವೀಂದ್ರ ಎಚ್.ಎಸ್, ಬಿಡಿಪಿಸಿ ಉಪಾಧ್ಯಕ್ಷ ಮಲ್ಲಿಕಾರ್ಜುನ ಚಿರಡೆ, ಕೋಶಾಧ್ಯಕ್ಷ ರಾಜಕುಮಾರ ಹೊಳಕುಂದೆ, ಕಾರ್ಯದರ್ಶಿ ಶ್ರೀಕಾಂತ ಬಡದಾಳೆ, ಸಹ ಕಾರ್ಯದರ್ಶಿ ವಿವೇಕಾನಂದ ಹೊದಲೂರೆ, ನಿರ್ದೇಶಕರಾದ ಸುಭಾಷ ಹೊಳಕುಂದೆ, ಅಶೋಕ ನಾಗರಾಳೆ, ಕಾಶಪ್ಪಾ ಸಕ್ಕರಭಾವಿ, ಜಗನ್ನಾಥ ಖೂಬಾ, ಭದ್ರಿನಾಥ ಪಾಟೀಲ, ಅನಿಲಕುಮಾರ ರಗಟೆ ರೇವಣಪ್ಪಾ ರಾಯವಾಡೆ ಬಿಡಿವಿಸಿ ನಾಗಯ್ಯ ಸ್ವಾಮಿ, ಮೊದಲಾದವರಿದ್ದರು.
ಅಂಗಾಂಗ ದಾನ ನೋಂದಣಿ ಮಾಡಿಸಿದವರನ್ನು ಸನ್ಮಾನಿಸಲಾಯಿತು.
80 ಜನರ ಹೃದಯ ತಪಾಸಣೆ,
75 ಜನ ರಕ್ತ ದಾನ
06 ದೇಹದಾನ
04 ಜನ ಅಂಗಾಂಗ ದಾನ ಮಾಡಿದ್ದಾರೆ.
ಆರ್ಯಾ ಕಂಪ್ಯೂಟರ್ ಸಹಯೋಗದಲ್ಲಿ 190 ಆಯುಷ್ಮಾನ್ ಕಾರ್ಡ್ ನೋಂದಣಿ ಮಾಡಿಸಲಾಯಿತು.ಜ್ಯೋತಿ ತುಗಾವೆ ನಿರೂಪಿಸಿ ವಂದಿಸಿದರು.