ಏಳು ದಿನಗಳ ವಾರ್ಷಿಕ ಎನ್.ಎಸ್.ಎಸ್ ಶಿಬಿರ

ಏಳು ದಿನಗಳ ವಾರ್ಷಿಕ ಎನ್.ಎಸ್.ಎಸ್ ಶಿಬಿರ
ಕಲಬುರಗಿ: ಹೈದ್ರಾಬಾದ್ ಕರ್ನಾಟಕ ಶಿಕ್ಷಣ ಸಂಸ್ಥೆಯ ಶ್ರೀಮತಿ ವೀರಮ್ಮ ಗಂಗಾ ಸಿರಿ ಮಹಿಳಾ ಮಹಾವಿದ್ಯಾಲಯದಲ್ಲಿ ಏಳು ದಿನಗಳ ವಾರ್ಷಿಕ ಎನ್.ಎಸ್.ಎಸ್ ಶಿಬಿರವನ್ನು ಆಯೋಜಿಸಲಾಗಿತ್ತು. ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾನಿಲಯದ ಸಂಯುಕ್ತಾಶ್ರಯದಲ್ಲಿ 'ನನ್ನ ಭಾರತಕ್ಕಾಗಿ ಯುವಕರು ಮತ್ತು ಡಿಜಿಟಲ್ ಸಾಕ್ಷರತೆಗಾಗಿ ಯುವಕರು' ಎನ್ನುವ ಧೈಯದೊಂದಿಗೆ ದಿನಾಂಕ 15. 4 .25 ರಿಂದ 21. 04. 25 ರವರೆಗೆ ನಡೆಸಲಾಯಿತು.
ದಿನಾಂಕ 15 ರಂದು ಶ್ರೀಮತಿ ವೀರಮ್ಮಗಂಗಾ ಸಿರಿ ಮಹಿಳಾ ಮಹಾ ವಿದ್ಯಾಲಯದ ಆವರಣದಲ್ಲಿ ಉದ್ಘಾಟನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಎಂ.ಎಸ್ ಇರಾನಿ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ನರೇಂದ್ರ ಬಡಶೇಷಿ ಸರರವರು ಆಗಮಿಸಿ ಶಿಬಿರದ ಧ್ಯಯೋದ್ದೇಶ ಬಗ್ಗೆ ಸಂವಾದದ ಮೂಲಕ ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜಿನ ಪ್ರಾಚಾರ್ಯರಾದ ಡಾ. ಆರ್ .ಬಿ. ಕೊಂಡಾ ಸರ್ ರವರು ಅಧ್ಯಕ್ಷೀಯ ನುಡಿಗಳನ್ನು ನುಡಿದರು. ಕಾರ್ಯಕ್ರಮಕ್ಕೆ ಎಲ್ಲರನ್ನೂ ಎನ್.ಎಸ್.ಎಸ್ 'ಬ' ಘಟಕದ ಇತಿಹಾಸ ವಿಭಾಗದ ಮುಖ್ಯಸ್ಥರಾದ ಡಾ. ಸುಭಾಷ್ ಚಂದ್ರ ದೊಡ್ಮಿನಿ ಸರ್ ರವರು ಸ್ವಾಗತಿಸಿದರೆ. ವಂದನಾರ್ಪಣೆಯನ್ನು ಸಂಗೀತ ವಿಭಾಗದ ಮುಖ್ಯಸ್ಥರಾದ ಡಾ. ರೇಣುಕಾ.ಎಚ್ ರವರು ನಡೆಸಿಕೊಟ್ಟರು. ಸುಷ್ಮಾ ಕುಲಕರ್ಣಿ ಇನ್ನಿತರ ವಿಭಾಗದ ಮುಖ್ಯಸ್ಥರು ಪ್ರಾಧ್ಯಾಪಕರು .
ಅಕ್ಕಮಹಾದೇವಿ ವಿಶ್ವವಿದ್ಯಾನಿಲಯದ ಎನ್.ಎಸ್.ಎಸ್ ನೂಡಲ್' ಅಧಿಕಾರಿಗಳಾದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಮಹೇಶ್ ಗಂವ್ಹಾರ ಸರ್ ಮತ್ತು ಕಾಲೇಜಿನ ಇಬ್ಬರು ಉಪ ಪ್ರಾಚಾರ್ಯಗಳಾದ ಡಾ. ವೀಣಾ. ಎಚ್ ಮೇಡಂ, ಡಾ. ಉಮಾ. ರೇವೂರ್ ಮೇಡಂ ರವರು ಶಿಬಿರಾರ್ಥಿಗಳೊಂದಿಗೆ ಕಾರ್ಯಕ್ರಮಕ್ಕೆ ಸಾಕ್ಷಿಯಾದರು.
