ಎಂಎಸ್‌ಎಂಇ ಸ್ನೇಹಿ ಕೇಂದ್ರ ಬಜೆಟ್ ಗೆ ಶರಣಕುಮಾರ ಮೆಚ್ಚುಗೆ

ಎಂಎಸ್‌ಎಂಇ ಸ್ನೇಹಿ ಕೇಂದ್ರ ಬಜೆಟ್ ಗೆ ಶರಣಕುಮಾರ ಮೆಚ್ಚುಗೆ

ಎಂಎಸ್‌ಎಂಇ ಸ್ನೇಹಿ ಕೇಂದ್ರ ಬಜೆಟ್ ಗೆ ಶರಣಕುಮಾರ ಮೆಚ್ಚುಗೆ

ಕಲಬುರಗಿ: ಮಾನ್ಯ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ರವರು ಮಂಡಿಸಿದ 2025-26 ಕೇಂದ್ರ ಬಜೆಟ್ ಎಂಎಸ್ಎಂಇ ಸ್ನೇಹಿಯಾಗಿದೆ ಎಂದು ಬಿಜೆಪಿ ಮುಖಂಡ ಶರಣಕುಮಾರ ಹಾಗರಗುಂಡಗಿ ಹೇಳಿದರು. 

                                 ಈ ಕುರಿತು ಪತ್ರಿಕಾ‌ ಹೇಳಿಕೆ ನೀಡಿದ ಅವರು,ಎಂಎಸ್ಎಂಇ ಗಳು ಮತ್ತು ನವೋದ್ಯಮಗಳಿಗೆ ಔಪಚಾರಿಕ ಸಾಲದ ಪ್ರವೇಶವನ್ನು ಸುಲಭಗೊಳಿಸಲು ಸಿ.ಜಿ.ಟಿ.ಎಂ.ಎಸ್.ಇ. ಯೋಜನೆಯಡಿಯಲ್ಲಿ ಕ್ರೆಡಿಟ್ ಗ್ಯಾರಂಟಿ ಕವರ್‌ ಅನ್ನು ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ, ಪ್ರಸ್ತುತ 5 ಕೋಟಿ ರೂ. ಗಳಿಂದ 10 ಕೋಟಿ ರೂ.ಗಳಿಗೆ ಹೆಚ್ಚಿಸಿರುವುದು ಸ್ವಾಗತಾರ್ಹ ಎಂದರು. 

             ಇದರಿಂದಾಗಿ ಸೂಕ್ಷ್ಮ ಮತ್ತು ಸಣ್ಣ ಉದ್ಯಮಗಳಿಗೆ ಮುಂದಿನ 5 ವರ್ಷಗಳಲ್ಲಿ ರೂ. 1.5 ಕೋಟಿ ಲಕ್ಷ ಹೆಚ್ಚುವರಿ ಸಾಲ ಸಿಗಲಿದೆ. ಹಾಗೂ ನವೋದ್ಯಮಗಳಿಗೆ, ಪ್ರಸ್ತುತ 10 ಕೋಟಿ ರೂ.ಗಳಿಂದ 20 ಕೋಟಿ ರೂ. ಗಳಿಗೆ ಹೆಚ್ಚಿಸಲಾಗಿದೆ ಮತ್ತು 27 ಕೇಂದ್ರೀಕೃತ ವಲಯಗಳಲ್ಲಿನ ಸಾಲಗಳಿಗೆ ಗ್ಯಾರಂಟಿ ಶುಲ್ಕವನ್ನು ಶೇಕಡಾ 1 ಕ್ಕೆ ಇಳಿಸಲಾಗಿದೆ ಉತ್ತಮ ನಡೆ ಎಂದರು. ಉದ್ಯಮ ಪೋರ್ಟಲ್‌ನಲ್ಲಿ ನೋಂದಾಯಿಸಲಾದ ಸೂಕ್ಷ್ಮ ಉದ್ಯಮಗಳಿಗೆ ಕಸ್ಟಮೈಸ್ ಮಾಡಿದ ಕ್ರೆಡಿಟ್ ತುಂಬಾ ಚೆನ್ನಾಗಿದೆ ಕಾರ್ಡುಗಳನ್ನು 5 ಲಕ್ಷ ರೂ.ಗಳ ಮಿತಿಯೊಂದಿಗೆ ಪರಿಚಯಿಸಲಾಗುವುದು. ಮೊದಲ ವರ್ಷದಲ್ಲಿ 10 ಲಕ್ಷ ಕಾರ್ಡ್‌ಳನ್ನು ನೀಡಲಾಗುವುದು. ಉತ್ತಮ ಬೆಳವಣಿಗೆ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.