ಕೋಟನೂರ ( ಡಿ ) ಪ್ರಕರಣದಲ್ಲಿ ಸಿಲುಕಿಸಲು ಯತ್ನ : ಆಂದೋಲ ಸಿದ್ದಲಿಂಗ ಸ್ವಾಮೀಜಿ ಆರೋಪ
ಕಲಬುರಗಿ : ಕೋಟನೂರ (ಡಿ ) ಗ್ರಾಮದಲ್ಲಿ ಡಾ.ಬಿ. ಆರ್ ಅಂಬೇಡ್ಕರ್ ಪುತ್ತಳಿಗೆ ಜನವರಿ 22 ರಂದು ನಡೆದ ಅವಮಾನ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಲು ಯತ್ನಿಸಿದ ಎಸಿಪಿ ರಾಜಣ್ಣ ಅವರನ್ನು ಸೇವೆಯಿಂದ ಅಮಾನತು ಮಾಡಬೇಕೆಂದು ಆಂದೋಲಾ ಕರುಣೇಶ್ವರ ಮಠದ ಸಿದ್ದಲಿಂಗ ಸ್ವಾಮೀಜಿ ಆಗ್ರಹಿಸಿದರು.
ಜುಲೈ 31 ರಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಪ್ರಕರಣದಲ್ಲಿ ಸಂಗಮೇಶ್ ಮಾಲಿ ಪಾಟೀಲ ಅವರಿಗೆ ವಿ.ವಿ.ಠಾಣೆ ಪೊಲೀಸರು ಬಂಧಿಸಿದರು. ಬಿಡುಗಡೆಯಾದ ನಂತರ ಅವರ ಮೇಲೆ ಮತ್ತು ಅವರ ಕುಟುಂಬದವರ ಮೇಲೆ ದುಷ್ಕರ್ಮಿಗಳಿಂದ ನಡೆದ ಹಲ್ಲೆ ಕುರಿತು ಸಂಗಮೇಶ ಮನೆಗೆ ಹೋಗಿ ಧೈರ್ಯ ತುಂಬುವ, ಉದ್ದೇಶದಿಂದ ಜುಲೈ 28 ರಂದು ಶ್ರೀ ರಾಮ ಸೇನೆ ಸಂಸ್ಥಾಪಕ ಪ್ರಮೋದ್ ಮುತಾಲಿಕ್, ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ, ಯಾದಗಿರಿಯ ವಿಜಯ ಪಾಟೀಲ್ ಅವರೊಂದಿಗೆ ಭೇಟಿ ನೀಡಿದ್ದೆವು. ಆಗ ಪುತ್ತಳಿಗಿ ಅವಮಾನ ಪ್ರಕರಣದ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ ಸಂಗಮೇಶ, ನನ್ನನ್ನು ಸಿಲುಕಿಸಲು ಯತ್ನಿಸಿದ ವಿಷಯ ಗಮನಕ್ಕೆ ತಂದರು. ಸಿದ್ದಲಿಂಗ ಶ್ರೀ ಹೆಸರು ಹೇಳು ಎಂದು ಸಂಗಮೇಶನಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ ಎಂದು ತಿಳಿಸಿದರು. ಎಂದರು.
ಜ.22 ರಂದು ಕಲಬುರಗಿ ರಾಮ ತೀರ್ಥದಲ್ಲಿ ಶ್ರೀರಾಮ ಸೇನೆ ಮತ್ತು ರಾಮನ ಭಕ್ತರಿಂದ ದೀಪೋತ್ಸವ ಹಮ್ಮಿಕೊಳ್ಳಲಾಗಿತ್ತು ಕಾರ್ಯಕ್ರಮದಲ್ಲಿ ಭಾಗಿಯಾಗಿ ರಾತ್ರಿ 9:00 ಗೆ ಆಂದೋಲಕ್ಕೆ ತೆರಳಿದ್ದೇನೆ.
ಜುಲೈ 28ರ ವರೆಗೆ ಸಂಗಮೇಶ್ ಯಾರು ಎಂಬುದು ಕೂಡ ನನಗೆ ತಿಳಿದಿರಲಿಲ್ಲ . ಆದರೆ ರಾಷ್ಟ್ರ ನಾಯಕರ ಪುತ್ತರಿಗೆ ಅವಮಾನ ಪ್ರಕರಣದಲ್ಲಿ ನನ್ನನ್ನು ಸಿಲುಕಿಸಿ ಜೈಲಿಗೆ ತಳ್ಳುವ ಮುನ್ನಾರ್ ನಡೆಸಿದ ಪೊಲೀಸ್ ಅಧಿಕಾರಿ ಹಾಗೂ ಇವರಿಗೆ ಕುಮ್ಮಕ್ಕು ನೀಡಿದವರ ವಿರುದ್ಧ ತನಿಖೆ ನಡೆಸಬೇಕೆಂದು ಅವರು ಆಗ್ರಹಿಸಿದ್ದಾರೆ.
ಈ ವಿಷಯ ಕುರಿತು ಕೇಂದ್ರ ಸಚಿವ ಅಮಿತ್ ಶಾ ಅವರಿಗೆ ಇ-ಮೇಲ್ ಮೂಲಕ ದೂರು ನೀಡಲಾಗಿದೆ ಎಂದು ತಿಳಿಸಿದರು. ಹುಲ್ಲೇಶ್ ಮದ್ರಿ ಮಲ್ಕಣ್ಣ ಪತ್ರಿಕಾಗೋಷ್ಠಿಯಲ್ಲಿದ್ದರು.