ದಿನಾಂಕ 16 17 18 19 20 ಹಾಗೂ 21ನೇ ತಾರೀಖಿನವರೆಗೆ ಬೆಳಗ್ಗೆ ಧ್ವಜಾರೋಹಣ ಕಾರ್ಯಕ್ರಮ ವಿವಿಧ ಕಾಲೇಜಿನ ಪ್ರಾಚಾರ್ಯರು ಹಾಗೂ ನಿವೃತ್ತಿ ಪ್ರಾಧ್ಯಾಪಕರ ಗಳಿಂದಾದರೆ, ಮಧ್ಯಾಹ್ನದ ಉಪನ್ಯಾಸಮಾಲೆಯಲ್ಲಿ ಕೃಷಿ, ಆರೋಗ್ಯ, ನೀರಿನ ಸಂರಕ್ಷಣೆ, ರಾಷ್ಟ್ರೀಯತೆ ಆರ್ಥಿಕ ಅಭಿವೃದ್ಧಿಯಲ್ಲಿ ಮಹಿಳೆಯರ ಯುವಕರ ಪಾತ್ರದ ಬಗ್ಗೆ ಚರ್ಚಿಸಲಾಯಿತು. ಒಟ್ಟು ಆರು ತಂಡಗಳಲ್ಲಿ ವಿಂಗಡಿಸಲಾದ ತಂಡಗಳು ಪ್ರತ್ಯೇಕ ದಿನದ ಜವಾಬ್ದಾರಿಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸುವಲ್ಲಿ ಯಶಸ್ವಿಯಾದರು. ಮುಖ್ಯವಾಗಿ ಪೇಪರ್ ಬ್ಯಾಗುಗಳನ್ನು ತಯಾರಿಸಿ ವಿದ್ಯಾರ್ಥಿನಿಯರು ತಾವೇ ರಾಜಾಪುರ್, ಐವಾನ್ ಶಾಹಿ, ತಿಮ್ಮಾಪುರ್ ಸರ್ಕಲ್ ವಿವಿಧ ಅಂಗಡಿಗಳಲ್ಲಿ, ಸಾರ್ವಜನಿಕರಲ್ಲಿ ವಿತರಿಸಿದರು.ಕೋರಂಟಿ ಹನುಮಾನ್ ಮಂದಿರ, ಐವಾನ್ ಶಾಹಿ ಬಡಾವಣೆಗಳು, ರಾಜಾಪುರ ಹಾಗೂ ಕಾಲೇಜಿನ ಆವರಣದಲ್ಲಿ ವಿದ್ಯಾರ್ಥಿನಿಯರು 7 ದಿನಗಳ ಕಾಲ ಶ್ರಮದಾನ ಮಾಡಿದರು.
