ಕೊಪ್ಪಳದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ” ಅಭಿನಂದನ ಕಾರ್ಯಕ್ರಮ
ಕೊಪ್ಪಳದಲ್ಲಿ ಕರ್ನಾಟಕದ ಸಾಂಸ್ಕೃತಿಕ ನಾಯಕ” ಅಭಿನಂದನ ಕಾರ್ಯಕ್ರಮ
ಗುರು ಬಸವಣ್ಣನವರನ್ನು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಗುರುತಿಸಿದ ಕರ್ನಾಟಕ ಸರ್ಕಾರಕ್ಕೆ "ಅಭಿನಂದನಾ" ಕಾರ್ಯಕ್ರಮ ಆತ್ಮೀಯ ಬಸವ ಬಂಧುಗಳಲ್ಲಿ ವಿಜ್ಞಾಪನೆ.
ಶ್ರೀ ಮ.ನಿ.ಪ್ರಜ. ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳ ಘನ ಕೃಪೆಯಿಂದ ಇದೇ ತಿಂಗಳು ದಿನಾಂಕ 18-08-2024 ರ ದೇವವಾರ (ರವಿವಾರ) ದಂದು ಕೊಪ್ಪಳ ನಗರದ ಶಿವಶಾಂತವೀರ ಮಂಗಲಭವನದಲ್ಲಿ ನಡೆಯಲಿರುವ, ಭವ್ಯ ದಿವ್ಯವಾದ ಗುರು ಬಸವಣ್ಣನವರ ತತ್ವ ಸಂದೇಶಗಳನ್ನು ಅರಿಯಲು ಮತ್ತು ನಡೆಯಲ್ಲಿ ತರಲು ಒಂದು ಸಣ್ಣ ಪ್ರಯತ್ನದ ಫಲವಾಗಿ "ಬಸವ ಚಿಂತನ ಪ್ರಭೆ" ಎಂಬ ಕಾರ್ಯಕ್ರಮವನ್ನು ಜಾಲತಾಣದ ಮೂಲಕ ಪ್ರತಿದಿನ ಬೆಳಿಗ್ಗೆ 6:00 ಗಂಟೆಯಿಂದ 8:00 ಗಂಟೆಯ ವರೆಗೆ ಒಂದುದಿನವೂ ತಪ್ಪದಂತೆ ಮೂರು ವರ್ಷಗಳನ್ನು ಯಶಸ್ವಿಯಾಗಿ ಪೂರೈಸಿದ ಹಾಗೂ ನಾಲ್ಕನೇ ವರ್ಷಕ್ಕೆ ಪಾದಾರ್ಪಣೆ ಮಾಡಿದ ಸಂಭ್ರಮವನ್ನು ಹಂಚಿಕೊಳ್ಳಲು ಈ ಕಾರ್ಯಕ್ರಮವನ್ನು ನೆರವೇರಿಸುತ್ತಿದ್ದೇವೆ.
ಈ ಕಾರ್ಯಕ್ರಮದ ರೂಪರೇಷಗಳನ್ನು ಇನ್ನೂ ಅರ್ಥಪೂರ್ಣವಾಗಿ ಮುನ್ನಡೆಸಲು ತಮ್ಮಿಂದ ಸಲಹೆ, ಸಹಕಾರ, ಆಶೀರ್ವಾದಗಳನ್ನು ಅಪೇಕ್ಷಿಸುತ್ತೇವೆ. ದಯವಿಟ್ಟು ತಾವುಗಳು ಈ ಕಾರ್ಯಕ್ರಮಕ್ಕೆ ಬಂದು ಮಾರ್ಗದರ್ಶನವನ್ನು ನೀಡುವಿರೆಂದು ನಂಬಿ ನಿಮ್ಮನ್ನು ಹೃದಯಪೂರ್ವಕವಾಗಿ ಆಹ್ವಾನಿಸುತ್ತಿದ್ದೇವೆ.
