ಅಪರಿಚಿತ ಮಹಿಳೆ ಕೊಲೆ ಪ್ರಕರಣ ಬಿಚ್ಚಿದ ಕಲಬುರಗಿ ಜಿಲ್ಲಾ ಪೊಲೀಸರು: ಆರೋಪಿತನ ಬಂಧನ

ಅಪರಿಚಿತ ಮಹಿಳೆ ಕೊಲೆ ಪ್ರಕರಣ ಬಿಚ್ಚಿದ ಕಲಬುರಗಿ ಜಿಲ್ಲಾ ಪೊಲೀಸರು: ಆರೋಪಿತನ ಬಂಧನ

ಅಪರಿಚಿತ ಮಹಿಳೆ ಕೊಲೆ ಪ್ರಕರಣ ಬಿಚ್ಚಿದ ಕಲಬುರಗಿ ಜಿಲ್ಲಾ ಪೊಲೀಸರು: ಆರೋಪಿತನ ಬಂಧನ

ಸಂದರ್ಶನ ಸ್ಥಳ: ಕಿಣ್ಣಿ ಸಡಕ ಗ್ರಾಮ, ತಾಲ್ಲೂಕು: ಕಮಲಾಪುರ, ಜಿಲ್ಲೆ: ಕಲಬುರಗಿ 

ದಿನಾಂಕ: 21 ಏಪ್ರಿಲ್ 2025 ಕಿಣ್ಣಿ ಸಡಕ ಗ್ರಾಮದ ಸೀಮಾಂತರದ ಹೊಲದಲ್ಲಿ ಅಪರಿಚಿತ ಮಹಿಳೆಯ ಶವ ಸುಟ್ಟುಹಾಕಿರುವ ಪ್ರಕರಣದಲ್ಲಿ, ಕಲಬುರಗಿ ಜಿಲ್ಲೆಯ ಪೊಲೀಸರು ತಕ್ಷಣದ ಕ್ರಮ ಕೈಗೊಂಡು ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ್ದಾರೆ.

ದಿನಾಂಕ 06-04-2025 ರಂದು ಶ್ರೀ ನೀಲಕಂಠ, ತಂದೆ ಶರಣಪ್ಪ ಪಂಚಾಳ, ಸಾಃ ಕಿಣ್ಣಿ ಸಡಕ ಗ್ರಾಮ ಇವರು ಕಮಲಾಪುರ ಪೊಲೀಸ್ ಠಾಣೆಗೆ ಹಾಜರಾಗಿ ದೂರು ಸಲ್ಲಿಸಿದರು. ಅವರ ಹೋಲದ ಸರ್ವೆ ನಂ. 99/2 ನೇದ್ದರ ತೋಗರಿಯ ಕೊಯಿಲಿಗಳ ಮೇಲೆ ದಿನಾಂಕ 05-04-2025 ರಂದು ರಾತ್ರಿ 7 ಗಂಟೆಯಿಂದ ಬೆಳಿಗ್ಗೆ 8 ಗಂಟೆಯ ನಡುವೆ, ಅಪರಿಚಿತ ಮಹಿಳೆಯ ಶವವನ್ನು ಸುಟ್ಟು ಹಾಕಲಾಗಿದೆ ಎಂಬ ಮಾಹಿತಿ ನೀಡಿದರು.

ಈ ಕುರಿತು ಕಮಲಾಪುರ ಪೊಲೀಸ್ ಠಾಣೆಯಲ್ಲಿ ಗುನ್ನೆ ನಂ. 53/2025, ಭಾರತೀಯ ದಂಡ ಸಂಹಿತೆಯ ಸೆಕ್ಷನ್ 238 ಮತ್ತು 103 ಬಿ.ಎನ್.ಎಸ್. ಅಡಿಯಲ್ಲಿ ಪ್ರಕರಣ ದಾಖಲಾಗಿದ್ದು, ತಕ್ಷಣವೇ ತನಿಖೆ ಆರಂಭಿಸಲಾಯಿತು.

ಘಟನೆಗೆಯಲ್ಲಿ ಶವದ ಗುರುತುಸಲಾಗದ ಕಾರಣದಿಂದ, ಶವದ ಬಳಿ ಸಿಕ್ಕ ವಸ್ತುಗಳ ಮತ್ತು ಭಾವಚಿತ್ರಗಳ ಆಧಾರದಿಂದ ಪೋಲೀಸ್ ಇಲಾಖೆ ಕಲಬುರಗಿ, ಬೀದರ, ಯಾದಗಿರಿ, ಹುಮನಾಬಾದ, ಹೈದ್ರಾಬಾದ್, ಉಮರ್ಗಾ, ಸೋಲಾಪುರ ಮತ್ತು ಸಂಗರೆಡ್ಡಿ ಮೊದಲಾದ ಸ್ಥಳಗಳಲ್ಲಿ ಪ್ರಕಟಣೆಗಳನ್ನು ಅಂಟಿಸಿ ಮಾಹಿತಿ ಸಂಗ್ರಹಿಸಲು ಹರಸಾಹಸ ಪಡಬೇಕಾಯಿತು.

