ಕಲಬುರಗಿಯಲ್ಲಿ 1814 ಕೆ ಜಿ ಗಾಂಜಾ ವಶ : ಅಬಕಾರಿ ಅಧಿಕಾರಿಗಳ ದಾಳಿ
ಕಲಬುರಗಿಯಲ್ಲಿ 1814 ಕೆ ಜಿ ಗಾಂಜಾ ವಶ : ಅಬಕಾರಿ ಅಧಿಕಾರಿಗಳ ದಾಳಿ
ಕಲಬುರಗಿ : ೨೫ ನೇ ಆಗಸ್ಟ್, ನಿನ್ನೆ ಮಧ್ಯಾಹ್ನ ಅಬಕಾರಿ ಅಧಿಕಾರಿಗಳು ಅಫಜಲಪುರ ತಾಲ್ಲೂಕಿನ ಕರ್ಜಗಿ ಗ್ರಾಮದಲ್ಲಿ ಅಕ್ರಮವಾಗಿ ಕೂಡಿಟ್ಟ ಗಾಂಜಾ ವಶಪಡಿಸಿಕೊಂಡಿದ್ದಾರೆ.
ಅಬಕಾರಿ ಜಂಟಿ ಆಯುಕ್ತರು ಮತ್ತು ಅಬಕಾರಿ ಉಪ ಆಯುಕ್ತರು ಕಲಬುರಗಿ ರವರ ನಿರ್ದೇಶನದ ಮೇರೆಗೆ ಕಲಬುರಗಿ ಉಪ ವಿಭಾಗದ ಉಪ ಅಧೀಕ್ಷಕರಾದ ದೊಡ್ಡಪ್ಪ ಹೆಬಳೆ ರವರ ನೇತೃತ್ವದಲ್ಲಿ,, ಅಬಕಾರಿ ನಿರೀಕ್ಷಕರಾದ ನರೇಂದ್ರ ಹಾಗೂ ಅಬಕಾರಿ ಉಪ ನಿರೀಕ್ಷಕರಾದ ರಾಚಮ್ಮ ಹಾಗೂ ಸಿಬ್ಬಂದಿಗಳಾದ ಮೊಹಮ್ಮದ್ ಮುಬಿನ್, ವಸಂತಕುಮಾರ್ ಇವರುಗಳ ತಂಡ ದಾಳಿ ನಡೆಸಿ
ಕಲಬುರಗಿ ಜಿಲ್ಲೆಯ ಅಫಜಲಪೂರ ತಾಲ್ಲೂಕಿನ ಕರ್ಜಗಿ ಗ್ರಾಮದ ನೀಲಾಬಾಯಿ ಗಂಡ ಚಂದ್ರಕಾಂತ ವಾಡಿ ಎಂಬುವವಳ ಟಿನ್ ಶೆಡ್ ಮನೆಯ ಮೇಲೆ ದಾಳಿ ಮಾಡಿದಾಗ ಮನೆಯಲ್ಲಿ ಅಕ್ರಮವಾಗಿ ಮಾರಾಟದ ಸಲುವಾಗಿ ಸಂಗ್ರಹಿಸಿಟ್ಟಿದ್ದ ಹೂ, ಬೀಜ ಮತ್ತು ಎಲೆಗಳಿಂದ ಕೂಡಿದ್ದ ಒಟ್ಟು 1.814 Kg ಒಣ ಗಾಂಜಾವನ್ನು ವಶಪಡಿಸಿಕೊಂಡು, ಆರೋಪಿ ಮಹಿಳೆ ನೀಲಾಬಾಯಿಯನ್ನು ಬಂಧಿಸಿ ಎನ್ ಡಿ ಪಿ ಎಸ್ ಕಾಯ್ದೆ 1985 ರ ವಿವಿಧ ಕಲಂ ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ ಎಂದು ಕಲಬುರಗಿ ಉಪ ವಿಭಾಗದ ಉಪ ಅಧೀಕ್ಷಕರಾದ ದೊಡ್ಡಪ್ಪ ಹೆಬಳೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.