ಕೆಂಭಾವಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಅದ್ದೂರಿ ಆಚರಣೆ

ಕೆಂಭಾವಿಯಲ್ಲಿ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ 134ನೇ ಜಯಂತಿ ಅದ್ದೂರಿ ಆಚರಣೆ
ಕೆಂಭಾವಿ, ಏಪ್ರಿಲ್ 14:ಕೆಂಭಾವಿ ಪಟ್ಟಣದ ಹಳೆಯ ಬಸ್ ನಿಲ್ದಾಣದ ಹತ್ತಿರದಲ್ಲಿ ಅಲಂಕೃತವಾಗಿ ಸ್ಥಾಪಿತಗೊಂಡಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪ್ರತಿಮೆ ಮುಂಭಾಗದಲ್ಲಿ 134ನೇ ಜಯಂತಿಯನ್ನು ಭಕ್ತಿ ಮತ್ತು ಭಾವಪೂರ್ಣವಾಗಿ ಆಚರಿಸಲಾಯಿತು. ಡಾ. ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ, ಮೇಣದ ಬತ್ತಿಯ ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಭಾವಪೂರ್ಣ ಚಾಲನೆ ನೀಡಲಾಯಿತು.
ಜಯಂತಿ ಅಂಗವಾಗಿ ಮೆರವಣಿಗೆಯು ಏರ್ಪಡಿಸಲಾಗಿದ್ದು, ಪಟ್ಟಣದ ಬೀದಿಗಳಲ್ಲಿ ಸಂಚರಿಸಿ ಸಾರ್ವಜನಿಕರ ಗಮನ ಸೆಳೆಯಿತು. ಈ ಸಂದರ್ಭದಲ್ಲಿ ದಿ. 12/05/2025 ರಂದು ನಡೆಯಲಿರುವ ಸಾಮೂಹಿಕ ವಿವಾಹ ಸಮಾರಂಭದ ವಾಲ್ ಪೋಸ್ಟರ್‌ಗಳನ್ನು ಭಾನುವಾರದಂದು ಬಹಿರಂಗಗೊಳಿಸಲಾಯಿತು.
ಕಾರ್ಯಕ್ರಮದಲ್ಲಿ ಪ್ರಮುಖರಾದ ಲಾಲಪ್ಪ ಆಲ್ಹಾಳ, ಶಿವಶರಣಪ್ಪ ವಾಡಿ, ಮಲ್ಲಿಕಾರ್ಜುನ್ ಕಡಕಲ್, ಧರ್ಮಣ್ಣ ಪತ್ಯೆಪೂರ, ಶರಣಪ್ಪ ನಗನೂರ, ಅಯ್ಯಣ ಮಳಳ್ಳಿಕರ್, ಬಸವಣ್ಣಪ್ಪ ಮಾಳಳ್ಳಿಕರ್, ಜುಮ್ಮಣ ಕಟ್ಟಿಮನಿ, ಸುರೇಶ ಮಾಳಳ್ಳಿಕರ್, ರಾಯಪ್ಪ ಬಡಿಗೇರ, ರವಿ ಯಮನೂರ, ಸಂಗಣ್ಣ ಚಿಚೋಳಿ, ಪರಶುರಾಮ ಮಾಳಳ್ಳಿಕರ್, ಲಕ್ಷ್ಮಣ್ ಬಸರಿಗಿಡ, ಯಲ್ಲಪ್ಪ ಭಾವಿಮನಿ, ಧರ್ಮಣ ಚಿಚೋಳಿ, ಅಂಬರೀಶ್ ಮುನೀರ್ ಬೊಮ್ಮನಹಳ್ಳಿ, ಮಲ್ಲಿಕಾರ್ಜುನ ಕಟ್ಟಿಮನಿ, ಜೇಟ್ಟೆಪ್ಪ ಮುಟ್ಟಳ್ಳಿ, ಲಕ್ಷ್ಮಣ್ ಬಾವಿಮನಿ, ಬಸವರಾಜ್ ಯಮನೂರ್, ಚಂದ್ರಪ್ಪ ಜಲಪುರ್ ಮತ್ತಿತರರು ಭಾಗವಹಿಸಿದ್ದರು.
ಸಹಭಾಗಿತ್ವ ವಹಿಸಿದ್ದ ನೂರಾರು ಸಮಾಜದ ಬಾಂಧವರು, ಮಹಿಳೆಯರು ಮತ್ತು ಮಕ್ಕಳು ಈ ಕಾರ್ಯಕ್ರಮವನ್ನು ಅದ್ದೂರಿಗೊಳಿಸಿದರು.
—