ನಗರ ಸಭೆ : ಅಂಬಿಗರ ಚೌಡಯ್ಯ ಜಯಂತಿ ಆಚರಣೆ : ಕನ್ನಡ ಸಾಹಿತ್ಯದ ದಿಟ್ಟತನ ವಚನಕಾರ :..ಶರಣಗೌಡ.
ನಗರ ಸಭೆ : ಅಂಬಿಗರ ಚೌಡಯ್ಯ ಜಯಂತಿ ಆಚರಣೆ : ಕನ್ನಡ ಸಾಹಿತ್ಯದ ದಿಟ್ಟತನ ವಚನಕಾರ :..ಶರಣಗೌಡ.
ನಾಗರಾಜ್ ದಂಡಾವತಿ ವರದಿ ಶಹಾಬಾದ : - ಅಂಬಿಗರ ಚೌಡಯ್ಯ ನವರು 12ನೇ ಶತಮಾನದ ಬಸವಾದಿ ಶರಣರ ಅನುಭವ ಮಂಟಪದಲ್ಲಿ ಮೊದಲ ಪಂಕ್ತಿಯಲ್ಲಿ ಇದ್ದವರು ಮತ್ತು ಕನ್ನಡ ಸಾಹಿತ್ಯದಲ್ಲಿ ಕಂಡು ಬಂದಂತಹ ಒಬ್ಬ ದಿಟ್ಟತನ ವಚನಕಾರ ಎಂದು ನಗರ ಸಭೆಯ ವ್ಯವಸ್ಥಾಪಕ ಶರಣಗೌಡ ರವರು ಹೇಳಿದರು.
ಅವರು ನಗರ ಸಭೆ ಕಾರ್ಯಾಲಯದ ಆವರಣದಲ್ಲಿ ಆಯೋಜಿಸಿದ್ದ ನಿಜ ಶರಣ ಅಂಬಿಗರ ಚೌಡಯ್ಯನವರ ೯೦೬ನೇ ಜಯಂತಿಯ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಂಬಿಗರ ಚೌಡಯ್ಯ ನಿಷ್ಠುರವಾದಿ ವಚನಕಾರರಾಗಿ ಸಮಾಜದ ಅವ್ಯವಸ್ಥೆಯ ವಿರುದ್ಧ ವಚನ ಸಾಹಿತ್ಯದ ಮೂಲಕ ಹೋರಾಟ ನಡೆಸಿದ್ದರು, ಚೌಡಯ್ಯನವರು ಸಮಾಜದಲ್ಲಿ ನಡೆಯುತ್ತಿದ್ದ ಮೂಢನಂಬಿಕೆಗಳನ್ನು ತಿದ್ದುವಂತಹ ಕೆಲಸ ಮಾಡಿದ್ದರು, ಇವರ ವಿಚಾರ ಧಾರೆಗಳು ಮುಂದಿನ ಪೀಳಿಗೆಗೂ ತಲುಪಿಸುವಂತಾಗಬೇಕು ಎಂದರು
ಈ ಸಂದರ್ಭದಲ್ಲಿ ನಗರ ಸಭೆಯ ಸಾಬಣ್ಣ ಸುಂಗುಲಕರ, ಸುರೇಶ ಮೈಂದರಗಿ, ಸುನೀಲ ಕಣ್ಣಿ, ಪ್ರಾಣೇಶ ಕುಲಕರ್ಣಿ ಮತ್ತು ಕೋಲಿ ಸಮಾಜದ ನಿಂಗಪ್ಪ ಹುಳಗೋಳ, ಕಾಶಣ್ಣ ಚನ್ನೂರ, ದೇವಿಂದ್ರಪ್ಪ ಯಲಗೋಡ, ಶಿವಕುಮಾರ ತಳವಾರ, ಪರಮಾನಂದ ಯಲಗೋಡ, ಸಾಬಣ್ಣ ಬೆಳಗುಂಪಿ, ಶಿವು ನಾಟೀಕಾರ, ಸಿದ್ರಾಮ ಕುಸಾಳೆ, ಮೋಹನ ಹಳ್ಳಿ, ಅಮರ ಕೋರೆ ಸೇರಿದಂತೆ ಕೋಲಿ ಸಮಾಜದ ನೂರಾರು ಜನ ಉಪಸ್ಥಿತರಿದ್ದರು.
