ಬೀದರ್ ವಿಶ್ವವಿದ್ಯಾಲಯಕ್ಕೆ ಡಾ ಬಾಬಾ ಸಾಹೇಬ್ ಅಂಬೇಡ್ಕರ ಹೆಸರಿಡಲು ಒತ್ತಾಯ.
 
                                ಬೀದರ್ ವಿಶ್ವವಿದ್ಯಾಲಯಕ್ಕೆ ಡಾ ಬಾಬಾ ಸಾಹೇಬ್ ಅಂಬೇಡ್ಕರ ಹೆಸರಿಡಲು ಒತ್ತಾಯ.
ಬೀದರ್:ಅ.26 ಭಾರತ ದೇಶ ಸ್ವತಂತ್ರ ನಂತರ ದೇಶಕ್ಕೆ ಸಂವಿಧಾನವನ್ನು ಕೊಟ್ಟ ಮಹಾಪುರುಷರ ಹೆಸರು ಬೀದರ್ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕೆಂದು ಸಮಿತಿಯ ಮುಕೇಶ ಚಲ್ವಾ ಹೇಳಿದರು.
ನಗರದ ಪತ್ರಿಕಾ ಭವನದ, ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಜಗತ್ತಿನ ಜ್ಞಾನದ ಪ್ರತಿಕ ಡಾ ಬಾಬಾ ಸಾಹೇಬ್ ಅಂಬೇಡ್ಕರ ಅವರು ಇಂತಹ ಮಹಾನ್ ವ್ಯಕ್ತಿಯ ಹೆಸರು ಬೀದರ ವಿಶ್ವವಿದ್ಯಾಲಯಕ್ಕೆ ನಾಮಕರಣ ಮಾಡಬೇಕೆಂದರು
ಬೀದರ್ ಜಿಲ್ಲಾ ಉಸ್ತುವಾರಿ ಸಚಿವರಾದ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿದ್ದು,ರಾಜ್ಯ ಸರ್ಕಾರ ತಕ್ಷಣವೇ ನಮ್ಮ ಮನವಿಯನ್ನು ಪರಿಗಣಿಸಿ, ಬೀದರ್ ವಿಶ್ವವಿದ್ಯಾಲಯಕ್ಕೆ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹೆಸರಿಡಲು ಅನುಷ್ಠಾನ ಸಮಿತಿ ಸದಸ್ಯರು ಒತ್ತಾಯಿಸಿದ್ದಾರೆ .
ಪತ್ರಿಕಾ ಗೋಷ್ಠಿಯಲ್ಲಿ ಭೀಮರಾವ ಮಾಲಗತ್ತಿ, ಸೂರ್ಯಕಾಂತ ಸಾದುರೆ,ಸಂದೀಪ ಕಾಂಟೆ, ಪೃಥ್ವಿರಾಜ್ ತುಳಜಾಪುರ, ಶ್ರೀಕಾಂತ ಹೊಸಮನಿ, ಶಿವಕುಮಾರ ಜೀವಾ, ಗೌತಮ್ಮ ಮುತಂಗಿಕರ, ದಿಗಂಬರ ಡೊಂಗರೆ, ಸಿದ್ದಾರ್ಥ ಭಾವಿದೊಡ್ಡಿ, ಲೊಕೇಶ ಕಾಂಬಳೆ, ನಿತೀಶ ಶಿಂದೆ, ಶಿವಾನಂದ ಇತರರಿದ್ದರು
ವರದಿ: ಮಛಂದ್ರನಾಥ ಕಾಂಬ್ಳೆ
 

 kkeditor
                                    kkeditor                                 
                    
                 
                    
                 
                    
                 
                    
                 
                    
                 
                    
                 
                    
                 
    
             
    
             
    
             
    
             
    
             
    
             
    
 
    
 
    
 
    
 
    
 
    
                                        
                                     
    
 
    
