ಡಿ.6: ಪರಿನಿರ್ವಾಣ ದಿನ ಆಚರಣೆ
ಡಿ.6: ಪರಿನಿರ್ವಾಣ ದಿನ ಆಚರಣೆ
ಹುಮ್ನಾಬಾದ.ಡಿ.6:ಮಹಾ ಮಾನವತಾವಾದಿ, ಸಂವಿಧಾನ ಶಿಲ್ಪಿ, ಭಾರತ ರತ್ನ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಮಹಾ ಪರಿನಿರ್ವಾಣ ದಿನದ ಅಂಗವಾಗಿ ಹುಮನಾಬಾದ ಪಟ್ಟಣದಲ್ಲಿರುವ ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ರವರ ಪುತ್ಥಳಿಗೆ ಕ್ಷೇತ್ರದ ಜನಪ್ರೀಯ ಶಾಸಕರಾದ ಡಾ. ಸಿದ್ದು ಪಾಟೀಲ ರವರು ಮಾಲಾರ್ಪಣೆ ಮಾಡುವ ಮೂಲಕ ಗೌರವ ನಮನ ಸಲ್ಲಿಸಿದ್ದರು. ಈ ಸಂದರ್ಭದಲ್ಲಿ ಮಂಡಲದ ಅಧ್ಯಕ್ಷರಾದ ಶೀ ಅನಿಲ ಪಸಾರ್ಗಿ, ಡಾ. ಅಂಬೇಡ್ಕರ್ ಅಭಿವೃದ್ದಿ ನಿಗಮ ಮಂಡಳಿ ಮಾಜಿ ನಿರ್ದೇಶಕರಾದ ಶ್ರೀ ಬಸವರಾಜ ಆರ್ಯ, ಶ್ರೀ ಲಕ್ಷ್ಮಿ ಪುತ್ರ ಮಾಳಗೆ, ಶ್ರೀ ಗೌತಮ ಸಾಗರ, ಶ್ರೀ ಗಜೇಂದ್ರ ಕನಕಟಕರ್, ಮಂಡಲದ ಪ್ರಧಾನ ಕಾರ್ಯದರ್ಶಿ ಶ್ರೀ ರವಿ ಹೊಸ್ಸಳ್ಳಿ,, ಶ್ರೀ ನಾಗಭೂಷಣ ಸಂಗಮ, ಶ್ರೀ ವಿನಾಯಕ ಮಂಕೋಜಿ, ಶ್ರೀ ಸುನೀಲ ಪತ್ರಿ, ಶ್ರೀ ಪರಮೇಶ್ವರ ಶೆಡೋಳ, ಶ್ರೀ ಅಸದ ಪಟೇಲ, ಶ್ರೀ ಸಂಜು ವಾಡೇಕರ್, ಶ್ರೀ ಪಪ್ಪುರಾಜ ಚತುರೆ, ಶ್ರೀ ಮಹೇಶ ಕಟ್ಟಿಮನಿ, ಶ್ರೀ ಸಂಗು ಪಾಟೀಲ, ಸೇರಿದಂತೆ ಇನಿತರರು ಉಪಸ್ಥಿತರಿದ್ದರು.