ಅಂಬೇಡ್ಕರ್ ಜಯಂತ್ಯೋತ್ಸವ: ಜಗತ್ ವೃತ್ತದಲ್ಲಿ ಬೋಧಿವೃಕ್ಷ ಗೆಳೆಯರ ಬಳಗದಿಂದ ಉಪಹಾರ: ಸಚಿವ ಡಾ. ಶರಣಪ್ರಕಾಶ ಪಾಟೀಲ ಚಾಲನೆ

ಅಂಬೇಡ್ಕರ್ ಜಯಂತ್ಯೋತ್ಸವ: ಜಗತ್ ವೃತ್ತದಲ್ಲಿ ಬೋಧಿವೃಕ್ಷ ಗೆಳೆಯರ ಬಳಗದಿಂದ ಉಪಹಾರ: ಸಚಿವ ಡಾ. ಶರಣಪ್ರಕಾಶ ಪಾಟೀಲ ಚಾಲನೆ
ಕಲಬುರಗಿ:ನಗರದ ಜಗತ್ ವೃತ್ತದಲ್ಲಿ ಬೋಧಿವೃಕ್ಷ ಗೆಳೆಯರ ಬಳಗದ ವತಿಯಿಂದ ಭಾರತ ರತ್ನ ಡಾ.ಬಿ.ಆರ್. ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವವನ್ನು ಭಕ್ತಿಪೂರ್ವಕವಾಗಿ ಆಚರಿಸಲಾಯಿತು. ಈ ಅಂಗವಾಗಿ ಆಯೋಜಿಸಲಾಗಿದ್ದ ಅಲ್ಪ ಉಪಹಾರ ವಿತರಣಾ ಕಾರ್ಯಕ್ರಮಕ್ಕೆ ರಾಜ್ಯ ಸರ್ಕಾರದ ಸಚಿವ ಡಾ. ಶರಣಪ್ರಕಾಶ ಪಾಟೀಲ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಲಿಂಗರಾಜ್ ತಾರಫೈಲ್, ಪ್ರಭು ತಿಗಡಿ, ಸೂರ್ಯಕಾಂತ್ ದೊಡ್ಮನಿ, ಈರಣ್ಣ ಝಳಕಿ, ಆನಂದ್ ಸೇಡಂಕರ, ಚಂದ್ರಕಾಂತ್ ಶಿರೋಳಿ, ಅಲಂಕಾರ, ರಾಕೇಶ್, ಅದೀಪ್, ಉಮೇಶ್ ದಮ್ಮೂರ್, ಪ್ರಶಾಂತ್ ಕುಮಾರ್ ತಿಗಡಿ ಸೇರಿದಂತೆ ಹಲವರು ಉಪಸ್ಥಿತರಿದ್ದು ಕಾರ್ಯಕ್ರಮದ ಯಶಸ್ಸಿಗೆ ಸಹಕಾರ ನೀಡಿದರು.
ಬೋಧಿವೃಕ್ಷ ಗೆಳೆಯರ ಬಳಗವು ಪ್ರತಿವರ್ಷ ಅಂಬೇಡ್ಕರ್ ಜಯಂತ್ಯೋತ್ಸವವನ್ನು ವಿವಿಧ ಸಾಮಾಜಿಕ ಸೇವಾ ಕಾರ್ಯಕ್ರಮಗಳೊಂದಿಗೆ ಆಚರಿಸುತ್ತಿದ್ದು, ಈ ಬಾರಿ ಉಪಹಾರ ವಿತರಣೆ ಮೂಲಕ ಸಮಾಜಸೇವೆಗಾಗಿ ಉದಾಹರಣೆಯಾದಂತಾಗಿದೆ.