ಶ್ರೀ ಹರಿನಾಥ ಮಂದಿರ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆ
ಶ್ರೀ ಹರಿನಾಥ ಮಂದಿರ ಜೀರ್ಣೋದ್ಧಾರ ಕಾರ್ಯಕ್ಕೆ ದೇಣಿಗೆ
ಕಮಲನಗರ; ತಾಲೂಕಿನ ಹೊಳೆಸಮುದ್ರ ಕಾರ್ಯಕ್ಷೇತ್ರದಲ್ಲಿ ಬರುವ ಮಂದಿರ ಜೀರ್ಣೋದ್ಧಾರದ ಕಾರ್ಯಕ್ಕಾಗಿ ಶ್ರೀ ಹರಿನಾಥ್ ಕೇಶವನಾಥ ಮಂದಿರಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣ ಅಭಿವೃದ್ಧಿ ಯೋಜನೆ ವತಿಯಿಂದ 250000/- ಡಿ ಡಿ. ಮಂಜುರಾತಿ ಆಗಿದ್ದು
ಈ ಸಂದರ್ಭದಲ್ಲಿ ಮಾನ್ಯ ಕಲ್ಬುರ್ಗಿ ಪ್ರಾದೇಶಿಕ ನಿರ್ದೇಶಕರಾದ ದಿನೇಶ್ ಮತ್ತು ಬೀದರ್ ಜಿಲ್ಲೆಯ ನಿರ್ದೇಶಕರಾದ ಮುರಳಿದಾರ್ ಎಚ ಎಲ್ ತಾಲೂಕಿನ ಯೋಜನಾಧಿಕಾರಿಗಳಾದ ರಾಘವೇಂದ್ರ ಸರ್ ಎಲ್ಲರ ಉಪಸ್ಥಿತಿಯಲ್ಲಿ 250000/- ಡಿಡಿ ವಿತರಣೆ ಮಾಡಿದರು.
ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿರುವ ಮಂದಿರದ ಕಮಿಟಿ ಅಧ್ಯಕ್ಷರಾದ ಜ್ಞಾನೇಶ್ವರ್ ಪಾಟೀಲ್ ಇವರಿಗೆ ಹಸ್ತಾಂತರ ಮಾಡಿದರು.ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತ್ ಪಿ ಡಿ ಓ ಮಹಾದೇವ್ ಗಾಯಕವಾಡ ಮಂದಿರದ ಸದಸ್ಯರು , ಗ್ರಾಮ ಪಂಚಾಯತ್ ಅಧ್ಯಕ್ಷರು ಹಾಗೂ ಸದಸ್ಯರು ಊರಿನ ಹಿರಿಯ ಗಣ್ಯರಾದ ಗೋಪಾಲ್ ರಾವ್ ಪಾಟೀಲ್ ಹಾಗೂ ಭರತ್ ಕದಂ ಅನಿಲ್ ಬಿರ್ಗೆ ಮತ್ತು ಪ್ರದೀಪ್ ಪಾಟೀಲ್ ಮಹದೇವ್ ಬೆಣ್ಣೆ ಹಾಗೂ ಕಾರ್ಯಕ್ರಮ ನಿರೂಪಣೆ ಮಾಡಿರುವ ಸತೀಶ್ ಬೀರಾದಾರ ಕಮಲನಗರ ವಲಯದ ಮೇಲ್ವಿಚಾರಕರಾದ ಶರಣು ಎಂ ಬೀರಾದಾರ ಸ್ಥಳೀಯ ಸೇವಾ ಪ್ರತಿನಿಧಿಯಾದ ಕವಿತಾ ಬೀರಾದಾರ ಹಾಗೂ ಎಲ್ಲಾ ಸಂಘದ ಸದಸ್ಯರು ಊರಿನ ಹಿರಿಯ ಗಣ್ಯರು ಕಮಿಟಿಯ ಸದಸ್ಯರು ಉಪಸ್ಥಿತರಿದ್ದರು.
