ಶುದ್ದ ನೀರು ಸರಬರಾಜು : ನೀರಿನ ಕರದ ಬಡ್ಡಿ ಮನ್ನಾ ಮಾಡಲು ಜೆಡಿಎಸ ಒತ್ತಾಯ
ಶುದ್ದ ನೀರು ಸರಬರಾಜು : ನೀರಿನ ಕರದ ಬಡ್ಡಿ ಮನ್ನಾ ಮಾಡಲು ಜೆಡಿಎಸ್ ಒತ್ತಾಯ
ಜೆಡಿಎಸ್ : ಪೌರ ಕಾರ್ಮಿಕರ ವೇತನ ನೀಡುವಂತೆ ಒತ್ತಾಯ :
ನಾಗರಾಜ್ ದಂಡಾವತಿ ವರದಿ ಶಹಾಬಾದ : - ನಗರ ಸಭೆಯ ವತಿಯಿಂದ ಸಾರ್ವಜನಿಕರಿಗೆ ನೀಡಬೇಕಾದ ಮೂಲಭೂತ ಸೌಕರ್ಯ ಒದಗಿಸುವಂತೆ ಜೆಡಿಎಸ ಪಕ್ಷದ ವತಿಯಿಂದ ಪೌರಾಯುಕ್ತರಿಗೆ ಮನವಿ ಪತ್ರ ಸಲ್ಲಿಸಲಾಯಿತು.
ನಗರದಲ್ಲಿ ಕುಡಿಯುವ ನೀರಿನ ಪೂರೈಕೆ 24/7 ಎಂದು ಹೇಳುತ್ತಾರೆ, ಆದರೆ ಸರಿಯಾಗಿ 3 ರಿಂದ 4 ಗಂಟೆಗಳ ಕಾಲ ಮಾತ್ರ ಪೂರೈಕೆ ಮಾಡುತ್ತಾರೆ ಹಾಗೂ ನೀರಿನ ಕರದ ಜೊತೆ ಬಡ್ಡಿ ವಿಪರೀತವಾಗಿ ವಿಧಿಸಿ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ, ಶುದ್ಧವಾದ ನೀರು ಪೂರೈಕೆ ಮಾಡಬೇಕು, ಹಾಗೂ ಎಲ್ಲಾ ವಾರ್ಡಗಳಿಗೆ ತಾರಾತಮ್ಯ ಮಾಡದೆ ನೀರು ಸರಬರಾಜು ಮಾಡಬೇಕು.
'ಬಿ' ಖಾತೆಗಳು ಸರಕಾರದ ಆದೇಶದ ಅನುಸಾರ ನೀಡಬೇಕು, ಇಂದಿರಾ ಕ್ಯಾಂಟಿನ ಕಂಪೌಂಡ ಗೋಡೆ ನಿರ್ಮಾಣ ಮಾಡಬೇಕು ಜೊತೆಗೆ ಸಿಸಿ ಕ್ಯಾಮರಾಗಳನ್ನು ಅಳವಡಿಸಬೇಕು.
ವಾರ್ಡ ನಂ ೯-೧೦ ರಲ್ಲಿ ನಡೆಯುತ್ತಿರುವ ಚರಂಡಿ ಕಾಮಗಾರಿಯನ್ನು ತಡೆ ಹಿಡಿಯಲಾಗಿದೆ, ಸ್ಥಳ ವಿಕ್ಷಣೆ ಮಾಡುವಂತೆ ಕೋರಲಾಯಿತು.
ಪೌರ ಕಾರ್ಮಿಕರಿಗೆ ವೇತನ ಬಿಡುಗಡೆ ಮಾಡಬೇಕು ಮತ್ತು ಪಿ.ಎಫ್. ಹಾಗೂ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಒತ್ತಾಯಿಸಿ ಜಾತ್ಯಾತೀತ ಜನತಾ ದಳ(ಜೆಡಿಎಸ್) ಪಕ್ಷ ಶಹಾಬಾದ ತಾಲೂಕು ಘಟಕ ವತಿಯಿಂದ ಮನವಿ ಪತ್ರ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ಜೆಡಿಎಸ ಪಕ್ಷದ ಅಧ್ಯಕ್ಷ ಅಬ್ದುಲ ಘನಿ ಸಾಬೀರ, ಕಾರ್ಯದರ್ಶಿ ಶ್ರೀಧರ ಕೊಲ್ಲೂರ, ಶೇಖ ಮಹೇಬೂಬ, ವಿಶ್ವರಾಜ, ಸಿದ್ದಲಿಂಗ ಸೇರಿದಂತೆ ಅನೇಕ ಜನ ಉಪಸ್ಥಿತರಿದರು.
