ಹುಟ್ಟಿನಿಂದಲೇ ಹೃದಯ ರೋಗಿ ಗರ್ಭಿಣಿ ಹಾಗೂ ಮಗುವನ್ನು ಕಾಪಾಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಹುಟ್ಟಿನಿಂದಲೇ ಹೃದಯ ರೋಗಿ ಗರ್ಭಿಣಿ ಹಾಗೂ ಮಗುವನ್ನು ಕಾಪಾಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಹುಟ್ಟಿನಿಂದಲೇ ಹೃದಯ ರೋಗಿ ಗರ್ಭಿಣಿ ಹಾಗೂ ಮಗುವನ್ನು ಕಾಪಾಡಿದ ಬಸವೇಶ್ವರ ಆಸ್ಪತ್ರೆಯ ವೈದ್ಯರು

ಕಲಬುರ್ಗಿ: ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಬಸವೇಶ್ವರ ಬೋಧನಾ ಹಾಗೂ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಸ್ಪತ್ರೆಯುಲ್ಲಿ ಹುಟ್ಟಿನಿಂದಲೇ ಅತ್ಯಂತ ಸೂಕ್ಷ್ಮ ಹಾಗೂ ಅಪಾಯಕಾರಿ ರೋಗ ಹೊಂದಿರುವ ಶಾರದಾಬಾಯಿ ಕಲಬುರ್ಗಿ ಎಂಬ ಗರ್ಭಿಣಿಗೆ ಯಶಸ್ವಿಯಾಗಿ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿ ಡಾ ಅನಿತಾ ಗೌರಾ ಕೋಣಿನ ಅವರು ವೈದ್ಯಕೀಯ ತಂಡ ತಾಯಿ ಮತ್ತು ಹೆಣ್ಣು ಮಗುವನ್ನು ಆರೋಗ್ಯದಿಂದ ರಕ್ಷಿಸಿ ಸಾರ್ವಜನಿಕರು ಹಾಗೂ ರೋಗಿಯ ಕುಟುಂಬದ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಹುಟ್ಟಿನಿಂದಲೇ ರೋಗ ಹೊಂದಿರುವ ಗರ್ಭಿಣಿ ತನ್ನ 9 ತಿಂಗಳು ಪೂರೈಸಿದ ನಂತರ ಬಸವೇಶ್ವರ ಆಸ್ಪತ್ರೆಗೆ ದಾಖಲಾದಳು.ಆಸ್ಪತ್ರೇಯ ನುರಿತ ವೈದ್ಯಕೀಯ ತಂಡ ಇವಳ ರೋಗದ ಸೂಕ್ಷ್ಮತೆ ಅರಿತು ಸ್ನಾಯು ಗರ್ಭಾಶಯ ವಿಭಾಗದಲ್ಲಿ ದಾಖಲಿಸಲಾಯಿತು. ನಂತರ ಆಸ್ಪತ್ರೆಯ ಕಾರ್ಡಿಯಾಲಜಿಸ್ಟ್, ಅನಸ್ತೇನಿಯಾಲಾಜಿಸ್ಟ, ಇಂಟೆನ್ಸಿವಿಸ್ಟ್ ಹಾಗೂ ನುರಿತ ತಜ್ಞರಿಂದ ಗರ್ಭಿಣಿಯನ್ನು ಪರೀಕ್ಷಿಸಿ ಅವಳ ಆರೋಗ್ಯದ ಮೇಲೆ ಪೂರ್ಣ ನಿಗಾ ವಹಿಸಲಾಯಿತು

ನಂತರ ಅವಳ ಹೃದಯದ ಅಪಾಯ ಮಟ್ಟವನ್ನು ಗಮನದಲ್ಲಿಟ್ಟುಕೊಂಡು ವೈಧ್ಯರು ಎಪಿಡ್ಯುರಲ್ ಅನಸ್ತೇಶಿಯಾದಿಂದ ಸಿಸೇರಿಯನ್ ಶಸ್ತ್ರಚಿಕಿತ್ಸೆ ಮಾಡಿ ತಾಯಿ ಮಗುವನ್ನು ಯಶಸ್ವಿಯಾಗಿ ಕಾಪಾಡಿತು.

ಈ ವೈದ್ಯಕೀಯ ತಂಡದಲ್ಲಿ ನುರಿತ ವೈದ್ಯರಾದ ಡಾ ಸುಮನ್ ಉಮೇಶ್ ಚಂದ್ರ ಅವರ ನೇತೃತ್ವದಲ್ಲಿ ಡಾ ನೀತಾ ಹರವಾಳ,ಡಾ ಭಾಗ್ಯಶ್ರೀ ಪಾಟೀಲ್,ಡಾ ಜ್ಯೋತಿ ಹೋಗ್ಗಾಡೆ, ಡಾ ಎಂ ಡಿ ಯಾಹ್ಯ,ಡಾ ವಿಕಾಸ ಜೋಶಿ,ಡಾ ಸೋಹೈಲ್ ಶಾಲಿ, ಮತ್ತು ಡಾ ಈರಣ್ಣ ಹೀರಾಪೂರ ಭಾಗವಹಿಸಿದ್ದರು.

ಈ ಗರ್ಭಿಣಿ ಹಾಗೂ ಅವಳ ಮಗುವನ್ನು ಉಳಿಸಿ ಅಪಾಯದಿಂದ ಪಾರು ಮಾಡಿದ್ದಕ್ಕೆ ಅವರ ಕುಟುಂಬದ ಸದಸ್ಯರು ಹೈದರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಶಶೀಲ್ ಜಿ ನಮೋಶಿ ಹಾಗೂ ಉಪಾಧ್ಯಕ್ಷರಾದ ರಾಜಾ ಭಿ ಭೀಮಳ್ಳಿ ಕಾರ್ಯದರ್ಶಿಗಳಾದ ಉದಯಕುಮಾರ್ ಚಿಂಚೋಳಿ ಹಾಗೂ ಆಸ್ಪತ್ರೆಯ ಸಂಚಾಲಕರು ಆಡಳಿತ ಮಂಡಳಿ ಸದಸ್ಯರಾದ ಡಾ ಕಿರಣ್ ದೇಶಮುಖ್ ವೈದ್ಯಕೀಯ ಅಧೀಕ್ಷಕರಾದ ಡಾ ಆನಂದ ಗಾರಂಪಳ್ಳಿ ಯುವರಿಗೆ ವಂದನೆಗಳು ತಿಳಿಸಿದ್ದಾರೆ ಅಷ್ಟೇ ಅಲ್ಲದೆ ಬಸವೇಶ್ವರ ಆಸ್ಪತ್ರೆಯು ಈಗ ಈ ಭಾಗದಲ್ಲಿ ಯೇ ವೈದ್ಯಕೀಯ ಸಂಜೀವಿನಿಯಾಗಿ ಕಾರ್ಯನಿರ್ವಹೀಸುತ್ತಿದೆ ಎಂದು ಕೊಂಡಾಡಿದ್ದಾರೆ.