ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ: ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಗೌರವ

ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ: ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಗೌರವ

ಡಾ. ಬಿ.ಆರ್. ಅಂಬೇಡ್ಕರ್ ಜಯಂತ್ಯೋತ್ಸವ: ರಾಜ್ಯ ಪ್ರಶಸ್ತಿ ಪುರಸ್ಕೃತರಿಗೆ ಗೌರವ

ಕಲಬುರಗಿ: ಸಮತಾ ಸೈನಿಕ ದಳದ ಆಶ್ರಯದಲ್ಲಿ ನಗರದ ಸರದಾರ ವಲ್ಲಭಭಾಯಿ ಪಟೇಲ್ ವೃತ್ತದಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ಅವರ 134ನೇ ಜಯಂತ್ಯೋತ್ಸವ ಭಾವಪೂರ್ಣವಾಗಿ ಆಚರಿಸಲಾಯಿತು. ಈ ಸಂದರ್ಭ ರಾಜ್ಯ ಮಟ್ಟದ ಅಂಬೇಡ್ಕರ್ ಪ್ರಶಸ್ತಿ ಪುರಸ್ಕೃತರಿಗೆ ಸನ್ಮಾನಿಸಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ಕಲಬುರಗಿ ದಕ್ಷಿಣ ಕ್ಷೇತ್ರದ ಶಾಸಕ ಅಲ್ಲಮಪ್ರಭು ಪಾಟೀಲ, ಮೇಯರ್ ಯಲ್ಲಪ್ಪ ನಾಯಕೋಡಿ, ಶ್ರೀ ಪೂಜ್ಯ ವರಜ್ಯೋತಿ ಭಂತೆ, ಬಸಣ್ಣಾ ಸಿಂಗೆ, ಡಾ. ಎಂ. ವೆಂಕಟಸ್ವಾಮಿ, ರಾಜಗೋಪಾಲ ರೆಡ್ಡಿ, ಪ್ರೊ. ರಮೇಶ ಲಂಡನಕರ್, ಡಾ. ವಿಠ್ಠಲ ದೊಡ್ಡಮನಿ, ಎ.ಬಿ. ಹೊಸಮನಿ, ಡಾ. ಹನುಮಂತರಾವ ದೊಡ್ಡಮನಿ, ಯಶ್ವಂತ ಶೀಂದೆ, ಬಸವರಾಜ ಆಲಗೂಡ, ರಾಜಕುಮಾರ ನಡಗೇರಿ ಸೇರಿದಂತೆ ಅನೇಕ ಗಣ್ಯರು ಭಾಗವಹಿಸಿದ್ದರು.

ಡಾ. ಅಂಬೇಡ್ಕರ್ ಅವರ ತತ್ವಗಳನ್ನು ಸ್ಮರಿಸುವುದರೊಂದಿಗೆ, ಸಮಾನತೆ, ಮೌಲ್ಯಬದ್ಧತೆ ಹಾಗೂ ಮಾನವೀಯತೆಯ ಸಂದೇಶವನ್ನು ಹರಡುವ ಉದ್ದೇಶದೊಂದಿಗೆ ಕಾರ್ಯಕ್ರಮ ನಡೆಯಿತು.