ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸುತ್ತೋಲೆಗೆ ಸಾಹಿತ್ಯ ವಲಯದ ತೀವ್ರ ವಿರೋಧ

ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸುತ್ತೋಲೆಗೆ ಸಾಹಿತ್ಯ ವಲಯದ ತೀವ್ರ ವಿರೋಧ

ಸರ್ವಾಧಿಕಾರಿ ಧೋರಣೆಯತ್ತ ಸಾರ್ವಜನಿಕ ಗ್ರಂಥಾಲಯ ಇಲಾಖೆಯ ಸಚಿವರ ನೀತಿಗೆ ಖಂಡನೆ   

        ಕಲಬುರಗಿ:ಸಾರ್ವಜನಿಕ ಗ್ರಂಥಾಲಯ ಇಲಾಖೆಯು ದಿನಾಂಕ :19-03- 2025 ರಂದು ಹೊರಡಿಸಿದ ಸುತ್ತೋಲೆ ಕೂಡಲೇ ಹಿಂಪಡೆದುಕೊಳ್ಳಬೇಕೆಂದು ಕಲ್ಯಾಣ ಕರ್ನಾಟಕದ ಸಾಹಿತಿ ಚಿಂತಕರು,ಕವಿ,ಲೇಖಕರು ಈ ಮೂಲಕ ಆಗ್ರಹಿಸುತ್ತೇವೆ. ಈ ಸುತ್ತೋಲೆಯನ್ನು ಗಮನಿಸಿದಾಗ ಸರ್ಕಾರ ಏಕ ಗವಾಕ್ಷಿ ಪುಸ್ತಕ ಖರೀದಿ ಯೋಜನೆಯನ್ನು ಕ್ರಮೇಣವಾಗಿ ನಿಲ್ಲಿಸುವ ಷಡ್ಯಂತರ ನಡೆಸಿದೆ.ಇದುವರೆಗೂ ಇದ್ದ ಸೌಲಭ್ಯವನ್ನು ಧೀಡೀರನೆ ಮುಚ್ಚಿದ್ದು ಯಾಕೆ?.ಅಷ್ಟೇ ಅಲ್ಲ ಸಾರ್ವಜನಿಕ ಗ್ರಂಥಾಲಯ ಪ್ರಧಾನ ಕಛೇರಿ ಮುಚ್ಚಿ ಆಯುಕ್ತರ ಹುದ್ದೆಯನ್ನು ರದ್ದು ಪಡಿಸುವ ಸಾಧ್ಯತೆಗಳಿವೆ. ಇದನ್ನು ನೋಡಿದರೆ ಈ ಮುಂಚೆ ನಿರ್ದೇಶಕರು ಇದ್ದ ಹುದ್ದೆ ತಗೆದು ಆಯುಕ್ತರ ನೇಮಕ ಮಾಡಿದ ಹಿಂದೆ ಕೈವಾಡ ಈಗ ಬಯಲಾಗುತ್ತಿದೆ.ಅಂದು ನಿರ್ದೇಶಕರು ಕೈಗೊಳ್ಳುವ ಯೋಚನೆಗಳು ಸರಿಯಾಗಿದ್ದವು ಎಂಬ ಪಶ್ಚಾತಾಪದ ಮನೋಭಾವನೆ ಮೂಡುತ್ತಿದೆ. ಈ ಕ್ರಮ ಕೈಗೊಳ್ಳುವರು ಎಂಬುದು ಮೇಲ್ನೋಟಕ್ಕೆ ತಿಳಿದು ಬರುತ್ತದೆ. ಅಲ್ಲದೇ ಬೆಂಗಳೂರು