ಸಂಪೂರ್ಣೇಶ್ವರಿ ಸಂಘದ ವತಿಯಿಂದ ಮಹಿಳಾ ದಿನಾಚರಣೆ

ಸಂಪೂರ್ಣೇಶ್ವರಿ ಸಂಘದ ವತಿಯಿಂದ ಮಹಿಳಾ ದಿನಾಚರಣೆ
ಕಲಬುರಗಿ ನಗರದ ದರಿಯಾಪುರ್ ಜೆಡಿಯ ಕೋಟನೂರುನಲ್ಲಿರುವ ದಿವಂಗತ ಶ್ರೀ ಚಂದ್ರಶೇಖರ್ ಪಾಟೀಲ್ ರೇವೂರ ಔಷಧ ಭವನದಲ್ಲಿ ಸಂಪೂರ್ಣೇಶ್ವರಿ ಸಂಘದ ವತಿಯಿಂದ ಮಹಿಳಾ ದಿನಾಚರಣೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಶ್ರೀಮತಿ ಲಕ್ಷ್ಮಿ ದತ್ತಾತ್ರೇಯ ಪಾಟೀಲ್ ರೇವೂರ ಹಾಗೂ ಅತಿಥಿಗಳಾಗಿ ಯಶೋದಾ ಕಾಟಕಿ ಕರಾಟೆ (ಪಿ.ಎಸ್.ಐ. ಬ್ರಹ್ಮಪುರ ಪೊಲೀಸ್ ಸ್ಟೇಷನ್), ಸುಮಂಗಲ ಚಕ್ರವರ್ತಿ (ಮಹಿಳಾ ಪತಂಜಲಿ ಜಿಲ್ಲಾಧ್ಯಕ್ಷ ಕಲಬುರ್ಗಿ), ಸಂಗೀತ ಕಲಾಸ್ಕರ್ (ಕಲಾಸ್ಕರ್ ಹಾಸ್ಪಿಟಲ್ ನಿರ್ವಾಹಕರು), ಮಾಲಾ ಕಿಣ್ಣಿ (ನಾಲ್ಕು ಚಕ್ರ ಸಂಸ್ಥಾಪಕರು) ಇವರು ಉದ್ಘಾಟನೆ ನೆರವೇರಿಸಿದರು.
ಈ ಕಾರ್ಯಕ್ರಮ ಉಚಿತ ಪ್ರವೇಶದೊಂದಿಗೆ ನಡೆದಿದ್ದು, ವಿವಿಧ ಸಾಂಸ್ಕೃತಿಕ ಹಾಗೂ ಮನರಂಜನಾ ಕಾರ್ಯಕ್ರಮಗಳು ಆಯೋಜಿಸಲ್ಪಟ್ಟವು. ಅನ್ನಪೂರ್ಣ (ಚಕ್ಲಿ ವ್ಯವಹಾರ), ವಿನ್ಯಾಸಾ ವಿಕ್ರಂ (ಗಿರಿಜಾದೇವಿ ಸಂಗೀತ ನೃತ್ಯ ಕಲಾ ಮಂದಿರದ ನೃತ್ಯ ನಿರ್ದೇಶಕಿ), ಕಾಮಿಡಿ ಕ್ಷೇತ್ರದ ರೇಖಾ (ಟಿಕ್‌ಟಾಕ್ ಅಜ್ಜಿ), ಮೇಘಾ ದೇಶಮುಖ್ (ಆರ್ ಎಸ್ ಎಸ್ ಸೇವಾ ಪ್ರಮುಖ), ಹಾಗೂ ಶೋಭಾ ಬಾಗೇವಾಡಿ (ಬಿಜೆಪಿ) ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದಲ್ಲಿ ನೃತ್ಯ, ರಾಂಪ್ ವಾಕ್, ಕಾಮಿಡಿ, ಮತ್ತು ವಿಶೇಷ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರತಿ ಭಾಗವಹಿಸಿದವರಿಗೆ ಆಕರ್ಷಕ ಬಹುಮಾನಗಳು ನೀಡಲಾಯಿತು.
ಸಂಪೂರ್ಣೇಶ್ವರಿ ಕಾರ್ಯಕ್ರಮದ ಪ್ರಯೋಜಕರಾದ ಶೆಟ್ಟಿ ಸಿನಿಮಾಸ್, ಮಲಬಾರ್ ಗೋಲ್ಡ್ & ಡೈಮಂಡ್ಸ್, ಮೌಂಟ್ ಲೀಟೆರಾ ಜಿ ಸ್ಕೂಲ್, ಕಲಾಸ್ಕರ್ ಮಲ್ಟಿ ಸ್ಪೆಷಲಿಟಿ ಹಾಸ್ಪಿಟಲ್, ಏಂಜಲ್ ಚಿಲ್ಡ್ರನ್ಸ್ ಹಾಸ್ಪಿಟಲ್, ಕ್ರಿಯೇಟಿವ್ ಇವೆಂಟ್ಸ್, ವಿಂಗ್ಸ್ ಆನ್ ವೀಲ್ಸ್, ನಮ್ಮ ಹ್ಯಾಪಿ ಕೇಕ್ಸ್, ಕಲರ್ಸ್ ಲೋರಿಯಲ್ ಯುನಿ ಸೆಕ್ಸ್ ಸಲೂನ್, ರಾಮ್ ರಸೋಯಿ ಇದ್ದರು. ಈ ಕಾರ್ಯಕ್ರಮದ 2ನೇ ಸೀಸನ್ ಆಗಿದ್ದು, ಅದನ್ನು ಯಶಸ್ವಿಯಾಗಿ ನಡೆಸಲಾಯಿತು. ಸಂಪೂರ್ಣೇಶ್ವರಿ ತಂಡದ ಸದಸ್ಯರಾದ ವಿಶಾಲಾ ಅಭಿಷೇಕ್, ಪ್ರೀತಿ ಘಾಟಿಕೆ, ಸ್ನೇಹಾ ಪ್ರತಾಪ್ ಹಾಗೂ ಸಂತೋಷಿ ವಡಿಗೇರ್ ಅವರು ಈ ಕಾರ್ಯಕ್ರಮದಲ್ಲಿ ಪ್ರಮುಖವಾಗಿ ಭಾಗವಹಿಸಿದ್ದರು.