ಸ್ಟೇಷನ್ ಗಾಣಗಾಪೂರದಿಂದ ಬೃಹತ್ ಕಾಶಿ ಯಾತ್ರೆ

ಸ್ಟೇಷನ್ ಗಾಣಗಾಪೂರದಿಂದ ಬೃಹತ್ ಕಾಶಿ ಯಾತ್ರೆ
ಕಲಬುರಗಿ: 144 ವರ್ಷಕೊಮ್ಮೆ ನಡೆಯುವ ಪ್ರಯಾಗರಾಜ್ ಮಹಾಕುಂಭ ಮೇಳ ಯಾತ್ರೆಗೆ ಕಲಬುರಗಿ ಜಿಲ್ಲೆಯ ಅಫಜಲಪುರ ತಾಲೂಕಿನ ಸ್ಟೇಷನ್ ಗಣಗಾಪುರದ ಪರಮ ಪೂಜ್ಯ ಶ್ರೀ ನಾಗು ಮುತ್ಯ ಸ್ಥಾವರಮಠ ಅವರ ನೇತೃತ್ವದಲ್ಲಿ ಬೃಹತ್ ಕಾಶಿ ಯಾತ್ರೆ ಕೈಗೊಳ್ಳಲಾಗುತ್ತಿದ್ದು, ರೈಲಿನ ವ್ಯವಸ್ಥೆ ಕೂಡ ಮಾಡಲಾಗಿದೆ.
ಡಾ.ಅಭಿನವ ಚನ್ನಮಲ್ಲ ಶಿವಯೋಗಿ ಶಿವಾಚಾರ್ಯರ ದಿವ್ಯ ಸಾನಿಧ್ಯದಲ್ಲಿ ಶ್ರೀ ವೀರ ಮಹಾಂತ ಶಿವಾಚಾರ್ಯರ ಘನ ಅಧ್ಯಕ್ಷತೆಯಲ್ಲಿ ಹಾಗೂ ಸ್ಟೇಷನ್ ಗಣಗಾಪುರದ ಪರಮ ಪೂಜ್ಯ ಶ್ರೀ ನಾಗು ಮುತ್ಯ ಸ್ಥಾವರಮಠ ಅವರ ನೇತೃತ್ವದಲ್ಲಿ ಬೃಹತ್ ಕಾಶಿ ಯಾತ್ರೆ ಏಪ್ರಿಲ್ 16ರಂದು ಕೈಗೊಳ್ಳಲಾಗುತ್ತಿದ್ದು, ಅದಕ್ಕಾಗಿ ರೈಲಿನ ವ್ಯವಸ್ಥೆ ಕೂಡ ಮಾಡಲಾಗಿದೆ. ಯಾತ್ರೆಯು ಕಾಶಿ, ಅಯೋಧ್ಯ ಹಾಗೂ ಪ್ರಯಾಗರಾಜ್ ಯಾತ್ರೆಯನ್ನು ಒಳಗೊಂಡಿದ್ದು, ಯಾತ್ರಾರ್ಥಿಗಳ ಕೇವಲ 8,500 ರೂಪಾಯಿ ಭರಿಸಿದರೇ ಸಾಕು ಆರು ದಿನಗಳ ಪ್ರಯಾಣದಲ್ಲಿ ಊಟ, ವಸತಿ ಉಚಿತವಾಗಿ ನೀಡಲಾಗುವುದು. ಯಾತ್ರೆಯಲ್ಲಿ ಪಾಲ್ಗೊಳ್ಳಲು ಇಚ್ಛಿಸುವ ಭಕ್ತರು 7204999559, 9900099143, 9632159990 ಅಥವಾ 9739641717 ದೂರವಾಣಿ ಸಂಖ್ಯೆಗಳಿಗೆ ಕರೆ ಮಾಡಿ ನೊಂದಣಿ ಮಾಡಿಕೊಳ್ಳಬಹುದು ಎಂದು ನಾಗು ಮುತ್ಯ ಸ್ಥಾವರಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.