12ನೇ ಶತಮಾನ ವಿಶ್ವ ಕಂಡ ಶ್ರೇಷ್ಠ ಯುಗ

12ನೇ ಶತಮಾನ ವಿಶ್ವ ಕಂಡ ಶ್ರೇಷ್ಠ ಯುಗ

12ನೇ ಶತಮಾನ ವಿಶ್ವ ಕಂಡ ಶ್ರೇಷ್ಠ ಯುಗ

ಚಿಟಗುಪ್ಪಾ: ವಿಶ್ವಕ್ಕೆ ಮಾನವೀಯತೆಯ ಸಂದೇಶ ಸಾರಿ, ಸಕಲ ಜೀವಾತ್ಮರಿಗೆ ಲೇಸನ್ನೇ ಬಯಸಿದ, ಸೌಹಾರ್ದತೆಯ, ಭಾವೈಕ್ಯತೆಯ ತತ್ವಗಳು ಜನಮಾನಸದಲ್ಲಿ ಬಿತ್ತಿದ ಬಸವಾದಿ ಶರಣರು ತಮ್ಮ ವಚನಗಳ ಮೂಲಕ ಜಾತಿ, ಧರ್ಮ, ಮತಕ್ಕೆ ಆದ್ಯತೆ ನೀಡದೇ, ಮನುಷ್ಯತ್ವಕ್ಕೆ ಆದ್ಯತೆ ನೀಡಿರುತ್ತಾರೆ. ಅದಕ್ಕಾಗಿಯೇ 12ನೇ ಶತಮಾನ ವಿಶ್ವ ಕಂಡ ಶ್ರೇಷ್ಠ ಯುಗವಾಗಿತ್ತು ಎಂದು ಮಲ್ಲಯ್ಯ ಗಿರಿ ಆಶ್ರಮದ ಪೀಠಾಧ್ಯಕ್ಷ ಬಸವಲಿಂಗ ಅವಧೂತ ಶರಣರು ನುಡಿದರು.

ಮಲ್ಲಯ್ಯ ಗಿರಿ ಆಶ್ರಮದಲ್ಲಿ ನಡೆದ ಸಂವಾದ ಕಾರ್ಯಕ್ರಮದಲ್ಲಿ ದಿವ್ಯ ಸಾನಿಧ್ಯ ವಹಿಸಿ ಮಾತನಾಡಿದ ಶ್ರೀಗಳು ಮಾನವೀಯ ಮೌಲ್ಯ ಕುಸಿಯುತ್ತಿರುವ ಪ್ರಸ್ತುತ ದಿನಗಳಲ್ಲಿ ಬಸವ ತತ್ವ ಮರೆತರೆ ಉಳಿಗಾಲವಿಲ್ಲ. 

ಬಸವಾದಿ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ಸಾಗಬೇಕು. ಅಂದಾಗಲೇ ಮಾತ್ರ ಈ ಸಮಾಜದಲ್ಲಿ ನಾವೆಲ್ಲರೂ ನೆಮ್ಮದಿಯಿಂದ ಬದುಕಲು ಸಾಧ್ಯ ಎಂದರು.  

ಪರಿಸರ ವೇದಿಕೆ ರಾಜ್ಯ ಕಾರ್ಯದರ್ಶಿ ಸಂಗಮೇಶ ಎನ್ ಜವಾದಿ ಮಾತನಾಡಿ ಬಸವಾದಿ ಶರಣರ ದಾರಿಯಲ್ಲಿ ಸಾಗುತ್ತಿರುವ ಬಸವಲಿಂಗ ಅವಧೂತ ಶರಣರ ಸೇವಾ ಕೈಂಕರ್ಯಗಳು ಅಪಾರವಾಗಿವೆ. ವಿಶೇಷವಾಗಿ ಅಕ್ಕಮಹಾದೇವಿ ಅಕ್ಕನವರ ವೈಚಾರಿಕ ಚಿಂತನೆಗಳು ಪ್ರವಚನಗಳ ಮೂಲಕ ಜನಮಾನಸಕ್ಕೆ ಮುಟ್ಟಿಸುತ್ತಿರುವ ಶ್ರೀಗಳ ಸೇವೆ ಅನನ್ಯವಾದುದು. ದುಶ್ಚಟಗಳಿಗೆ ಬಲಿಯಾದಂತ ಸಾವಿರಾರು ವ್ಯಕ್ತಿಗಳನ್ನು ತಿದ್ದಿ ತೀಡಿ ಅವರುಗಳನ್ನು ಸರಿ ದಾರಿಗೆ ತರುವ ಕೆಲಸ, ಜನರಲ್ಲಿ ಬೇರೂರಿರುವ ಮೂಢನಂಬಿಕೆಗಳು ಹೋಗಲಾಡಿಸುವ ನಿಟ್ಟಿನಲ್ಲಿ ಜಾಗೃತಿ ಅಭಿಯಾನಗಳು,

ಆಶ್ರಮದಲ್ಲಿ ದಿನನಿತ್ಯ ದಾಸೋಹ ವ್ಯವಸ್ಥೆ, ಯೋಗ ಶಿಬಿರ, ಪರಿಸರ ಸಂರಕ್ಷಣೆ, 

ಸ್ವಚ್ಛತೆಗೆ ಆದ್ಯತೆ ಸೇರಿದಂತೆ 

ಅನೇಕ ಸೇವಾ ಚಟುವಟಿಕೆಗಳು ದಿನನಿತ್ಯ ಆಶ್ರಮದಲ್ಲಿ ಸಾಗುತ್ತಿರುವುದು ಉತ್ತಮ ಬೆಳವಣಿಗೆ.

ಶ್ರೀಗಳ ಕಾಯಕ ಮತ್ತು ದಾಸೋಹ ಸೇವೆ ಸರ್ವರಿಗೂ ಮಾದರಿ, ಪ್ರೇರಣದಾಯಕವಾಗಿದೆ ಎಂದರು. 

ಈ ಸಂದರ್ಭದಲ್ಲಿ ಶೌರ್ಯ ಜವಾದಿ, ಸಚೀನಕುಮಾರ ಮಾಹಾಜನ್, ಚನ್ನವೀರ ಲಾತೂರೆ, ಶ್ರಾವ್ಯ ಜವಾದಿ, ಶೃತಿ ಜವಾದಿ, ಉಮಾದೇವಿ ನಾರಾಯಣಪೇಟ, ಚಂದ್ರಶೇಖರ ನಾರಾಯಣಪೇಟ್, ಸರ್ವೇಶಕುಮಾರ್ ಗುಡ್ಡಾ , ರಾಕೇಶ ಗುಡ್ಡಾ, ಸೂರ್ಯಕಿರಣ ಗುಡ್ಡಾ, ವೀರ ಮಾಹಾಜನ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.