ಪೊಲೀಸ್ ಅಧೀಕ್ಷಕರಾದ ಶ್ರೀ ಮಹೇಶ್ ಮೇಘಣ್ಣ ಹಾಗೂ ಉಪ-ಪೊಲೀಸ್ ಅಧೀಕ್ಷಕರಾದ ಶ್ರೀ ಲೋಕೇಶ್ವರಪ್ಪ ಅವರ ಮಾರ್ಗದರ್ಶನದಲ್ಲಿ, ಸಿಪಿಐ ಶ್ರೀ ಶಿವಶಂಕರ ಸಾಹು (ಕಮಲಾಪುರ ವೃತ್ತ), ಪಿಎಸ್‌ಐ ಮಂಜುನಾಥ ರೆಡ್ಡಿ (ಕಮಲಾಪುರ), ಪಿಎಸ್‌ಐ ಶ್ರೀಮತಿ ಆಶಾ (ಮಹಾಗಾಂವ), ಹಾಗೂ ಸಿಬ್ಬಂದಿಗಳಾದ ಕುಪೇಂದ್ರ, ರಾಮಚಂದ್ರ, ಶರಣಬಸಪ್ಪ, ಬದ್ದು ರಾಠೋಡ್, ಸಿದ್ದಲಿಂಗ ಮತ್ತು ಬಲರಾಮ ಸೇರಿಕೊಂಡ ತಂಡವನ್ನು ರಚಿಸಲಾಯಿತು.

ತಾಂತ್ರಿಕ ಸಾಕ್ಷ್ಯಗಳು ಹಾಗೂ ಮೊಬೈಲ್ ಕ್ವಾಲ್ಡೇಟಾ ಆಧಾರಿತ ಪರಿಶೀಲನೆಯ ಮೂಲಕ ದಿನಾಂಕ 18-04-2025 ರಂದು ಹೆಬ್ಬಾಳ ಗ್ರಾಮದಲ್ಲಿ ಶಂಕಿತ ಆರೋಪಿ ಶಿವು ಅಲಿಯಾಸ್ ಶಿವಾನಂದ, ತಂದೆ ಬಸವರಾಜ ರಾಜಾಪೂರ (ವಯಸ್ಸು 27), ವಾಸ: ಹೆಬ್ಬಾಳ, ತಾಲ್ಲೂಕು: ಕಾಳಗಿ, ಜಾತಿ: ಕಬ್ಬಲಿಗ ಎಂಬುವವರನ್ನು ಬಂಧಿಸಲಾಯಿತು. ತನಿಖೆಯಲ್ಲಿ ಮೃತ ಆರತಿ ಅka ಗುಂಡಮ್ಮ (ವಯಸ್ಸು 35), ಖಾಸಗಿ ಉದ್ಯೋಗಿಗೆಯಾಗಿ ಕೇಶೋಡ, ಜುನಾಗಡ (ಗುಜರಾತ್) ಮೂಲದವರು, ಪ್ರಸ್ತುತ ಶಿವನಗರ, ಕಲಬುರಗಿಯಲ್ಲಿ ವಾಸವಾಗಿದ್ದರು ಎಂಬುದು ಖಚಿತವಾಯಿತು.

ಶಿವಾನಂದ ಹಾಗೂ ಆರತಿ ನಡುವಿನ ಅನೈತಿಕ ಸಂಬಂಧದ ಹಿನ್ನೆಲೆ, ಆರತಿ ಮದುವೆಗೆ ಒತ್ತಾಯಿಸುತ್ತಿದ್ದ ಕಾರಣ, ಆರೋಪಿತನು ದಿನಾಂಕ 05-04-2025 ರಂದು ತನ್ನ ಮಾರುತಿ ಸುಝುಕಿ ಎರ್ಟಿಗಾ ಕಾರು (ನಂ: ಕೆಎ-02 ಎಂಜೆ-4903) ಮೂಲಕ ದೇವಿನಗರದಿಂದ ಆರತಿಯನ್ನು ಕರೆದುಕೊಂಡು ಹೋಗಿ, ಮೊದಲು ದೇವಲಗಾಣಗಾಪೂರ ದೇವಾಲಯಕ್ಕೆ, ಬಳಿಕ ಕಿಣ್ಣಿ ಸಡಕದ ಹೊಲಕ್ಕೆ ಕರೆದುಕೊಂಡು ಹೋಗಿದ್ದಾನೆ. ಅಲ್ಲಿ ಕಾರಿನಲ್ಲಿ ಬಾಯಿ, ಮೂಗು ಒತ್ತಿ ಹಿಡಿದು, ಕತ್ತು ಹಿಸುಕಿಕೊಂಡು ಕೊಲೆ ಮಾಡಿ, ಶವವನ್ನು ಹೊಲದಲ್ಲಿದ್ದ ತೋಗರಿಯ ಕೊಯಿಲಿಗಳ ಮೇಲೆ ಇಟ್ಟು ಬೆಂಕಿ ಹಚ್ಚಿ ಸುಟ್ಟು ಹಾಕಿದ್ದಾನೆ.

ಆರೋಪಿತನಿಂದ ಮೃತೆಯ ಬೆಳ್ಳಿ ಹಾಗೂ ಬಂಗಾರದ ಆಭರಣಗಳು, ಮೊಬೈಲ್ ಫೋನ್ ಹಾಗೂ ಕೃತ್ಯಕ್ಕೆ ಬಳಸಿದ ಕಾರು ವಶಪಡಿಸಿಕೊಳ್ಳಲಾಗಿದ್ದು, ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಈ ಪ್ರಕರಣದ ಪತ್ತೆಹಚ್ಚುವಲ್ಲಿ ತೊಡಗಿದ್ದ ಎಲ್ಲಾ ಅಧಿಕಾರಿಗಳು ಹಾಗೂ ಸಿಬ್ಬಂದಿಯ ಶ್ರಮದ ಫಲವಾಗಿ ಪ್ರಕರಣ ಯಶಸ್ವಿಯಾಗಿ ಬಿಚ್ಚಿಡಲಾಗಿದ್ದು, ಅವರ ಸೇವೆಗೆ ಕಲಬುರಗಿ ಜಿಲ್ಲಾ ಪೊಲೀಸ್ ಇಲಾಖೆ ಅಭಿನಂದನೆ ಸಲ್ಲಿಸಿದೆ.