ಬ್ರಹ್ಮಪೂರ ಪೊಲೀಸರ ಕಾರ್ಯಾಚರಣೆ ಅಂತರರಾಜ್ಯ ಸುಲಿಗೆಕೋರನ ಬಂಧನ ₹5 ಲಕ್ಷ ಮೌಲ್ಯದ 40 ಗ್ರಾಂ ಬಂಗಾರದ ಆಭರಣ ವಶ

ಬ್ರಹ್ಮಪೂರ ಪೊಲೀಸರ ಕಾರ್ಯಾಚರಣೆ ಅಂತರರಾಜ್ಯ ಸುಲಿಗೆಕೋರನ ಬಂಧನ ₹5 ಲಕ್ಷ ಮೌಲ್ಯದ 40 ಗ್ರಾಂ ಬಂಗಾರದ ಆಭರಣ ವಶ

ಬ್ರಹ್ಮಪೂರ ಪೊಲೀಸರ ಕಾರ್ಯಾಚರಣೆ

ಅಂತರರಾಜ್ಯ ಸುಲಿಗೆಕೋರನ ಬಂಧನ

₹5 ಲಕ್ಷ ಮೌಲ್ಯದ 40 ಗ್ರಾಂ ಬಂಗಾರದ ಆಭರಣ ವಶ

ಕಲಬುರಗಿ, ಮೇ 6:  ನಗರ ಪೊಲೀಸ್ ಆಯುಕ್ತರ ಕಾರ್ಯಾಲಯದ ಅಧೀನದಲ್ಲಿನ ಬ್ರಹ್ಮಪೂರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದ ಸುಲಿಗೆ ಪ್ರಕರಣವನ್ನು ಪೊಲೀಸರು ಯಶಸ್ವಿಯಾಗಿ ಭೇದಿಸಿದ್ದಾರೆ.

ದಿನಾಂಕ 06-05-2025 ರಂದು ಚಂದ್ರಕುಮಾರ್ ನಾಗಲೀಕರ ಅವರು ನೀಡಿದ ದೂರಿನಂತೆ, ಅವರ ತಾಯಿ ಗುರುಬಾಯಿ ನಾಗಲೀಕರ ಅವರು ಮನೆಯಲ್ಲಿದ್ದ ವೇಳೆ ರಾತ್ರಿ ಸುಮಾರು 9 ಗಂಟೆಗೆ ಅಪರಿಚಿತ ವ್ಯಕ್ತಿಯೊಬ್ಬರು ಮನೆಗೆ ನುಗ್ಗಿ, ಅವರ ಕೊರಳಲ್ಲಿದ್ದ 40 ಗ್ರಾಂ ಬಂಗಾರದ ಚೈನ್ ಹಾಗೂ ಕೈಯಲ್ಲಿದ್ದ ಬಳೆಗಳನ್ನು ಜಬರದಸ್ತಿಯಿಂದ ಕಸಿದುಕೊಂಡು ಪರಾರಿಯಾಗಿದ್ದನು. ಕಸಿದುಕೊಂಡ ಆಭರಣಗಳ ಒಟ್ಟು ಮೌಲ್ಯ ರೂ.5 ಲಕ್ಷವಾಗಿದೆ.

ಈ ಕುರಿತು ಬ್ರಹ್ಮಪೂರ ಪೊಲೀಸ್ ಠಾಣೆಯಲ್ಲಿ ಕ್ರೈಂ ನಂ.84/2025ರಡಿ ಪ್ರಕರಣ ದಾಖಲಿಸಲಾಗಿತ್ತು.

ಮಾನ್ಯ ಪೊಲೀಸ್ ಆಯುಕ್ತರಾದ ಡಾ. ಶರಣಪ್ಪ ಎಸ್.ಡಿ., ಐಪಿಎಸ್ ಅವರ ಮಾರ್ಗದರ್ಶನದಲ್ಲಿ ಹಾಗೂ ಹೆಚ್ಚುವರಿ ಪೊಲೀಸ್ ಆಯುಕ್ತರು ಮತ್ತು ಸಹಾಯಕ ಪೊಲೀಸ್ ಆಯುಕ್ತರ ಮೇಲ್ವಿಚಾರಣೆಯಲ್ಲಿ, ಪೊಲೀಸ್ ನಿರೀಕ್ಷಕ ಮಹಾಂತೇಶ ಪಾಟೀಲ್ ನೇತೃತ್ವದ ತಂಡವು ಸಿಸಿ ಟಿವಿ ದೃಶ್ಯಾವಳಿಗಳ ಆಧಾರದಲ್ಲಿ ತನಿಖೆ ನಡೆಸಿ, ಅಂತರರಾಜ್ಯ ಸುಲಿಗೆಕೋರ ಶಿವಕುಮಾರ ದಡಿಯಾ ಶಿವ (35) ಎಂಬಾತನನ್ನು ಬೆಂಗಳೂರು ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಿಂದ ಬಾಡಿ ವಾರೆಂಟ್ ಮೂಲಕ ವಶಕ್ಕೆ ಪಡೆದುಕೊಂಡರು.

ವಿಚಾರಣೆಯಲ್ಲಿ ಆರೋಪಿತನು ಅಪರಾಧವನ್ನು ಒಪ್ಪಿಕೊಂಡಿದ್ದು, ಅವನಿಂದ 40 ಗ್ರಾಂ ಬಂಗಾರದ ಚೈನ್ (ಮೌಲ್ಯ ರೂ.5 ಲಕ್ಷ) ವಶಪಡಿಸಿಕೊಳ್ಳಲಾಗಿದೆ. ಆರೋಪಿತನನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಪ್ರಕರಣವನ್ನು ಯಶಸ್ವಿಯಾಗಿ ಭೇದಿಸಿದ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಯನ್ನು ಮಾನ್ಯ ಪೊಲೀಸ್ ಆಯುಕ್ತರು ಶ್ಲಾಘಿಸಿದ್ದಾರೆ.