ನಗರದ ವಲಯ ಗ್ರಂಥಾಲಯಗಳಿಗೆ ರಾಜ್ಯದ ಎಲ್ಲ ಜಿಲ್ಲೆಗಳಿಗೆ ಪ್ರಾತಿನಿಧಿಕವಾಗಿ ಪುಸ್ತಕ ಖರೀದಿಸುವ ಪರಮಾಧಿಕಾರವನ್ನು ನೀಡಿ ಕೆಲವು ಜಿಲ್ಲೆಗಳನ್ನು ಅವರಿಗೆ ವಹಿಸಲಾಗಿದೆ. ಸಂಪೂರ್ಣ ಪುಸ್ತಕ ಖರೀದಿ ಅಧಿಕಾರವನ್ನು ವಲಯ ಗ್ರಂಥಪಾಲಕರಿಗೆ ವಹಿಸಿರುವುದರಿಂದ ಅವರಿಗೆ ಹೆಚ್ಚಿನ ಅನುಕೂಲವಾಗುತ್ತದೆ. ಪಕ್ಷಪಾತ, ಪ್ರಾದೇಶಿಕತೆ, ಗುಂಪುಗಾರಿಕೆ ಜಾತೀಯತೆ ಧೋರಣೆಯನ್ನು ಅನುಸರಿಸುವ ಮೂಲಕ ತಮಗೆ ಬೇಕಾದವರನ್ನು ಒಲಿಸಿಕೊಳ್ಳಲು ಪುಸ್ತಕ ಖರೀದಿ ನಡೆಯುತ್ತದೆ. ಲೇಖಕರು ಬೆಂಗಳೂರು ಮೂಲದ ಲೇಖಕರು ಹಾಗೂ ಪ್ರಕಾಶಕರಿಗೆ ಇದು ಹೆಚ್ಚಿನ ಅನುಕೂಲವಾಗುತ್ತದೆ. ಕರ್ನಾಟಕದ ಉಳಿದ ಜಿಲ್ಲೆಯ ಎಲ್ಲಾ ಲೇಖಕರು ಸಾಹಿತಿಗಳು ಪ್ರಕಾಶಕರು ನಿರ್ನಾಮವಾಗುವುದರಲ್ಲಿ ಸಂದೇಹವಿಲ್ಲ!. ಎಲ್ಲಾ ಜಿಲ್ಲೆಯ ಗ್ರಂಥಪಾಲಕರು ಪುಸ್ತಕ ಖರೀದಿಸುವ ಅಧಿಕಾರ ಕಳೆದುಕೊಂಡು ಅವರಿಗೆ ಖರೀದಿ ಮಾಡಲಿಕ್ಕೆ ಅವಕಾಶವಿಲ್ಲದಂತಾಗಿದೆ. ವಲಯ ಗ್ರಂಥಪಾಲಕರು ಖರೀದಿಸಿ ಬಿಟ್ಟು ಉಳಿದಿದ್ದನ್ನು ಖರೀದಿಸಲು ಹೇಳಿ ತುಟಿಗೆ ತುಪ್ಪ ಹಚ್ಚುವ ಕೆಲಸವನ್ನು ಮಾಡಲಾಗಿದೆ. ಇದರಿಂದ ಜಿಲ್ಲಾ ಗ್ರಂಥಾಲಯಗಳು ನಿರ್ನಾಮವಾಗುತ್ತವೆ. ಅಲ್ಲಿಯ ಗ್ರಂಥಪಾಲಕರು ಸ್ಥಳೀಯ ಸಾಹಿತಿಗಳ ಪ್ರೀತಿ ವಿಶ್ವಾಸ ಕಳೆದುಕೊಳ್ಳುತ್ತಾರೆ.