ವಿವಿಧ ಬೇಡಿಕೆ ಈಡೇರಿಸುವಂತೆ ಪೋಲಿಸ್ ಆಯುಕ್ತರಿಗೆ ಮನವಿ
ವಿವಿಧ ಬೇಡಿಕೆ ಈಡೇರಿಸುವಂತೆ ಪೋಲಿಸ್ ಆಯುಕ್ತರಿಗೆ ಮನವಿ
ಕಲಬುರಗಿ : ನಗರದಲ್ಲಿ ದಿನೇ ದಿನೇ ಜನಸಂಖ್ಯೆ ದಟ್ಟನೇ ಹೆಚ್ಚಾಗುತ್ತಿರುವುದರಿಂದ ಸಂಚಾರ ವ್ಯವಸ್ಥೆಗೆ ಧಕ್ಕೆಯಾಗುತ್ತಿದ್ದು, ಕೂಡಲೇ ಈ ವ್ಯವಸ್ಥೆಯನ್ನು ಬದಲಾಯಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಬೇಕೆಂದು ಜೈ ಕನ್ನಡಿಗರ ರಕ್ಷಣಾ ವೇದಿಕೆಯ ಸಂಸ್ಥಾಪಕ ಅಧ್ಯಕ್ಷ ಸಚಿನ್ ಎಸ್. ಭರತಾಬಾದ ನೇತೃತ್ವದಲ್ಲಿ ನೂತನ ಪೋಲಿಸ್ ಆಯುಕ್ತರಾದ ಅಧಿಕಾರ ವಹಿಸಿಕೋಂಡ ಎಸ್.ಡಿ.ಶರಣಪ್ಪ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ನಗರದ ಸುಪರ್ ಮಾರ್ಕೆಟ್ ನಲ್ಲಿ ಹಳೆಯ ಮಾರ್ಕೆಟ್, ಚಪ್ಪಲ ಬಜಾರ, ಕಿರಾಣಾ ಬಜಾರ್, ಕಪಡಾ ಬಹಾರ, ಚೈನಾ ಬಹಾರ. ಸಿಟಿ ಬಸ್ ಸ್ಟ್ಯಾಂಡ, ಹಾಗೂ ಇ.ಎಸ್.ಐ. ಆಸ್ಪತ್ರೆ, ಖರ್ಗೆ ಸರ್ಕಲ್, ರಾಮಮಂದಿರ, ಕೇಂದ್ರ ಬಸ್ ನಿಲ್ದಾಣ, ಸರ್ದಾರ ವಲ್ಲಭಬಾಯಿ ಪಟೇಲ್, ಹುಮನಾಬಾದ ಕ್ರಾಸ್, ಆಳಂದ ಚೆಕ್ ಪೋಸ್ಟ್, ಹೈಕೋರ್ಟ, ಹೀರಾಪಾರ ಕ್ರಾಸ್, ಕಣ ್ಣ ಮಾರ್ಕೆಟ್, ಶಹಾಬಾದ ರಿಂಗ್ ರೋಡ, ಅಪ್ಪನ ಗುಡಿ, ಖಾಹಾ ಬಂದಾನವಾಜ್, ಜಿಲ್ಲಾ ಸರ್ಕಾರಿ ಆಸ್ಪತ್ರೆ, ಜೀವರ್ಗಿ ಕ್ರಾಸ್, ಈ ಸ್ಥಳದಲ್ಲಿ ಸಾರ್ವಜನಿಕರ ಅನುಕೂಲಕ್ಕಾಗಿ, ಪಾದಚಾರಿಗಳ ಅನುಕೂಲಕ್ಕಾಗಿ ಘುಟಪಾತ್ ಮಾಡಿದ್ದು, ಸದರಿ ಪುಟಪಾತ್‌ನಲ್ಲಿ ಬಂಡಿಗಳನ್ನು ಹಾಕಿಕೊಂಡು ಎಲ್ಲಾ ರೀತಿಯ ವ್ಯಾಪಾರ ವಹಿವಾಟು ಮಾಡುತ್ತಿದ್ದು ಇದರಿಂದ ಸಾರ್ವಜನಿಕರಿಗೆ ಅನೇಕ ರೀತಿಯ ತೊಂದೆಗಳು ಅನುಭವಿಸುತ್ತಿದ್ದಾರೆ.
ನಗರದ ಎಲ್ಲಾ ಸರ್ಕಲ್‌ದಲ್ಲಿ ಸಂಚಾರಿ ಪೋಲಿಸರು ಕರ್ತವ್ಯ ನಿರ್ವಹಿಸುವ ಸಮಯದಲ್ಲಿ ಕೇವಲ ಟ್ರಾಫೀಕ್ ವ್ಯವಸ್ಥೆಯನ್ನು ಸುಗಮಗೊಳಿಸುವುದನ್ನು ಬಿಟ್ಟು ಕೇವಲ ಮೊಬೈಲ್‌ಗಳಲ್ಲಿ ಕಣ್ಣಾಡಿಸುತ್ತಾ ನಿಲ್ಲುವುದರಿಂದ ಅನೇಕ ರೀತಿಯ ಅವಘಡಗಳಿಗೆ ಎಡೆ ಮಾಡಿಕೊಟ್ಟಂತೆ ಆಗುತ್ತದೆ. ಆದ್ದರಿಂದ ಮಾನ್ಯರವರು ಕೂಡಲೇ ಇಂತಹ ಸರ್ಕಲ್ ಗಳಲ್ಲಿ ಕೂಡಲೇ ಧಾವಿಸಿ ಈ ಸಮಸ್ಯೆಗಳನ್ನು ಬಗೆಹರಿಸಿಕೊಟ್ಟು ಸಾರ್ವಜನಿಕರಿಗೆ ಅನುಕೂಲ ಮಾಡಿಕೊಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ: ಸುರೇಶ ಹನಗುಡಿ, ಅಕ್ಷಯ, ಅಣವೀರ ಪಾಟೀಲ, ರವಿ ಸಜ್ಜನ್, ಬಸ್ಸು, ಅಜಯ, ಪ್ರವೀಣ ಸಿಂದೆ. ಅಂಬು ಮಸ್ಥಿ, ಸಾಯಿಕುಮಾರ ಸಿಂಧೆ ಇದ್ದರು
.