ಸೌಹಾರ್ದತೆ ಮತ್ತು ಸೇವೆಯೊಂದಿಗೆ ಮುಗಿದ ಪವಿತ್ರ ರಂಜಾನ್

ಸೌಹಾರ್ದತೆ ಮತ್ತು ಸೇವೆಯೊಂದಿಗೆ ಮುಗಿದ ಪವಿತ್ರ ರಂಜಾನ್

ಮುಸ್ಲಿಂ ಬಾಂಧವರ 30 ದಿನಗಳ ಉಪವಾಸಕ್ಕೆ ತೆರೆ ಎಳೆದ ಪವಿತ್ರ ರಂಜಾನ್ 

ಈದ್ಗಾ ಮೈದಾನಗಳಿಗೆ ತೆರೆಳಿ ಪ್ರಾರ್ಥನೆ ಸಲ್ಲಿಸಿ, ಬಡವರಿಗೆ ಜಕಾತ್ (ದಾನ) ನೀಡಲಾಯಿತು 

ಚಿಂಚೋಳಿ : ಇಂದು 30 ದಿನಗಳ ಉಪವಾಸದ ವ್ರತಕ್ಕೆ ತೆರೆಯಳೆದು ಸಂಭ್ರಮಿಸಿದ ತಾಲೂಕಿನ ಮುಸ್ಲಿಂ ಬಾಂಧವರು. ಹೊಸ ಹೊಸ ಉಡುಪುಗಳನ್ನು ಧರಿಸಿ, ಉತ್ಸಾಹ ಮತ್ತು ಸಂಭ್ರಮದಿಂದ ಬೆಳಿಗ್ಗೆ 10 ಗಂಟೆಗೆ ಈದ್ಗಾ ಮೈದಾನಗಳಿಗೆ ಆಗಮಿಸಿ ದೇಶ ಮತ್ತು ರಾಜ್ಯ ಹಾಗೂ ಸ್ವರ್ಗವಾಸಿಗಳ ಜೀವಗಳ ಒಳತಿಗಾಗಿ ಪ್ರಾರ್ಥಿಸಿದರು. 

ಮುಸ್ಲಿಂ ಬಾಂಧವರಿಗೆ ಬಕ್ರೀದ್ ಮತ್ತು ರಂಜಾನ್ ಹಬ್ಬಗಳು ದೊಡ್ಡ ಹಬ್ಬಗಳಾಗಿವೆ. ಹೀಗಾಗಿ ಪ್ರತಿಯೊಬ್ಬರು ರಂಜಾನ ಹಬ್ಬದ ಪ್ರಯುಕ್ತ 30 ದಿನಗಳ ಉಪವಾಸದ ವ್ರತ ಕೈಗೊಂಡು ಪೂರ್ಣಗೊಳುವ ಮುಂಚಿತವಾಗಿ ಚಂದ್ರ ಗೋಚರಿಸಿದ ಬಳಿಕ ಮರುದಿನ ಹಬ್ಬದ ಸಂಭ್ರಮಕ್ಕೆ ದುಮುಕುವ ಮೂಲಕ 30 ದಿನಗಳ ಉಪವಾಸದ ವ್ರತಕ್ಕೆ ತೆರೆ ಎಳೆಯಲಾಗುತ್ತದೆ. ಈ ಹಬ್ಬಕ್ಕೆ ಬೇರೆ ಕಡೆಗೆ ತೆರಳಿದ ಕುಟುಂಬದ ಸದಸ್ಯರು ಈ ಹಬ್ಬದಲ್ಲಿ ಒಂದಾಗಿ ಆಚರಿಸಲಾಗುತ್ತದೆ. ಕುಟುಂಬದ ಚಿಕ್ಕ ವಯಸ್ಸಿನವರಿಂದ ಹಿಡಿದು ಹಿರಿಯ ವಯಸ್ಸಿನ ವಯೋಮಾನದ ವೃದ್ಧರು ಹೊಸ ಉಡುಪುಗಳು ಧರಿಸಿಕೊಂಡು ಈದ್ಗಾ ಮೈದಾನಕ್ಕೆ ಆಗಮಿಸಿ 20 ನಿಮಿಷಗಳ ಕಾಲ ಸ್ವರ್ಗ ವಾಸಿಗಳ ಮತ್ತು ಸುಖ, ಶಾಂತಿ, ನೆಮದಿ ಹಾಗೂ ಜೀವನ ಸಮೃದ್ಧಿಗಾಗಿ ಪ್ರಾರ್ಥಿಸುವುದು ಮತ್ತು ಕಡು ಬಡವರಿಗೆ, ದುರ್ಬಲರಿಗೆ ಜಕಾತ್ (ದಾನ) ನೀಡುವುದು ಈ ಪವಿತ್ರ ರಂಜಾನ್ ಹಬ್ಬದ ಮೂಲ ವಿಶೇಷತೆಯಾಗಿದೆ. ಹಬ್ಬದ ಪ್ರಯುಕ್ತ ಒಬ್ಬರಿಗೂ ಆಲಿಂಗನ ಮಾಡಿಕೊಂಡು ಹಿಂದು ಬಾಂದವರಿಗೆ ಮನೆಗೆ ಕರೆಸಿಕೊಂಡು ಹಬ್ಬದ ಸುರುಕುಂಬ, ಗೂಲಗುಲೆಗಳಂತಹ ಸಿಹಿ ತಿಂಡಿ ಪದಾರ್ಥಗಳನ್ನು ತಿನ್ನಿಸಿ ಧರ್ಮ ಮರೆತು ನಾವೇಲ್ಲ ಒಂದಾಗಿ, ಹಿಂದು - ಮುಸ್ಲಿಂ ಅಣ್ಣ ತಮ್ಮಂದಿರಂತೆ ಸೌಹಾರ್ದತೆಯಿಂದ ಜೀವನ ಸಾಗಿಸೋಣ ಎಂಬ ಸಂದೇಶ ನೀಡಿದ್ದು ಸಂತೋಷದ ಕ್ಷಣಗಳು ಕಂಡಿದವು. ಪವಿತ್ರ ರಂಜಾನ್ ಹಬ್ಬದಲ್ಲಿ ಭಾಗಿಯಾಗಿ, ಚಿಂಚೋಳಿ – ಚಂದಾಪೂರ ಅವಳಿ ಪಟ್ಟಣ ಸೇರಿದಂತೆ ತಾಲೂಕಿನಾದ್ಯಾಂತ ಶಾಂತಿಯುತವಾಗಿ ಹಬ್ಬದ ಸಂಭ್ರಮ ಜರುಗುವಂತೆ ಚಿಂಚೋಳಿ ಡಿವೈಎಸ್ ಪಿ ಸಂಗಮನಾಥ ಹಿರೇಮಠ ಅವರ ನೇತೃತ್ವದಲ್ಲಿ ಸೂಕ್ತ ಪೊಲೀಸ್ ಬಂದೋಬಸ್ತ್ ಒದಗಿಸಲಾಗಿತ್ತು.