ಕಳಪೆ ಕಾಮಗಾರಿಗೆ ಸಹಕಾರ ನಿಡಿದ ಅಧಿಕಾರಿಗಳಿಗೆ ಅಮಾನತ್ತು ಮಾಡಬೇಕೆಂದು ಸಿ.ಎಮ್, ಗೆ ಕಲ್ಯಾಣ ಕರ್ನಾಟಕ ಸೇನೆ ಮನವಿ

ಕಳಪೆ ಕಾಮಗಾರಿಗೆ ಸಹಕಾರ ನಿಡಿದ ಅಧಿಕಾರಿಗಳಿಗೆ ಅಮಾನತ್ತು ಮಾಡಬೇಕೆಂದು ಸಿ.ಎಮ್, ಗೆ ಕಲ್ಯಾಣ ಕರ್ನಾಟಕ ಸೇನೆ ಮನವಿ
ಕಲಬುರಗಿ: 2018–19ನೇ ಸಾಲಿನ ಪ್ರಧಾನ ಮಂತ್ರಿ ಆವಾಸ್ ಯೋಜನೆಯಡಿ ಕಲಬುರಗಿಯಲ್ಲಿ ಕರ್ನಾಟಕ ಕೊಳಗೇರಿ ಅಭಿವೃದ್ಧಿ ಮಂಡಳಿಯಿಂದ ನಿರ್ಮಾಣಗೊಂಡ ತಾರ್‌ಫೈಲ್, ಕೃಷ್ಣಾ ನಗರ, ಬ್ರಹ್ಮಪೂರ ಸೇರಿದಂತೆ ವಿವಿಧ ಬಡಾವಣೆಗಳ ಮನೆಗಳು ಕಳಪೆ ಗುಣಮಟ್ಟದವೆಯಾಗಿ ನಿರ್ಮಾಣವಾಗಿದ್ದು, ಇದರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಕಲ್ಯಾಣ ಕರ್ನಾಟಕ ಸೇನೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಿದೆ.
ಕಳಪೆ ಕಾಮಗಾರಿಗೆ ಸಂಬಂಧಪಟ್ಟಂತೆ ಈಗಾಗಲೇ ಮಾನ್ಯ ಉಪ ಮುಖ್ಯಮಂತ್ರಿ, ಜಿಲ್ಲಾಧಿಕಾರಿ, ಉಸ್ತುವಾರಿ ಸಚಿವರು, ಆಯುಕ್ತರಿಗೆ ದೂರು ಸಲ್ಲಿಸಲಾಗಿದೆ. ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ ಮನೆಗಳಲ್ಲಿ ಕಿಟಕಿ, ಬಾಗಿಲು, ಮೇಲ್ಚಾವಣಿ ಇಲ್ಲದೇ ಮಳೆಗಾಲದಲ್ಲಿ ನೀರು ಒಳನುಗ್ಗುವ ಸ್ಥಿತಿ ನಿರ್ಮಾಣವಾಗಿದೆ. ಕೆಲ ಮನೆಗಳು ಲೆಕ್ಕಪತ್ರದಲ್ಲಿ ಮಾತ್ರ ತೋರಿಸಿ ನಿರ್ಮಿಸಲಾಗಿಲ್ಲ. ಹಲವಾರು ಫಲಾನುಭವಿಗಳು ತಮ್ಮ ಖರ್ಚಿನಲ್ಲಿ ಮನೆಗಳನ್ನು ಪೂರ್ಣಗೊಳಿಸಿಕೊಂಡಿದ್ದಾರೆ.
ಈ ಬಗ್ಗೆ ತಪಾಸಣೆ ನಡೆದಿದೆಯೆಂದು ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಹೇಳಿದರೂ, ಸ್ಥಳೀಯರ ಪ್ರಕಾರ ಯಾವುದೇ ಸಮಗ್ರ ಪರಿಶೀಲನೆ ನಡೆದಿಲ್ಲ. ಅತೀ ದೀರ್ಘಕಾಲದಿಂದ ಒಬ್ಬೇ ಅಧಿಕಾರಿಗಳು ಇಲ್ಲಿಯೇ ಜವಾಬ್ದಾರಿ ನಿರ್ವಹಿಸುತ್ತಿದ್ದು, ಅಧಿಕಾರದ ದುರ್ಬಳಕೆ ನಡೆಯುತ್ತಿದೆ.ಎಂದು ದೂರಿದರು
ಸೇನೆಯ ಸಂಸ್ಥಾಪಕ ಅಧ್ಯಕ್ಷ ದತ್ತು ಹೈಯಾಳಕರ, ಮಹಿಳಾ ಘಟಕದ ಜಿಲ್ಲಾಧ್ಯಕ್ಷೆ ಗೋರಂಪಳ್ಳಿ, ಜಿಲ್ಲಾ ಉಪಾಧ್ಯಕ್ಷೆ ಶ್ರೀದೇವಿ ಮುತ್ತಂಗಿ, ಸದಸ್ಯರು ಬಾಲರಾಜ, ಬಸವರಾಜ ಹಯ್ಯಾಳಕರ್, ಮಲ್ಲು, ಗುರುಬಾಯಿ ಉಪಸ್ಥಿತರಿದ್ದರು.
ಪ್ರಜಾಪ್ರತಿನಿಧಿಗಳು ತಕ್ಷಣ ಸ್ಥಳ ಪರಿಶೀಲನೆ ಮಾಡಿ, ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಂಡು, ಫಲಾನುಭವಿಗಳಿಗೆ ನ್ಯಾಯ ಒದಗಿಸಬೇಕೆಂದು ಸೇನೆ ಆಗ್ರಹಿಸಿದೆ. ಇಲ್ಲದಿದ್ದರೆ ಬೃಹತ್ ಪ್ರತಿಭಟನೆ ನಡೆಸಲಾಗುವುದು ಎಚ್ಚರಿಕೆ ನೀಡಿದ್ದಾರೆ.