ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವ ಆಚರಣೆ

ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವ ಆಚರಣೆ
ಕಲಬುರಗಿ, ಎ.14: ನಗರದ ಟೌನ್ ಹಾಲ್ ಹತ್ತಿರ ಮಹಾನಗರ ಪಾಲಿಕೆ ನೌಕರರ ಸಂಘದ ವತಿಯಿಂದ ಡಾ. ಬಿ.ಆರ್. ಅಂಬೇಡ್ಕರ್ ರವರ 134ನೇ ಜಯಂತ್ಯೋತ್ಸವವನ್ನು ಭಾವಪೂರಿತವಾಗಿ ಆಚರಿಸಲಾಯಿತು. ಈ ಹಿನ್ನೆಲೆಯಲ್ಲಿ ಆಯೋಜಿಸಲಾದ ಬಹಿರಂಗ ಸಭೆಯನ್ನು ಮೇಯರ್ ಶ್ರೀ ಯಲ್ಲಪ್ಪ ನಾಯಕೋಡಿ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಪೂಜ್ಯ ಭಂತೆ ವರಜ್ಯೋತಿ, ಸಂಘದ ಅಧ್ಯಕ್ಷ ಶ್ರೀ ಶಿವಕುಮಾರ ಮುಡ್ಡಿ, ಗೌರವಾಧ್ಯಕ್ಷ ಶ್ರೀ ರಾಜು ಕಟ್ಟಿಮನಿ, ಡಾ. ನಾಗಲಕ್ಷ್ಮೀ ಚೌಧರಿ, ಡಾ. ಅಪ್ಪುಗೆರೆ ಸೋಮಶೇಖರ, ರಮೇಶ ಪಟ್ಟೆದಾರ, ವಿದ್ಯಾಧರ ಕಾಂಬಳೆ, ಶರಣು ಅತನೂರ, ಅನೀಲಕುಮಾರ ಚಕ್ರ ಮತ್ತು ಇತರ ಗಣ್ಯರು ಭಾಗವಹಿಸಿದ್ದರು.
ಅಂಬೇಡ್ಕರ್ ಅವರ ಭಾವನೆಗಳನ್ನು ನುಡಿದವರಲ್ಲಿ ಕೆಲವರು ಸಮಾಜ ಸುಧಾರಣೆ, ಶೈಕ್ಷಣಿಕ ಹಕ್ಕುಗಳು ಹಾಗೂ ಸಾಮಾಜಿಕ ಸಮಾನತೆಗೆ ಸಂಬಂಧಿಸಿದಂತೆ ಮಹತ್ವದ ಸಂದೇಶಗಳನ್ನು ಹಂಚಿಕೊಂಡರು.