30ರಂದು ಖೇಡ ಸಂಗಮದಲ್ಲಿ ಅಲ್ಲಮ ಪ್ರಭುದೇವರ ಜಯಂತ್ಯುತ್ಸವ

30ರಂದು ಖೇಡ ಸಂಗಮದಲ್ಲಿ ಅಲ್ಲಮ ಪ್ರಭುದೇವರ ಜಯಂತ್ಯುತ್ಸವ
ಕಮಲನಗರ: ತಾಲೂಕಿನ ಖೇಡ-ಸಂಗಮ ನೀಲಾಂಬಿಕಾ ಆಶ್ರಮದಲ್ಲಿ ದಿನಾಂಕ: 30-03-2025 ರವಿವಾರ ಸಾಯಂಕಾಲ 5-00 ಗಂಟೆಗೆ ಮಹಾ ಯೋಗಿ ಅಲ್ಲಮಪ್ರಭು ದೇವರ ಜಯಂತ್ಯುತ್ಸವ ಕಾರ್ಯಕ್ರಮ ನಡೆಯಲಿದೆ.
ನಾಡೋಜ ಡಾ.ಬಸವಲಿಂಗ ಪಟ್ಟದ್ದೇವರು ದಿವ್ಯ ಸಾನಿಧ್ಯ, ಹಾಗೂ ಪೂಜ್ಯ ಶ್ರೀ ಗುರುಬಸವ ಪಟ್ಟದ್ದೇವರು ಹಿರೇಮಠ ಸಂಸ್ಥಾನ, ಭಾಲ್ಕಿ ಇವರ ದಿವ್ಯ ನೇತೃತ್ವ ಮಾತೆ ಡಾ ಮಹಾದೇವಮ್ಮತಾಯಿ ನೀಲಾಂಬಿಕಾ ಆಶ್ರಮ ಬೇಡ-ಸಂಗಮ ಅಧ್ಯಕ್ಷತೆ ವಹಿಸುವರು.
ಕಮಲಾಪುರದ ಮಾತೆ ನೀಲಾಂಬಿಕಾ ತಾಯಿ , ಡೋಣಗಾಪೂರದ ದೇವಮ್ಮ ತಾಯಿ,ಅತಿವಾಳದ ಶರಣಾಂಬಿಕಾ ತಾಯಿ ಭಾಗವಹಿಸುವರು.
ಶರಣ ಶಿವಾನಂದ ಪಾವಡಶೆಟ್ಟಿ ಡಿ.ವೈ.ಎಸ್.ಪಿ, ಭಾಲ್ಕಿ ಕಾರ್ಯಕ್ರಮ ಉದ್ಘಾಟಿಸುವರು.
ಡಾ.ಮಹೇಶ ಬಿರಾದಾರ, ಜಿಲ್ಲಾ ಆರೋಗ್ಯ ಅಧಿಕಾರಿಗಳು, ಯಾದಗಿರಿ, ಬಿ.ಎಂ.ಅಮರವಾಡಿ ಅಧ್ಯಕ್ಷರು, ಕನ್ನಡ ಸಾಹಿತ್ಯ ಪರಿಷತ್ತು, ಔರಾದ(ಬಿ)ಗೌರವ ಸನ್ಮಾನಿಸಲಾಗುತ್ತದೆ.
ಶರಣ ಶಿವರುದ್ರಯ್ಯ ಸ್ವಾಮಿ ಅನುಭಾವ ನೀಡುವರು.
ಷಟ್‌ಸ್ಥಲ ಧ್ವಜಾರೋಹಣ :
ಶರಣ ವಿಶ್ವನಾಥ ಬಿರಾದಾರ
ಬಸವ ಗುರು ಪೂಜೆ : ಶರಣ ಮಲ್ಲಿಕಾರ್ಜುನ ದಾನಾ ಇವರು ನೇರವೇರಿಸುವರು.
ವೈಜಿನಾಥ ರಾಜಗೀರೆ,ಸಿದ್ದಯ್ಯ ಕಾವಡಿಮಠ , ಓಂ ಪ್ರಕಾಶ ಬಿರಾದಾರ , ರಾಜಕುಮಾರ ಬಿರಾದಾರ ,
ಸುರೇಶ ಸೊಲಾಪೂರೆ , ಸಂಗಮೇಶ ಮುರ್ಕೆ, ನಾಗಯ್ಯ ಸ್ವಾಮಿ, ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ಸ್ವಾಗತ : ನೀಲಕಂಠ ಬಿರಾದಾರ
ವಚನ ಸಂಗೀತ : ಪ್ರೇಮಲಾ ಶಿವರುದ್ರಯ್ಯ ಸ್ವಾಮಿ
ವಂದನಾರ್ಪಣೆ : ಅನೀಲಕುಮಾರ ಹೊಳೆ ಸಮುದ್ರ
ಪ್ರಸಾದ ದಾಸೋಹಿಗಳು : ಯೋಗೇಶ್ವರಿ ಡಾ.ಮಹೇಶ ಬಿರಾದಾರ
ಡಾ.ಸಂಜುಕುಮಾರ ಜುಮ್ಮಾ, ಹಾಗೂ ಸಂಜುಕುಮಾರ ಮೆಂಗಾ ನಿರೂಪಿಸುವರು.
ಅಕ್ಕನ ಬಳಗದ ಶರಣೆಯರಿಂದ, ತೊಟ್ಟಿಲು ಕಾರ್ಯಕ್ರಮ ಹಾಗೂ ಡಾ.ಚನ್ನಬಸವ ಪಟ್ಟದ್ದೇವರು ಗುರುಕುಲ ಹಿರಿಯ ಪ್ರಾಥಮಿಕ ಶಾಲೆ ಖೇಡ-ಸಂಗಮ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಅದ್ಧೂರಿಯಾಗಿ ಕಾರ್ಯಕ್ರಮ ನಡೆಸಲಾಗುತ್ತಿದೆ.