'ಲಿಂಗಾಯತ ಧರ್ಮ ಸ್ವತಂತ್ರ ಧರ್ಮವಾಗಿದ್ದು 12ನೇ ಶತಮಾನದಲ್ಲಿ ಅಪ್ಪ ಬಸವಣ್ಣನವರು "ಇಷ್ಟಲಿಂಗ" ವನ್ನು ಯಾವುದೇ ಜಾತಿ, ಮತ, ಪಂಥ,
ಭೇದವಿಲ್ಲದೆ ಎಲ್ಲರ ಎದೆಯ ಮೇಲಿಟ್ಟು ಆತ್ಮದಲ್ಲಿಯೇ ಪರಮಾತ್ಮನಿದ್ದಾನೆ ಎಂಬ ತತ್ವಸಿದ್ಧಾಂತವನ್ನು ತಿಳಿಸಿ ಜನ ಸಾಮಾನ್ಯರ ಮನೆ, ಮನಗಳ ಬಾಗಿಲಿಗೆ ಕೊಟ್ಟು
ಎಲ್ಲರನ್ನೂ ಆಧ್ಯಾತ್ಮದ ಮಹಾಂತರನ್ನಾಗಿಸಿದರು. ಕಾಯಕದ ಕಲಿಗಳನ್ನಾಗಿಸಿದರು. ದಾಸೋಹದ ದಯಾವಂತರನ್ನಾಗಿಸಿದರು. ಅಂತೆಯೇ ಜನಪದವು ಹೀಗೆ . ಎಲ್ಲಾ ಬಲ್ಲಿದನಯ್ಯ ಕಲ್ಯಾಣ ಬಸವಯ್ಯ, ಚೆಲ್ಲಿದನು ತಂದು ಶಿವಬೆಳಕ ! ನಾಡೊಳಗೆ ಸೊಲ್ಲೆತ್ತಿ ಜನವು ಹಾಡುವುದು ಉತ್ತಿ ಬಿತ್ತುವ ಮಂತ್ರ ಬಿತ್ತಿ ಬೆಳೆಯುವ ಮಂತ್ರ, ಸತ್ಯ ಶಿವಮಂತ್ರ ನಿನ್ನೆಸರು ! ಬಸವಯ್ಯ ಮರ್ತ್ಯದೊಳು ಮಂತ್ರ ಜೀವನಕೆ ಅಂದಿನಿಂದ ಇಂದಿನವರೆಗೂ ಜನಮಾನಸದಲ್ಲಿ ಹಾಸುಹೊಕ್ಕಾಗಿ ಬಸವಮಂತ್ರ ಪರಿಮಳ ಜನರ ಹೃದಯದಲ್ಲಿ ಮೊಳಗಿತು. ಹೆಜ್ಜೆ ಹೆಜ್ಜೆಗಳಲ್ಲಿ ಆ ದಿವ್ಯ ಪುರುಷನ ನೆನಹು ಹಚ್ಚ ಹಸಿರಾಗಿಸಿಕೊಂಡು ಮುನ್ನಡದಲ್ಲಿ ಸಾರ್ಥಕ ಕಂಡಿದೆ. ಪರಮಪೂಜ್ಯ ಲಿಂಗಾನಂದ ಸ್ವಾಮಿಜಿಯವರು ಹಾಗೂ ಪರಮಪೂಜ್ಯ ಮಾತೆ ಮಹಾದೇವಿ ತಾಯಿಯವರು ತಮ್ಮ ಇಡೀ ಜೀವನವನ್ನು ಗಂಧದ ಕೊರಡಿನಂತೆ ತೇಯ್ದು ಬಸವ ಧರ್ಮದ (ಲಿಂಗಾಯತ ಧರ್ಮದ) ನೆಲೆ ಕಲೆಗಳನ್ನು ಸುಲಭವಾಗಿ, ಸರಳವಾಗಿ ಅಳವಡಿಸಿಕೊಂಡು ಆಚರಿಸುವಲ್ಲಿ ನಮಗೆಲ್ಲಾ ಮಾರ್ಗದರ್ಶಕರಾಗಿ ನಮ್ಮ ಜೀವನ ಸಾರ್ಥಕವಾಗುವಂತೆ ಮುನ್ನಡೆಸಿದರು. ಅದಕ್ಕಾಗಿ ಈ ಕಾರ್ಯಕ್ರಮವನ್ನು ಅವರಿಗೆ ಹೃದಯಪೂರ್ವಕವಾಗಿ ಅರ್ಪಿಸುತ್ತಿದ್ದೇವೆ.
