ಸಂಘಗಳ ಸಮಾರೋಪ ಸಮಾರಂಭಕ್ಕೆ ಭರ್ಜರಿ ಡಿಸಿ ಫೌಜಿಯಾ ತರನ್ನೂಮ್ ಚಾಲನೆ

ಸಂಘಗಳ ಸಮಾರೋಪ ಸಮಾರಂಭಕ್ಕೆ ಭರ್ಜರಿ ಡಿಸಿ ಫೌಜಿಯಾ ತರನ್ನೂಮ್ ಚಾಲನೆ

ಸಂಘಗಳ ಸಮಾರೋಪ ಸಮಾರಂಭಕ್ಕೆ ಭರ್ಜರಿ ಡಿಸಿ ಫೌಜಿಯಾ ತರನ್ನೂಮ್ ಚಾಲನೆ

ಕಲಬುರಗಿ, ಎಪ್ರಿಲ್ 5 – ನಗರದ ಸರಕಾರಿ ಮಹಿಳಾ ಪಾಲಿಟೆಕ್ನಿಕ್ ಕಾಲೇಜಿನಲ್ಲಿ 2024–25ನೇ ಸಾಲಿನ ವಿದ್ಯಾರ್ಥಿ ಸಂಘ, ಕ್ರೀಡಾ ಸಂಘ, ಎನ್‌ಎಸ್‌ಎಸ್ ಮತ್ತು ರೆಡ್ ಕ್ರಾಸ್ ಘಟಕಗಳ ಸಮಾರೋಪ ಸಮಾರಂಭ ಭವ್ಯವಾಗಿ ನೆರವೇರಿತು. ಈ ಕಾರ್ಯಕ್ರಮಕ್ಕೆ ಜಿಲ್ಲಾಧಿಕಾರಿ ಫೌಜಿಯಾ ತರನ್ನೂಮ್ ಅವರು ಅಧ್ಯಕ್ಷತೆ ವಹಿಸಿ, ಅಧಿಕೃತವಾಗಿ ಉದ್ಘಾಟನೆ ನೆರವೇರಿಸಿದರು.

ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಾಂಶುಪಾಲ ರಾಘವೇಂದ್ರ ಪಿ.ಆರ್ ಅವರ ನೇತೃತ್ವದಲ್ಲಿ ಹಲವು ಗಣ್ಯರು ಪಾಲ್ಗೊಂಡರು. ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳ್ಳುಂಡಗಿ, ಡಾ. ಕೆ. ಗಿರಿಮಲ್ಲ, ಡಾ. ಸಪ್ಪಾ, ಜೀವಾಸಿಂಗ್, ಆರೀಫಾ ಖಾತೂನ, ಕು. ತ್ರಿವೇಣಿ, ಕು. ಪ್ರಿಯದರ್ಶೀನಿ, ಕು. ಜೋಹಾ, ಕು. ಪಲ್ಲವಿ, ತ್ರಿಮುಖೆ ದಿಗಂಬರ, ನಿಂಗನಗೌಡ ಬಿರಾದಾರ, ಸುರೇಶ್ ಜಿ, ಪರಶುರಾಮ ಮತ್ತು ಶಿವಾಜಿ ಪಾಂಡ್ರೆ ಅವರು ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳ ಸಾಧನೆಗೆ ಪ್ರಶಂಸೆ ವ್ಯಕ್ತಪಡಿಸಿ, ಸಮಾಜ ಸೇವಾ ಕಾರ್ಯಗಳಲ್ಲಿ ಯುವಜನರ ಪಾತ್ರದ ಬಗ್ಗೆ ಮುಖ್ಯ ಅತಿಥಿಗಳು ಉಲ್ಲೇಖಿಸಿದರು. ವಿವಿಧ ಸಂಘಗಳ ವಾರ್ಷಿಕ ವರದಿಗಳನ್ನು ಬಿಡುಗಡೆ ಮಾಡಲಾಯಿತು ಮತ್ತು ಉತ್ತಮ ಸೇವೆ ಸಲ್ಲಿಸಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನೂ ನೀಡಲಾಯಿತು.

– ವರದಿ: ಕೆಕೆಪಿ ನ್ಯೂಸ್