ಉತ್ತರ ಪ್ರದೇಶದಲ್ಲಿ ಮಿತಿಮೀರಿದ ಜಾತಿ ತಾರತಮ್ಯ ಕುರಿತ ಮಾಧ್ಯಮ ಪೋಸ್ಟ್: ಪತ್ರಕರ್ತೆಯ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ಸುಪ್ರೀಂ ಆದೇಶ
ಉತ್ತರ ಪ್ರದೇಶದಲ್ಲಿ ಮಿತಿಮೀರಿದ ಜಾತಿ ತಾರತಮ್ಯ ಕುರಿತ ಮಾಧ್ಯಮ ಪೋಸ್ಟ್: ಪತ್ರಕರ್ತೆಯ ವಿರುದ್ಧ ಕ್ರಮಕ್ಕೆ ಮುಂದಾಗದಂತೆ ಸುಪ್ರೀಂ ಆದೇಶ
ನವದೆಹಲಿ : ಉತ್ತರ ಪ್ರದೇಶದಲ್ಲಿಯ ಜಾತಿ ತಾರತಮ್ಯದ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಹಾಕಿದ್ದ ಪತ್ರಕರ್ತೆಯ ವಿರುದ್ಧ ದಾಖಲಾಗಿರುವ ನಾಲ್ಕು ಎಫ್‌ಐಆರ್‌ಗಳಿಗೆ ಸಂಬಂಧಿಸಿದಂತೆ ಅವರ ವಿರುದ್ಧ ಯಾವುದೇ ಕ್ರಮಗಳನ್ನು ಕೈಗೊಳ್ಳದಂತೆ ಸುಪ್ರೀಂ ಕೋರ್ಟ್ ಗುರುವಾರ ಉತ್ತರ ಪ್ರದೇಶ ಸರ್ಕಾರಕ್ಕೆ ನಿರ್ದೇಶನ ನೀಡಿದೆ.
ಈ ವೇಳೆ ನ್ಯಾಯಮೂರ್ತಿಗಳಾದ ಬಿ ಆರ್ ಗವಾಯಿ, ಪಿ ಕೆ ಮಿಶ್ರಾ ಹಾಗೂ ಕೆ ವಿ ವಿಶ್ವನಾಥನ್ ಅವರ ನೇತೃತ್ವದ ಪೀಠವು ಎಫ್‌ಐಆರ್‌ಗಳನ್ನು ರದ್ದುಗೊಳಿಸುವಂತೆ ಕೋರಿ ಪತ್ರಕರ್ತೆ ಮಮತಾ ತ್ರಿಪಾಠಿ ಅವರು ಸಲ್ಲಿಸಿದ ಅರ್ಜಿಯ ಕುರಿತು ಪ್ರತಿಕ್ರಿಯೆ ನೀಡುವಂತೆ ಉತ್ತರ ಪ್ರದೇಶ ಸರ್ಕಾರಕ್ಕೆ ನೋಟಿಸ್ ಜಾರಿ ಮಾಡಿದೆ.
ಈ ಮೂಲಕ ನ್ಯಾಯಾಲಯವು ಪತ್ರಕರ್ತರ ಹಾಗೂ ಸಾಮಾಜಿಕ ಕಾರ್ಯಕರ್ತರ ಸಮಾಜಮುಖಿ ವಿಚಾರಗಳಿಗೆ ಮನ್ನಣೆ ನೀಡಿರುವುದು ಸಕಾರಾತ್ಮಕ ಧೋರಣೆ ಎನ್ನಬಹುದಾಗಿದೆ.