ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ವಿಚಾರ ಸಂಕಿರಣ ಹಾಗೂ ರಂಗ ಸಂಗಿತೋತ್ಸವ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ
ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ವಿಚಾರ ಸಂಕಿರಣ ಹಾಗೂ ರಂಗ ಸಂಗಿತೋತ್ಸವ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮ
ಕಲಬುರಗಿ: ನಗರದ ಕಾಂತಾ ಕಾಲನಿಯಲ್ಲಿರುವ ಡಾ.ಅಂಬೇಡ್ಕರ್ ಭವನದಲ್ಲಿ ಸೂರ್ಯನಗರಿ ಸಾಂಸ್ಕೃತಿಕ ಕಲಾಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಂಗಳೂರು ಇವರ ಸಹಯೋಗದೊಂದಿಗೆ ಡಾ. ಬಾಬಾ ಸಾಹೇಬ ಅಂಬೇಡ್ಕರ್ ರವರ ವಿಚಾರ ಸಂಕಿರಣ ಹಾಗೂ ರಂಗ ಸಂಗಿತೋತ್ಸವ ಮತ್ತು ನಾಟಕ ಪ್ರದರ್ಶನ ಕಾರ್ಯಕ್ರಮವನ್ನು ಮಹಾನಗರ ಪಾಲಿಕೆ ವಲಯ ಆಯುಕ್ತರಾದ ರಮೇಶ ಪಟ್ಟೆದಾರ ಅವರು ಜಂಬೆ ನುಡಿಸುವ ಮೂಲಕ ಉದ್ಘಾಟಿಸಿದರು.
ಸೂರ್ಯನಗರಿ ಸಾಂಸ್ಕೃತಿಕ ಕಲಾ ಸಂಘ ದಿಂದ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರಾದ ನೇತ್ರ ಶಸ್ತ್ರ ಚಿಕಿತ್ಸೆ ತಜ್ಞ ಡಾ. ನವನೀತಾ ರೆಡ್ಡಿ, ಚಿತ್ರಕಲೆ ಶಿಕ್ಷಕ ಸೂರ್ಯಕಾಂತ ನದ್ದೂರ, ಗೀತಾ ಜೀ ಭರಣಿ ಇವರಿಗೆ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಶ್ರೀರಂಗ ಮಸ್ತಕರ, ಬಸವರಾಜ್ ಕಾಂಸೆ, ಸೋಮಶೇಖರ್ ಮೇಲಿನಮನಿ, ರಮೇಶ ಬಡಿಗೇರ, ವಿಜಯಲಕ್ಷ್ಮಿ ಗೋಬ್ಬುರಕರ್, ದಿಲೀಪಕುಮಾರ ದನೇಕರ, ಸಂಘದ ಅಧ್ಯಕ್ಷ ರಾಜಕುಮಾರ ಎಸ್ ಕೆ, ಡಾ. ರಾಮು ಸಿಎಂ, ಶ್ರೀನಿವಾಸ ದೋರನಹಳ್ಳಿ, ಶ್ರೇಯ, ಸಮೀರ್ ಸುಬೇದಾರ್, ಕೆ ಪಿ ಪೂರ್ಣಚಂದ್ರ ತೇಜಸ್ವಿ, ಸುರೇಶ ಬಡಿಗೇರ, ಚಂದ್ರಕಾಂತ ಮೋರೆ, ಸಂಜು ಎಸ್ ಎಚ್, ಮಲ್ಲಿಕಾರ್ಜುನ ದೊಡ್ಮನಿ, ಡ್ಯಾನ್ಸರ್ ಅಲ್ಲಿ, ಮಂಜುನಾಥ, ವಿನೋದ, ಬಾಬುರಾವ, ಐಶ್ವರ್ಯ, ಅಮಿತ್, ಕಾರ್ತೀಕ, ವೈಭವ ಬಬಲಾದ್, ಚಂದ್ರಕಾಂತ ಇದ್ದರು. ನಂತರ ಕೃಷ್ಣೆಗೌಡನ ಆನೆ ನಾಟಕ ಪ್ರದರ್ಶನ ಮಾಡಲಾಯಿತು.