ಪತ್ರಕರ್ತ ರವಿ ಭೂಸಂಡೆ ಅವರ ಮೇಲೆ ಹಲ್ಲೆ – ಆರೋಪಿಗಳಿಗೆ ಕಠಿಣ ಕ್ರಮಕ್ಕೆ ಬಸವಕಲ್ಯಾಣ ಪತ್ರಕರ್ತರ ಸಂಘದ ಒತ್ತಾಯ

ಪತ್ರಕರ್ತ ರವಿ ಭೂಸಂಡೆ ಅವರ ಮೇಲೆ ಹಲ್ಲೆ – ಆರೋಪಿಗಳಿಗೆ ಕಠಿಣ ಕ್ರಮಕ್ಕೆ ಬಸವಕಲ್ಯಾಣ ಪತ್ರಕರ್ತರ ಸಂಘದ ಒತ್ತಾಯ
ಬಸವಕಲ್ಯಾಣ, 17 ಏಪ್ರಿಲ್ 2025 – ಬೀದರ್‌ನಲ್ಲಿ ಪತ್ರಕರ್ತ ರವಿ ಭೂಸಂಡೆ ಅವರ ಮೇಲೆ ಅಮಾನವೀಯವಾಗಿ ಹಲ್ಲೆ ನಡೆಸಿದ ಅರಣ್ಯ ಇಲಾಖೆಯ ನಾಲ್ವರು ಅಧಿಕಾರಿ ಹಾಗೂ ಸಿಬ್ಬಂದಿಗಳ ವಿರುದ್ಧ ತಕ್ಷಣ ಕಠಿಣ ಕ್ರಮ ಕೈಗೊಳ್ಳಬೇಕೆಂದು ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಬಸವಕಲ್ಯಾಣ ಶಾಖೆಯು ಒತ್ತಾಯಿಸಿದೆ.
ಸಂಘದ ಪದಾಧಿಕಾರಿಗಳು ಮತ್ತು ಸದಸ್ಯರ ನಿಯೋಗ ಗುರುವಾರದಂದು ತಾಲೂಕಿನ ಆಡಳಿತ ಸೌಧಕ್ಕೆ ಭೇಟಿ ನೀಡಿ, ಈ ಕುರಿತ ಮನವಿ ಪತ್ರವನ್ನು ಮುಖ್ಯಮಂತ್ರಿಗಳಿಗೆ ಉದ್ದೇಶಿಸಿ ತಹಸೀಲ್ದಾರ್ ಡಾ. ದತ್ತಾತ್ರೇಯ ಗಾದಾ ಅವರಿಗೆ ಸಲ್ಲಿಸಿದರು. ಹಲ್ಲೆ ನಡೆಸಿದ ಅಧಿಕಾರಿಗಳಾದ ದಸ್ತಗಿರ್, ಶಾಂತಕುಮಾರ್, ಗಜಾನಂದ ಹಾಗೂ ಸಂಗಮೇಶ ಅವರನ್ನು ಬಂಧಿಸಿ ಸೇವೆಯಿಂದ ಅಮಾನತ್ತುಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಏಪ್ರಿಲ್ 15 ರಂದು ರಾತ್ರಿ, ಪತ್ರಕರ್ತ ರವಿ ಭೂಸಂಡೆ ಅವರು ಮನ್ನಾಯಿಖೆಳ್ಳಿಯಿಂದ ಚಿದ್ರಿಗೆ ಆಗಮಿಸುತ್ತಿದ್ದಾಗ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಸ್ಥಳೀಯರ ನಡುವೆ ನಡೆದ ವಾಗ್ವಾದವನ್ನು ವೀಕ್ಷಿಸಲು ಹೋದ ಸಂದರ್ಭದಲ್ಲಿ, ಅವರ ಮೇಲೆ ಈ ನಾಲ್ಕು ಜನ ಅಧಿಕಾರಿಗಳು ಹಾಗೂ ಸಿಬ್ಬಂದಿ ದೌರ್ಜನ್ಯ ನಡೆಸಿದ್ದರು. ಈ ಘಟನೆ ನಂತರವೂ, ಅವರು ಸುತ್ತಮುತ್ತ ಬೀದರ್‌ನಲ್ಲಿ ಹಲ್ಲೆ ಮಾಡುವ ಉದ್ದೇಶದಿಂದ ಸುತ್ತಾಡಿದ್ದು, ಇದೊಂದು ಗಂಭೀರ ಘಟನೆ ಎಂದು ಸಂಘ ಖಂಡಿಸಿದೆ.
ಈ ಸಂದರ್ಭ ಸಂಘದ ತಾಲೂಕು ಅಧ್ಯಕ್ಷ ಜೋಶಿ, ಪ್ರಧಾನ ಕಾರ್ಯದರ್ಶಿ ಉದಯಕುಮಾರ ಮುಳೆ, ಉಪಾಧ್ಯಕ್ಷರಾದ ನೈಮೋದ್ದಿನ್ ಚಾಬುಕಸವಾರ, ಡಿ.ಕೆ. ಪ್ರಲ್ಲಾದ, ಕಾರ್ಯದರ್ಶಿ ಶಿವಪುತ್ರ ಪಾಟೀಲ್, ಖಜಾಂಚಿ ಪ್ರದೀಪ ವಿಸಾಜಿ, ಗೌರವ ಸಲಹೆಗಾರ ವೀರಶೆಟ್ಟಿ ಮಲಶೆಟ್ಟಿ, ಸದಸ್ಯರಾದ ಕಲ್ಯಾಣರಾವ ಮದರಗಾಂವಕರ್, ರಾಜೇಂದ್ರ ಗೋಖಲೆ, ಗುರುನಾಥ ಗಡ್ಡೆ, ಧನರಾಜ ರಾಜೋಳೆ, ಎಂ.ಡಿ. ಖುತಬೋದ್ದಿನ್, ಬಿಕೆ ನ್ಯೂಸ್‌ನ ಅಕ್ಬರ್, ಜಾಕೀರ್ ಅಹ್ಮದ, ವಾಸೀಮ್ ಮತ್ತು ಬಿಎಸ್‌ಪಿ ಮುಖಂಡ ಅಶೋಕ ಮಂಠಾಳಕರ್ ಉಪಸ್ಥಿತರಿದ್ದರು.