ಶಶೀಲ್ ಜಿ ನಮೋಶಿ ಅವರಿಗೆ ಕಲಬುರ್ಗಿ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಸನ್ಮಾನ

ಶಶೀಲ್ ಜಿ ನಮೋಶಿ ಅವರಿಗೆ ಕಲಬುರ್ಗಿ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದಿಂದ ಸನ್ಮಾನ

ಶಿಕ್ಷಕರ ಸೇವೆಗೆ ಗೌರವ: ಶಶೀಲ್ ಜಿ ನಮೋಶಿ ಸನ್ಮಾನ

ಕಲಬುರ್ಗಿ: ಕಲಬುರ್ಗಿ ಜಿಲ್ಲೆಯ ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಸಂಘದ ವತಿಯಿಂದ ಪ್ರೀತಿಪಾತ್ರ ನಾಯಕರು ಮತ್ತು ಶಿಕ್ಷಕರ ವಿಶ್ವಾಸಾರ್ಹ ವ್ಯಕ್ತಿಯಾಗಿರುವ ಶಶೀಲ್ ಜಿ ನಮೋಶಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.  

ನಿನ್ನೆ ವಿಧಾನ ಪರಿಷತ್ ಅಧಿವೇಶನದ ಕಲಾಪದಲ್ಲಿ ಶಶೀಲ್ ಜಿ ನಮೋಶಿ ಅವರು ಬಡ್ತಿ ಸರ್ಕಾರಿ ಪ್ರೌಢಶಾಲಾ ಶಿಕ್ಷಕರ ಬಹು ದಿನಗಳ ಬೇಡಿಕೆಗಳಾದ 10, 15, 20, 25 ಮತ್ತು 30 ವರ್ಷಗಳ ಸೇವಾ ಮುಂಬಡ್ತಿ ವೇತನ (ಟೈಮ್ ಬಾಂಡ್ ಇನ್ಕ್ರಿಮೆಂಟ್) ಕುರಿತು ಸುಧಿರ್ಗವಾಗಿ ಚರ್ಚಿಸಿದರು. ಈ ಸಂಬಂಧ ಶಾಲಾ ಶಿಕ್ಷಣ ಹಾಗೂ ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಸಮಿತಿ ರಚನೆ ಮಾಡಿಸಿ, ಮುಖ್ಯಮಂತ್ರಿಗಳ ಜೊತೆ ಚರ್ಚಿಸಿ ತೀರ್ಮಾನ ಕೈಗೊಳ್ಳುವ ಭರವಸೆ ನೀಡಿದರು.  

ಈ ಪ್ರಯುಕ್ತ ಕಲಬುರ್ಗಿ ಜಿಲ್ಲೆಯ ಬಡ್ತಿ ಪ್ರೌಢಶಾಲಾ ಶಿಕ್ಷಕರ ಸಂಘದ ನಿಯೋಗವು ಶಶೀಲ್ ಜಿ ನಮೋಶಿ ಅವರಿಗೆ ಮನವಿ ಪತ್ರ ನೀಡಿತು.  

ಈ ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ವೆಂಕಟೇಶ ಚಿನ್ನೂರ, ಜಿಲ್ಲಾ ನಿರ್ದೇಶಕ ಮಹೇಶ ಬಸರಕೊಡ, ಪ್ರಧಾನ ಕಾರ್ಯದರ್ಶಿ ಶಿವಕುಮಾರ ಹೊಸಮನಿ, ಶರಣಪ್ಪ ಕಟ್ಟಿ, ಅನೀಲ ಕುಮಾರ ಕುಮಸಿಕರ್, ಮಲ್ಲಿಕಾರ್ಜುನ ಮಾಚನೂರ, ಮಹಾದೇವಪ್ಪ ಚೇಗಂಟಿ, ಸಾಯಬಣ್ಣ ಲಂಗೋಟಿ, ಮಹಿಬೂಬ ವಾಲಿಕಾರ, ಪೀರಪ್ಪ ಡೊಳ್ಳೆ, ಅಪ್ಪಾರಾಯ ಅಂಬುರೆ ಸೇರಿ ಹಲವರು ಭಾಗವಹಿಸಿದ್ದರು.