38ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಮೂಲಗೆ ಚಾಲನೆ
38ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ಮೂಲಗೆ ಚಾಲನೆ
ಕಲಬುರಗಿ: ನಗರದ ಪಾರ್ವತಿ ಕಲ್ಯಾಣ ಮಂಟಪದಲ್ಲಿ ದೇವಾಜಿ ನಾಯಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ ಮಿಟ್ಟು ನಾಯಕ ಕನ್ನಡ ಪ್ರೌಢಶಾಲೆ ಜಾಧವ ಸಂಯುಕ್ತ ಪದವಿ ಪೂರ್ವ ಕಾಲೇಜು ಶ್ರೀ ಬಾಲಾಜಿ ಆಂಗ್ಲ ಮಾಧ್ಯಮ ಶಾಲೆಯ 38ನೇ ಶಾಲಾ ವಾರ್ಷಿಕೋತ್ಸವ ಸಮಾರಂಭವನ್ನು ದಕ್ಷಿಣ ಕಾಂಗ್ರೇಸ್ ಮುಖಂಡರಾದ ನೀಲಕಂಠರಾವ ಮೂಲಗೆ ಅವರು ಉದ್ಘಾಟಿಸಿದರು.
ಈ ಕಾರ್ಯಕ್ರಮದ ವೇದಿಕೆಯಲ್ಲಿ ಶಾಲಾ ಶಿಕ್ಷಣ ಇಲಾಖೆ ಉಪನಿರ್ದೇಶಕ ಸೂರ್ಯಕಾಂತ ಮದಾನೆ, ಉಪನಿರ್ದೇಶಕರ ಕಛೇರಿಯ ಶಿಕ್ಷಣ ಅಧಿಕಾರಿ ಶಂಕ್ರಮ್ಮ ಭೀ ಢವಳಗಿ, ಮಹಾನಗರ ಪಾಲಿಕೆ ಮಾಜಿ ವಿರೋಧ ಪಕ್ಷದ ನಾಯಕರು, ಕರ್ನಾಟಕ ಪ್ರದೇಶ ಬಂಜಾರ(ಲಂಬಾಣಿ) ಸೇವಾ ಸಂಘ ಬೆಂಗಳೂರು ಕಾರ್ಯಾಧ್ಯಕ್ಷರು ಹಾಗೂ ದೇವಾಜಿ ನಾಯಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ವಿಠಲ ಜಾಧವ, ಪಂಚಾಯತ ಅಭಿವೃದ್ಧಿ ಅಧಿಕಾರಿ ಮೆನಕಾ ಎನ್ ರಾಠೋಡ, ದಂತ ಆರೋಗ್ಯಾಧಿಕಾರಿ ವಿಜೇತಾ ಜಾಧವ, ಸಂಸ್ಥೆಯ ಆಡಳಿತಾಧಿಕಾರಿ ಕೃಷ್ಣಕುಮಾರ ವಿ ಜಾಧವ್, ಸಂಸ್ಥೆಯ ರೂವರಿ ಚಂದುಬಾಯಿ ವಿ ಜಾಧವ್ ಸೇರಿದಂತೆ ಶಿಕ್ಷಣ ಸಂಸ್ಥೆಯ ಎಲ್ಲಾ ಶಾಲೆಗಳ ಮುಖ್ಯಗುರುಗಳು, ಶಿಕ್ಷಕರು, ವಿದ್ಯಾರ್ಥಿಗಳು ಇದ್ದರು. ಶ್ರೀ ಬಾಲಾಜಿ ಆಂಗ್ಲ ಮಾಧ್ಯಮ ಶಾಲೆಯ ಪುಟ್ಟ ಮಕ್ಕಳಿಂದ ಹಾಗೂ ಇತರೆ ಶಾಲಾ ಕಾಲೇಜುಗಳ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ರಾಜಶೇಖರ ಮುಗಳಿ ಹಾಗೂ ವಂದನಾರ್ಪಣೆಯನ್ನು ಶಿವಕುಮಾರ ಸಹ ಶಿಕ್ಷಕರು ನಡೆಸಿಕೊಟ್ಟರು.