ಹಿಂದು ಪುರಾಣ :ಚಂದ್ರಶೇಖರ ಕಗ್ಗಲ್ಲುಗೌಡ್ರು
ಹಿಂದು ಪುರಾಣ :ಚಂದ್ರಶೇಖರ ಕಗ್ಗಲ್ಲುಗೌಡ್ರು
ವಿಜಯನಗರ ಸಾಮ್ರಾಜ್ಯದ ಪೂರ್ವದಲ್ಲಿ ಹಿಂದು ಪದದ ಬಳಕೆ ಶಾಸನಗಳಲ್ಲಿ ಇಲ್ಲ. ಅಲ್ಲಿರುವುದು ಶೈವ,ವೈಷ್ಣವ, ಜೈನ, ಬೌದ್ಧ, ವೈದಿಕ ಹಾಗೂ ಸನಾತನ ಮಾತ್ರ. ವಿಜಯನಗರ ಸಾಮ್ರಾಜ್ಯದ ಆರಂಭದ ನಂತರದಲ್ಲಿ ಈ ಮೇಲಿನ ಪದಗಳ ಜೊತೆಗೆ ಹಿಂದು ಪದ ಸೇರ್ಪಡೆ ಆಗಿದೆ. ಇದಕ್ಕೆ ಕಾರಣ ಮುಸ್ಲಿಂರ ದಾಳಿ. ಶೈವ v/s ವೈಷ್ಣವ, ಶೈವ v/s ಜೈನ, ಶೈವ v/s ಬೌದ್ಧ, ಜೈನ v/s ವೈಷ್ಣವ, ಜೈನ v/s ಬೌದ್ಧ ಹೀಗೆ ಪರಸ್ಪರವಾಗಿ ದಾಳಿ ಮಾಡಿ ಕೊಂಡಿರುವುದು ಶಾಸನಗಳಲ್ಲಿ ದಾಖಲಾಗಿದೆ. ಜೈನ, ಬೌದ್ಧರ ಮೇಲೆ ದಾಳಿಯಾದಂತೆ ೧೨ ಶತಮಾನದಲ್ಲಿ ಲಿಂಗಾಯತ ಧರ್ಮದ ಮೇಲೆ ದಾಳಿಯಾಗಿದೆ. ಯಾವಾಗ ಮುಸ್ಲಿಂರಿಂದ ದಾಳಿಯಾಯಿತೋ ಆಗ ಮುಸ್ಲಿಂ ದಾಳಿಕೋರರ ದೃಷ್ಟಿಯಲ್ಲಿ ಇಲ್ಲಿ ಇರುವವರಿಗೆ ಹಿಂದು ಎಂದು ಕರೆಯಲು ಆರಂಭಿಸಿದರು. ಅದನ್ನು ಇವರೆಲ್ಲರೂ ಅವರನ್ನು ವಿರೋಧಿಸುವ ಸಲುವಾಗಿ ಹಾಗೂ ಒಗ್ಗಟ್ಟು ಸಾಧಿಸಲು ಈ ಪದವನ್ನು ಒಪ್ಪಿ ಹೆಚ್ಚು ಪ್ರಚಲಿತಗೊಳಿಸಿದರು. ಆಗ ಶೈವ,ವೈಷ್ಣವ, ಜೈನ, ಬೌದ್ಧ,ಲಿಂಗಾಯತ ಪದಗಳು ಮುಂಚೂಣಿಯಿಂದ ಹಿಂದೆ ಸರಿದು ಹಿಂದು ಪದ ಹೆಚ್ಚು ಪ್ರಚಲಿತಕ್ಕೆ ಬರಲು ಸಾಧ್ಯವಾಯಿತು. ಆದರೂ ಗ್ರಾಮೀಣ ಪ್ರದೇಶಗಳಲ್ಲಿ ಜಾತಿಯಿಂದ ಗುರುತಿಸಿಕೊಳ್ಳುತ್ತಿದ್ದರು. ಅವರಿಗೆ ಹಿಂದು ಪದ ಅಷ್ಟಾಗಿ ಹೃದಯದ ಆಳಕ್ಕೆ ಇಳಿಯಲೇ ಇಲ್ಲ. ಯೂರೋಫಿಯನ್ನರ ಆಗಮನ ಕಾರಣಕ್ಕೆ ಕ್ರೈಸ್ತ ಕಾಲಿಟ್ಟಿತು. ಆಗ ಮತ್ತಷ್ಟು ಪ್ರಖರವಾಗಿ ಹಿಂದು ಪದ ಮುನ್ನೆಲೆಗೆ ಬರಲು ಆರಂಭಿಸಿತು. ಆರೆಸ್ಸಸ್ ಕಾರಣದಿಂದಾಗಿ ಹಿಂದು ಪದ ಪ್ರತಿ ವ್ಯಕ್ತಿಯ ಮೇಲೆ ಪ್ರಭಾವ ಬೀರಿತು. ಹೀಗೆ ಹಿಂದು ಪುರಾಣ ಹುಟ್ಟಿ ಕೊಂಡಿತು.
????ಚಂದ್ರಶೇಖರ ಕಗ್ಗಲ್ಲುಗೌಡ್ರು.