"ಪುರಸಭೆ ಸಮಗ್ರ ಅಭಿವೃದ್ಧಿಗೆ ಪೂರಕ ಬಜೆಟ್ ಮಂಡನೆ"ಆನಂದ ಟೈಗರ್

ಪುರಸಭೆ ಅಧ್ಯಕ್ಷ ಆನಂದ ಟೈಗರ್ ಅವರಿಂದ ಚೊಚ್ಚಲ್ ಬಜೆಟ್ ಮಂಡನೆ

ಪುರಸಭೆ ಸಮಗ್ರ ಅಭಿವೃದ್ಧಿಗೆ ಪೂರಕವಾದ ಬಜೆಟ್ ಮಂಡನೆ : ಅಧ್ಯಕ್ಷ 

ಚಿಂಚೋಳಿ : ಪುರಸಭೆ ವ್ಯಾಪ್ತಿಯ 23 ವಾರ್ಡಗಳ ಮೂಭೂತ ಸೌಲಭ್ಯ ಮತ್ತು ಇತರೆ ಸರಕಾರದ ಯೋಜನೆಗಳ ಸಮಗ್ರ ಅಭಿವೃದ್ಧಿಗಾಗಿ ಅಧ್ಯಕ್ಷ ಆನಂದಕುಮಾರ ನಾಗೇಂದ್ರಪ್ಪ ಟೈಗರ್ ಅವರು ಪುರಸಭೆಯ ಆಯವ್ಯಯ ಬಜೆಟ್ ಮಂಡನೆ ಮಾಡಿದರು. 

ಚಿಂಚೋಳಿ ಪುರಸಭೆ ಕಾರ್ಯಾಲಯದ ಸಭಾಂಗಣದಲ್ಲಿ 2025-26 ನೇ ಸಾಲಿನ ಮೊದಲನೇ ಬಜೆಟ್ ಮಂಡಿಸಿ ಮಾತನಾಡಿದರು. 

ಸರಕಾರದ ವಿವಿಧ ಯೋಜನೆಗಳ ಅನುದಾನ ಹಾಗೂ ಸ್ಥಳೀಯ ಸಂಪನ್ಮೂಲಗಳಿಂದ ಕೃಢೀಕರಿಸಿದ ಉಳಿತಾಯ ಅನುದಾನ, ಆದಾಯ ಸ್ಥಿತಿಗತಿಗಳ ಅಂದಾಜು ಮತ್ತು ಆದಾಯ ಪಾವತಿಗಳ ಹಾಗೂ ಸ್ವೀಕೃತಿ ಅಂದಾಜುಗಳನ್ನು ಒಳಗೊಂಡು ಬಜೆಟ್ ಸಿದ್ಧಪಡಿಸಲಾಗಿದ್ದು, ಪುರಸಭೆಯ ಸಮಗ್ರ ಅಭಿವೃದ್ಧಿ ಹೊಂದಲಾಗಿದೆ. ವ್ಯಾಪ್ತಿಯ ಎಲ್ಲಾ ವಾರ್ಡಗಳಿಗೆ ನೀರು ಮತ್ತು ಸ್ವಚ್ಛತೆ, ನೈರ್ಮಲ್ಯ, ರಸ್ತೆ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡಗಳ ಅಭಿವೃದ್ಧಿ, ವಿದ್ಯಾರ್ಥಿಗಳ, ಪೌರ ಕಾರ್ಮಿಕರ ಅಭಿವೃದ್ಧಿ ಹೊಂದುವಂತ ಬಜೆಟ್ ಆಗಿದ್ದು, 2025-26 ನೇ ಸಾಲಿನ 18.67 ಕೋಟಿ 64 ಸಾವಿರ (ಹದಿನೆಂಟು ಕೋಟಿ ಆರವತ್ತೇಳು ಲಕ್ಷ ಆರುವತ್ತು ಸಾವಿರ ) ರೂಪಾಯಿಗಳ ಪಾವತಿ ಬಜೆಟ್ ಆಗಿದ್ದು, 15,70 ಕೋಟಿ 11 ಸಾವಿರ (ಹದಿನೈದು ಕೋಟಿ ಎಪತ್ತು ಲಕ್ಷ ಹನ್ನೊಂದು ಸಾವಿರ) ರೂಪಾಯಿಗಳು ಸ್ವೀಕೃತ ಬಜೆಟ್ ಆಗಿದ್ದು, 2 ಲಕ್ಷ 41 ಸಾವಿರ ಉಳಿತಾಯವಾಗಲಿದ್ದು, ಒಟ್ಟಾರೆಯಾಗಿ ಈ ಬಜೆಟ್ ಪುರಸಭೆಯ ಸಮಗ್ರ ಅಭಿವೃದ್ಧಿಗೆ ಪೂರಕವಾಗಿದೆ ಎಂದರು. 

ಈ ಸಂದರ್ಭದಲ್ಲಿ ಪುರಸಭೆ ಮುಖ್ಯ ಅಧಿಕಾರಿ ಕಾಶಿನ್ನಾಥ ಧನ್ನಿ, ಸ್ಥಾಯಿ ಸಮಿತಿ ಅಧ್ಯಕ್ಷ ಜಗನ್ನಾಥ ಗುತ್ತೇದಾರ, ಸದಸ್ಯರಾದ ಅಬ್ದುಲ್ ಬಾಷಿದ್, ಸೈಯದ್ ಶಬೀರ್, ನಾಗೇಶ ಗುರಂಪಳ್ಳಿ, ಲಕ್ಷ್ಮೀಕಾಂತ ಸುಂಕದ, ಬಸವರಾಜ ಸಿರಸಿ, ಶಿವಕುಮಾರ ಪೋಚಾಲಿ, ರೂಪಕಲಾ ಕಟ್ಟಿಮನಿ, ರಾಧಾಬಾಯಿ ಓಲಗಿರಿ, ಸುಲೋಚನಾ ಕಟ್ಟಿ, ಶೇಷಾದ್ರಿ ಕಳಸ್ಕರ್ ಅವರು ಇದ್ದರು.