"ಲಿಂಗಾಯತ ಧರ್ಮ ಸ್ವತಂತ್ರ ಧರ್ಮ ಲಿಂಗಾಯತ ಎನ್ನುವುದು ಜಾತಿಯಲ್ಲ, ನಾವು ಲಿಂಗಾಯತ ಧರ್ಮಿಯರು ಎಂದು ನಮಗೆ ತಿಳಿಸಿದ ಗುರುಗಳ
ಆದೇಶದಂತೆ ನಮ್ಮ ದೇಶದ ಸಂವಿಧಾನದಲ್ಲಿ ಈ ಅಮೂಲ್ಯ ವಿಚಾರ ದಾಖಲಾಗಬೇಕಾಗಿದೆ. ಅದಕ್ಕಾಗಿ ಈಗಾಗಲೇ 5 ವರ್ಷಗಳಿಂದ ಸತತವಾಗಿ ನಾಡಿನ ಬೇರೆ ಬೇರೆ ಭಾಗಗಳಿಂದ ಅಪೂರ್ವ ಸಮಾವೇಶಗಳನ್ನು ಮಾಡುತ್ತಾ ಜನ-ಮನದಲ್ಲಿ ಜಾಗ್ರತೆಯನ್ನು ಉಂಟುಮಾಡಿದ ಪೂಜ್ಯ ಗುರುಗಳಿಗೆ ಈ ಮೂಲಕ ಅಭಿನಂದನೆಗಳನ್ನು ತಿಳಿಸುವುದರ ಜೊತೆಗೆ, ಬೌದ್ಧ, ಜೈನ, ಸಿಖ್ ಧರ್ಮಗಳಂತೆ ಭಾರತ ಜನ್ಯ ಧರ್ಮಗಳ ಸಾಲಿನಲ್ಲಿ ಲಿಂಗಾಯತ ಧರ್ಮವೂ ಸಾಂವಿಧಾನಿಕ ಮಾನ್ಯತೆ ಪಡೆಯಲು ನಮ್ಮ ಹೋರಾಟವನ್ನು ಕೇಂದ್ರ ಸರ್ಕಾರ ಗಮನಿಸಿ ತನ್ನ ಕರ್ತವ್ಯವನ್ನು ಪೂರೈಸಲು ಈ ಮೂಲಕ "ಭಿನ್ನವತ್ತಳೆಯನ್ನು" ಕೊಪ್ಪಳ ನಗರದಲ್ಲಿ ಜಾಥಾ ಹೊರಡಿಸಿ ಕೋರುತ್ತಿದ್ದೇವೆ.
ಕಾರ್ಯಕ್ರಮದ ವಿವರ ದಿನಾಂಕ 18-08-2024 ದೇವವಾರ (ರವಿವಾರ) ಬೆಳಿಗ್ಗೆ 9:30 ಗಂಟೆಗೆ ಉದ್ಘಾಟನೆ, ಸ್ಥಳ : ಶಿವಶಾಂತವೀರ ಮಂಗಲಭವನ, ಹೊಸಪೇಟೆ ರೋಡ್, ಕೊಪ್ಪಳ, ಮಧ್ಯಾಹ್ನ 1:30 ಗಂಟೆಗೆ ಬಸವಪ್ರಸಾದ ಹಾಗೂ 3:00 ಗಂಟೆಗೆ ಕೊಪ್ಪಳ ನಗರದ ಪ್ರಮುಖ ಬೀದಿಗಳಲ್ಲಿ ಜಾಥಾ ಹೊರಡುವುದು.
ಶರಣು ಶರಣಾರ್ಥಿ ಶರಣರ ಬರುವೆಮಗೆ ಪ್ರಾಣ ಜೀವಾಳವಯ್ಯ, ಪ್ರತಿ ದೇವವಾರ (ರವಿವಾರ) ಬೆಳಿಗ್ಗೆ 11:00 ಗಂಟೆಗೆ "ಸಾಮೂಹಿಕ ಪ್ರಾರ್ಥನೆ" ನಂತರ ಬಸವ ಪ್ರಸಾದ ಇರುತ್ತದೆ.
ರಾಷ್ಟ್ರೀಯ ಬಸವದಳ ಟ್ರಸ್ಟ್ (ರಿ) ಲಿಂಗಾಯತ ಧರ್ಮ ಮಹಾಸಭಾ ಟ್ರಸ್ಟ್ (ರಿ) ಹಾಗೂ ಕ್ರೀ ಕ್ರಾಂತಿ ಗಂಗೋತ್ರಿ ಅಕ್ಕನಾಗಲಾಂಬಿಕಾ ಮಹಿಳಾಗಣ ಕೊಪ್ಪಳ ಜಿಲ್ಲಾ ಘಟಕಗಳು ಹಾಗೂ ಬಸವ ಮಂಟಪ, ಚನ್ನಬಸವ ನಗರ, ಜಗಜ್ಯೋತಿ ಬಸವೇಶ್ವರ ಮಾರ್ಗ, (ಕಿನ್ನಾಳ ರೋಡ್), ರೇಲ್ವೆ ಬ್ರಿಡ್ಜ್ ಪಕ್ಕದಲ್ಲಿ, ಕೊಪ್ಪಳ-583231.
: 8660868205, 9845431030
ಮಂಜುಳಾ ಸೋಮನಾಳ ಬಾಗಲಕೋಟೆ ಬಸವ ಭಕ್ತ