ಯಾದಗಿರಿ ಜಿಲ್ಲೆಗೆ ಜ್ಯೋತಿ 96% ಅಂಕಗಳೊಂದಿಗೆ ಪ್ರಥಮ ಸ್ಥಾನ"

ಯಾದಗಿರಿ ಜಿಲ್ಲೆಗೆ ಜ್ಯೋತಿ 96% ಅಂಕಗಳೊಂದಿಗೆ ಪ್ರಥಮ ಸ್ಥಾನ"
ಶಹಪುರ :ತಾಲೂಕಿನ ಸಗರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಜ್ಯೋತಿ ತಂದೆ ಯಂಕಣ್ಣ ಎಂಬ ವಿದ್ಯಾರ್ಥಿನಿ 2025 ನೇ ಸಾಲಿನಲ್ಲಿ ಪಿಯುಸಿ ದ್ವಿತೀಯ ವರ್ಷದ ಪರೀಕ್ಷೆಯಲ್ಲಿ (600/576) ಶೇ 96% ಅಂಕಗಳನ್ನು ಗಳಿಸುವುದರ ಮೂಲಕ ಯಾದಗಿರಿ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದುಕೊಂಡಿದ್ದಾಳೆ.
ಜಿಲ್ಲೆಯ ಸರಕಾರಿ ಪದವಿ ಪೂರ್ವ ಕಾಲೇಜುಗಳ ಪಟ್ಟಿಯಲ್ಲಿಯೇ ಅತಿ ಹೆಚ್ಚು ಅಂದರೆ ಒಟ್ಟು ಕಾಲೇಜಿನ 85% ರಷ್ಟು ಫಲಿತಾಂಶ ತಂದುಕೊಟ್ಟ ಕಾಲೇಜು ಇದಾಗಿದೆ. ಹೈಟೆಕ್ ಕಾಲೇಜುಗಳಿಗಿಂತ ಸರಕಾರಿ ಕಾಲೇಜುಗಳು ಕಡಿಮೆ ಇಲ್ಲ ಎಂಬುದನ್ನು ಗ್ರಾಮೀಣ ಭಾಗದ ರೈತರ ಮಕ್ಕಳು ತೋರಿಸಿಕೊಟ್ಟಿದ್ದಾರೆ.
ನಾನು ಮುಂದೆ ಓದಿ ಉನ್ನತ ಮಟ್ಟದ ಅಧಿಕಾರಿಯಾಗಿ ಸಮಾಜ ಸೇವೆ ಮಾಡಬೇಕೆಂಬ ಆಸೆಯ ನನ್ನದಾಗಿದೆ ಎಂದು ವಿದ್ಯಾರ್ಥಿನಿ ತಮ್ಮ ಮನದಾಳದ ಮಾತುಗಳು ನಮ್ಮೊಂದಿಗೆ ಹಂಚಿಕೊಂಡಳು.ಈ ವಿದ್ಯಾರ್ಥಿನಿಯ ಸಾಧನೆಗೆ ಕಾಲೇಜಿನ ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಎಸ್‌ಡಿಎಂಸಿ ಉಪಾಧ್ಯಕ್ಷರು, ಸದಸ್ಯರು,ಹರ್ಷ ವ್ಯಕ್ತಪಡಿಸಿದ್ದಾರೆ