ಕರವೇಗೆ ಶರಣು ಬಿ ಹೊಸಮನಿ ನೇಮಕ

ಕರವೇಗೆ ಶರಣು ಬಿ ಹೊಸಮನಿ ನೇಮಕ

ಕರವೇಗೆ ಶರಣು ಬಿ ಹೊಸಮನಿ ನೇಮಕ

ಕಲಬುರಗಿ: ಕರ್ನಾಟಕ ರಕ್ಷಣಾ ವೇದಿಕೆ(ಕನ್ನಡಿಗರ ಸಾರಥ್ಯ) ದ ಸಂಘಟನೆಯ ಕಲಬುರಗಿ ಜಿಲ್ಲಾಧ್ಯಕ್ಷರಾಗಿ ಶರಣು ಬಿ ಹೊಸಮನಿ ಅವರನ್ನು‌ ನೇಮಕ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರಾದ ಚಳುವಳಿ ಡಾ|| ಚಲಪತಿ ಗೌಡ ತಿಳಿಸಿದ್ದಾರೆ.

     ಕನ್ನಡ ನಾಡು ನಜಡಿ,ಜಲ,ಕಲೆ ಸಂಸ್ಕೃತಿ ಹಾಗೂ ಪರಂಪರೆಯ ಸಂರಕ್ಷಣೆ ಮತ್ತು ಬೆಳವಣಿಗೆಗಾಗಿ ಹಗಲಿರುಳೆನ್ನದೆ ಪ್ರಾಮಾಣಿಕ ಹಾಗೂ ನಿಸ್ವಾರ್ಥ ಸೇವಾ ಮನೋಭಾವದೊಂದಿಗೆ ಕಾರ್ಯವೆಸಗುತ್ತಿರುವ ತಮ್ಮ ಸಾಮಾಜಿಕ ಕಳಕಳಿ ಹಾಗೂ ಸಂಘಟನಾ ಸಾರ್ಮಥ್ಯವನ್ನು ಗುರತಿಸಿ ತಮ್ಮನ್ನು ಕಲಬರಗಿ ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಅವರು ತಿಳಿಸಿದ್ದಾರೆ.

   ಇಂದಿನಿಂದ ತಾವೂ ಕಲಬುರಗಿ ಜಿಲ್ಲಾ ಮತ್ತು ತಾಲೂಕಾ ಪಧಾಧಿಕಾರಿಗಳನ್ನು ಆಯ್ಕೆ ಮಾಡುವ ಅಧಿಕಾರ ಹೊಂದಿದ್ದು,ಸಂಘಟನೆಗೆ ಸಕ್ರಿಯ ಹಾಗೂ ಪ್ರಾಮಾಣಿಕವಾಗಿ ಸೇವೆ ಸಲ್ಲಿಸಬೇಕು ಎಂದು ಆದೇಶ ಪತ್ರದಲ್ಲಿ ತಿಳಿಸಿದ್ದಾರೆ.