21.4.25 ರಂದು ಶಿಬಿರದ ಕೊನೆಯ ದಿನ ಮಧ್ಯಾಹ್ನ 3:00ಗೆ ಕಾಲೇಜಿನ ಸಭಾಗಾರದಲ್ಲಿ ಸಮಾರೋಪ ಸಮಾರಂಭವನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿ ಮತ್ತು ಅಧ್ಯಕ್ಷರಾಗಿ ಕಾಲೇಜಿನ ಪ್ರಾಂಶುಪಾಲರಾದ ಡಾ.ಆರ್.ಬಿ ಕೊಂಡಾ ಸರ್ ಆಗಮಿಸಿದರು. ಹಾಗೆಯೇ ಕಾಲೇಜಿನ ವಿಪರಾಚಾರ್ಯರುಗಳಾದ ಡಾ.ವೀಣಾ.ಎಚ್ ಮೇಡಂ ರವರು ಹಾಗೂ ಡಾ.ಉಮಾ ರೇವೂರ್ ಮೇಡಂ ರವರು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು, ಎನ್‌ಎಸ್‌ಎಸ್ 'ಬ' ಘಟಕದ ಕಾರಿಗಳಾದ ಸುಭಾಷ್ ಚಂದ್ರ ದೊಡ್ಡಮನಿ ಸರ್ ಅವರು ಸಮಾರೋಪದ ಸಮಾರಂಭಕ್ಕೆ ಸ್ವಾಗತಿಸಿದರು. ಅ ಘಟಕದ ಕಾರ್ಯಕ್ರಮ ಅಧಿಕಾರಿಗಳು ಶಿಬಿರದ ದಿನಗಳ ವರದಿಯನ್ನು ಪ್ರಸ್ತುತಪಡಿಸಿದರು. ಸ್ವಯಂ ನಿಧಿ ಘಟಕದ ಕಾರ್ಯಕ್ರಮ ಅಧಿಕಾರಿ ಶ್ರೀಮತಿ ಸುಷ್ಮಾ ಕುಲಕರ್ಣಿ ಬಹುಮಾನ ವಿತರಣೆ ಕಾರ್ಯಕ್ರಮ ನಡೆಸಿಕೊಟ್ಟರು.
ಈ ಕಾರ್ಯಕ್ರಮದಲ್ಲಿ ಈರ್ವರೂ ಉಪ ಪ್ರಾಚಾರ್ಯರು ವಿದ್ಯಾರ್ಥಿನಿಯರ ಶಿಸ್ತನ್ನು ಕೊಂಡಾಡಿ ಜೀವನದುದ್ದಕ್ಕೂ ಪಾಲಿಸುವಂತೆ ಪ್ರೋತ್ಸಾಹಿಸಿದರು ಪ್ರಾಚಾರ್ಯರಾದ ಡಾ.ಆರ್.ಬಿ ಕೊಂಡಾ ಸರ್ ಅವರು ಎನ್‌ಎಸ್‌ಎಸ್ ಗೀತೆ ಹಾಡಿದ ಮೊದಲಿನ ದಿನಕ್ಕೂ ಹಾಗೂ ಕೊನೆಯ ದಿನದ ಆತ್ಮವಿಶ್ವಾಸ ತುಂಬಿದ ಈ ಗೀತೆಯ ಬಗ್ಗೆ, ವಿದ್ಯಾರ್ಥಿನಿಯರ ಶ್ರಮದಾನ, ಸಾಮಾಜಿಕ ಅರಿವು ಮೂಡಿಸುವಲ್ಲಿ-ಮೂಡಿಸಿಕೊಳ್ಳುವಲ್ಲಿ ಯಶಸ್ವಿಯಾದದ್ದನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು. ಎನ್‌ಎಸ್‌ಎಸ್ ಕೇವಲ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನವಷ್ಟೇ ಅಲ್ಲ ಸಾಮಾಜಿಕ ಪ್ರಜ್ಞೆಯನ್ನು ಯುವಕರಲ್ಲಿ ಮೂಡಿಸುತ್ತದೆ ಎಂದು ಹೇಳಿದರು. ಹಾಗೆಯೇ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರಾದ ಡಾ.ಆರ್.ಬಿ ಕೊಂಡಾ ಸರ್ ಅವರು ಪೇಪರ್ ಬ್ಯಾಗ್ ತಯಾರಿಸಿದ ವಿಜೇತರಿಗೆ ಪ್ರಥಮ ಬಹುಮಾನವಾಗಿ ನಗದು 1000/- ಹಾಗೂ ದ್ವಿತೀಯ ಬಹುಮಾನವಾಗಿ 500/- ನೀಡಿದರು. ವಿದ್ಯಾರ್ಥಿನಿ ಕು. ಲಾಲ್ ಬೀ ಹಾಗೂ ಕು ಸ್ಟೆಲಾ ವಂದನಾರ್ಪಣೆ ನಡೆಸಿಕೊಟ್ಟರು. ವಿದ್ಯಾರ್ಥಿನಿಯರ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಶಿಬಿರದಲ್ಲಿ ರಾಷ್ಟ್ರಗಾನ ಹಾಡುವುದರ ಮೂಲಕ ಎನ್.ಎಸ್.ಎಸ್ ನ ಏಳು ದಿನಗಳ ಕಾರ್ಯಕ್ರಮವು ಸಮಾಪನವಾಯಿತು.