ಪ್ರಕಾಶಕರು ಯಾವ ಜಿಲ್ಲೆಗಳಲ್ಲಿಯೂ ಬೆಳೆಯದಂತೆ ಸರ್ಕಾರ ಒಂದು ರೀತಿ ಒಳಸಂಚು ಮಾಡಿದೆ, ಎಂದು ಹೇಳಬಹುದು. ಮತ್ತೆ ಪುನಃ ಏಕಗವಾಕ್ಷಿ ಪುಸ್ತಕ ಖರೀದಿ ಯೋಜನೆಯ ಪರಮಾಧಿಕಾರ ಆಯುಕ್ತರಿಗೆ ಅಥವಾ ನಿರ್ದೇಶಕರಿಗೆ ನೀಡಬೇಕು ಅಲ್ಲಿ ಖರೀದಿಯಾದ ಪುಸ್ತಕಗಳು ಎಲ್ಲ ಜಿಲ್ಲಾ ಗ್ರಂಥಗಳು ಹಾಗೂ ವಲಯಗಳು ಖರೀದಿ ಮಾಡುವ ಮೊದಲಿನ ಪದ್ದತಿಯನ್ನೇ ಪುನಃ ಜಾರಿಗೆ ತರಬೇಕೆಂದು ಆಗ್ರಹಿಸುತ್ತೇವೆ. 2021 ರ ಆಯ್ಕೆ ಪಟ್ಟಿ ಪುಸ್ತಕ ಖರೀದಿ ಪಾವತಿಯನ್ನು ಕೂಡಲೇ ಮಾಡಬೇಕೆಂದು ವಿನಂತಿಸಿಕೊಳ್ಳುತ್ತೇವೆ. ಮುಂದಿನ ದಿನಗಳಲ್ಲಿ 2021 ರಿಂದ ಇದುವರೆಗೆ ಎಲ್ಲ ಪುಸ್ತಕಗಳ ಆಯ್ಕೆ ಪಟ್ಟಿಯನ್ನು ಸಿದ್ಧಪಡಿಸಿ ಕರ್ನಾಟಕದ ಎಲ್ಲಾ ಲೇಖಕರನ್ನು ಹಾಗೂ ಪ್ರಕಾಶಕರನ್ನು ಪ್ರತಿ ವರ್ಷ ಬಿಲ್ಲನ್ನು ಪಾವತಿಸಿ ಲೇಖಕರಿಗೆ ಮತ್ತು ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುತ್ತೇವೆ. ಒಂದು ವೇಳೆ ಸಾರ್ವಜನಿಕ ಗ್ರಂಥಾಲಯ ಸಚಿವರು ಕ್ರಮ ಕೈಗೊಳ್ಳದಿದ್ದರೆ ರಾಜ್ಯದಾದ್ಯಂತ ಉಗ್ರ ಹೋರಾಟ ಕೈಗೊಳ್ಳುತ್ತೇವೆಂದು ಈ ಮೂಲಕ ಎಚ್ಚರಿಸುತ್ತೇವೆ.

ಪ್ರೊ.ಶಿವಾರಾಜ ಪಾಟೀಲ, ಡಾ.ಗವಿಸಿದ್ಧಪ್ಪ ಪಾಟೀಲ, ಡಾ.ಶರಣಬಸಪ್ಪ ವಡ್ಡನಕೇರಿ,ಡಾ.ಕೆ.ಎಸ್.ಬಂಧು, ಡಾ.ಮೀನಾಕ್ಷಿ ಬಾಳಿ,ಡಾ. ರಾಜಕುಮಾರಿ ಮಾಳಗೆ,ಡಾ.ಸಿದ್ದಪ್ಪ ಹೊಸಮನಿ,ಸುರೇಶ ಕಾನೇಕರ, ಆಕಾಶ ತೆಗನೂರ,ಡಾ.ಅವಿನಾಶ ದೇವನೂರ, ಸಂತೋಷಕುಮಾರ ಕರಹರಿ,ಡಾ.ಶೀಲಾದೇವಿ ಬಿರಾದಾರ,ಡಾ.ಬಸವರಾಜ ದಯಾಸಾಗರ,ಶಿವರಾಜ ಮೇತ್ರೆ, ಸಿದ್ದಾರ್ಥ ಮಿತ್ರಾ,ಡಾ.ಸಿದ್ರಾಮ ವಾಘಮಾರೆ ಮೊದಲಾದವರು ಬೆಂಬಲಿಸಿದ್ದಾರೆ.