ಮಹಿಳೆಗೆ ಆದ ಅನ್ಯಾಯ ಖಂಡಿಸಿ ಜಿಲ್ಲಾ ಮಾದಿಗ ಸಮಾಜದದಿಂದ ಪ್ರತಿಭಟನೆ

ಮಹಿಳೆಗೆ ಆದ ಅನ್ಯಾಯ ಖಂಡಿಸಿ ಜಿಲ್ಲಾ ಮಾದಿಗ ಸಮಾಜದದಿಂದ ಪ್ರತಿಭಟನೆ
ಕಲಬುರಗಿ: ನಗರದಲ್ಲಿ ಕಿರಿಯ ವಯಸ್ಸಿನ ಗರ್ಭಿಣಿ ಮಹಿಳೆ ಜ್ಯೋತಿ ಕಟ್ಟಿಮನಿ ಸಾವಿಗೆ ಕಾರಣರಾಗಿರುವ ಸುರಕ್ಷಾ ಆಸ್ಪತ್ರೆಯ ಡಾ. ಚಂದ್ರಿಕಾ ಮತ್ತು ಸಿಬ್ಬಂದಿಗಳು ಮತ್ತು ಸ್ಟಾರ್ ಕೇರ್ ಆಸ್ಪತ್ರೆಯ ಮುಖ್ಯಸ್ಥರ ಮೇಲೆ ಪ್ರಕರಣ ದಾಖಲಿಸಿ ಶಾಸ್ತ್ರ ತವಾಗಿ ಆಸ್ಪತ್ರೆಯ ಪರವಾನಿಗಿ ರದ್ದುಮಾಡಬೇಕೆಂದು ಒತ್ತಾಯಿಸಿ ಜಿಲ್ಲಾ ಮಾದಿಗ ಸಮಾಜದದಿಂದ ನಗರದ ಡಾ.ಬಾಬು ಜಗಜೀವನರಾಮ್ ಅವರ ಪುತ್ಥಳಿ ದಿಂದ ಜಿಲ್ಲಾಧಿಕಾರಿಗಳ ಕಚೇರಿ ವರಗೆ ಉಗ್ರ ಪ್ರತಿಭಟನೆ ನಡೆಸಿದರು. ಬಾಬುರಾವ ಸುಂಠಾಣ, ಮಂಜುನಾಥ, ನಾಗರಾಜ ಗುಂಡಗುರ್ತಿ, ಶ್ರೀನಿವಾಸ ರಾಮನಾಳಕರ್, ದತ್ತು ಭಾಸಗಿ, ರಂಜೀತ ಮೂಲಿಮನಿ, ಶ್ರೀಮಂತ ಭಂಡಾರಿ, ಗಣೇಶ ಕಟ್ಟಿಮನಿ ಸೇರಿದಂತೆ ಮತ್ತಿತರರ ಮುಖಂಡರಿದ್ದರು.