ಸರಸ್ವತಿ ಸಾಧಕ ಸಿರಿ" ರಾಷ್ಟ್ರ ಪ್ರಶಸ್ತಿಗೆ ಪೆರ್ನಾಜೆ ತಂಡದ ಮೂವರು ಸಾಧಕರ ಆಯ್ಕೆ

"ಸರಸ್ವತಿ ಸಾಧಕ ಸಿರಿ" ರಾಷ್ಟ್ರ ಪ್ರಶಸ್ತಿಗೆ ಪೆರ್ನಾಜೆ ತಂಡದ ಮೂವರು ಸಾಧಕರ ಆಯ್ಕೆ
ದಾವಣಗೆರೆ: ಕಲಾ, ಸಾಹಿತ್ಯ, ಸಂಗೀತ ಮತ್ತು ಸಂಸ್ಕೃತಿಯ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದ ದಾವಣಗೆರೆಯ "ಸ್ವರ ಸಿಂಚನ" ಕಲಾ ತಂಡದ ಮೂವರು ಸಾಧಕರನ್ನು "ಸರಸ್ವತಿ ಸಾಧಕ ಸಿರಿ – 2025"ರ ರಾಷ್ಟ್ರೀಯ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಸಾಲಿಗ್ರಾಮ ಸರಸ್ವತಿ ದಾಸಪ್ಪ ಶೆಣೈ ಪ್ರತಿಷ್ಠಾನ ಹಾಗೂ ದಾವಣಗೆರೆ ಕಲಾ ಕುಂಚ ಸಾಂಸ್ಕೃತಿಕ ಸಂಸ್ಥೆಯ ಸಹಯೋಗದಲ್ಲಿ 70ನೇ ಕನ್ನಡ ನಿತ್ಯೋತ್ಸವದ ಪ್ರಯುಕ್ತ ಈ ಪ್ರಶಸ್ತಿ ಪ್ರದಾನ ನಡೆಯಲಿದೆ.
ಪ್ರಶಸ್ತಿಗೆ ಆಯ್ಕೆಯಾದವರು:
ಕುಮಾರ್ ಪೆರ್ನಾಜೆ – ಲೇಖಕ, ಚಿಂತಕ, ಸಂಶೋಧಕ ಹಾಗೂ ಜೇನು ಗಡ್ಡದಾರಿಯಾಗಿ ಗುರುತಿಸಿಕೊಂಡಿರುವ ಇವರಿಗೆ ದಕ್ಷಿಣ ಕನ್ನಡ ಜಿಲ್ಲೆಯ ಉತ್ತಮ ಕೃಷಿಕ ಪ್ರಶಸ್ತಿ, ಹವ್ಯಕ ಕೃಷಿ ರತ್ನ, ಕೃಷಿ ಪಂಡಿತ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿಗಳು ದೊರೆತಿವೆ. ಕಲಾ ಪೋಷಕ, ಕಲಾ ನಿರ್ದೇಶಕ ಹಾಗೂ ಶಿಕ್ಷಣ ಪ್ರೇಮಿ ಎಂಬ ನಾನಾ ಭೂಮಿಕೆಯಲ್ಲಿ ಸಾಮಾಜಿಕ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ.
ಸೌಮ್ಯ ಪೆರ್ನಾಜೆ – ಸಂಗೀತ ಕ್ಷೇತ್ರದಲ್ಲಿ ವಿಶಿಷ್ಟ ಬರಹಗಾರರಾಗಿ ಗುರುತಿಸಿಕೊಂಡಿರುವ ಇವರು, ತೃತೀಯ ವಿಶ್ವ ಹವ್ಯಕ ಸಮ್ಮೇಳನದಲ್ಲಿ ಕೃಷಿಕ ರತ್ನ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಸವಿತಾ ಕೊಡಂದೂರು – ಗಾಯನ, ಸೆಕ್ಸೋಫೋನ್ ವಾದನೆ ಮತ್ತು ವಿವಿಧ ಸಂಗೀತ ಕಲಾಕೌಶಲ್ಯದ ಮೂಲಕ ಗಮನ ಸೆಳೆದಿರುವ ಇವರು, ಪೆರ್ನಾಜೆ ಪ್ರಶಸ್ತಿ, ಕೃಷಿ ರತ್ನ, ಗಡಿನಾಡ ಧ್ವನಿ ಮೊದಲಾದ ಗೌರವಗಳಿಗೆ ಪಾತ್ರರಾಗಿದ್ದಾರೆ.
ಪ್ರಶಸ್ತಿ ಪ್ರದಾನ ಸಮಾರಂಭವು ಏಪ್ರಿಲ್ 27ರಂದು ದಾವಣಗೆರೆ, ಚೆನ್ನಗಿರಿ ತಾಲೂಕು ವಿರೂಪಾಕ್ಷಪ್ಪ ಧರ್ಮಶಾಲ ಕಲ್ಯಾಣ ಮಂಟಪದಲ್ಲಿ ಜರುಗಲಿದ್ದು, ಪ್ರಶಸ್ತಿಗಳನ್ನು ಪ್ರದಾನಿಸಲಾಗುತ್ತದೆ ಎಂದು ಪ್ರತಿಷ್ಠಾನದ ಸಂಸ್ಥಾಪಕರಾದ ಸಾಲಿಗ್ರಾಮ ಗಣೇಶ್ ಶೆಣೈ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.