ಕಾಲುವೆ ನೀರಿಗಾಗಿ ರೈತರ ಹೆದ್ದಾರಿ ಬಂದ್ ಹೋರಾಟ

ಕಾಲುವೆ ನೀರಿಗಾಗಿ ಹೆದ್ದಾರಿ ಬಂದ್
ಶಹಾಪುರ : ತಾಲೂಕಿನ ಹತ್ತಿಗುಡೂರ ಕ್ರಾಸ್ ನಲ್ಲಿ ಮಾರ್ಚ್ 24ರಂದು ಕಾಲುವೆ ನೀರಿಗಾಗಿ ರಾಜ್ಯ ಹೆದ್ದಾರಿ ಬಂದ್ ಮಾಡಿ ಹೋರಾಟ ಮಾಡಲಾಗುವುದು ಎಂದು ಕರ್ನಾಟಕ ರಾಜ್ಯ ರೈತ ಸಂಘ,ರೈತ ಸೇನೆ ರಾಜ್ಯ ಉಪಾಧ್ಯಕ್ಷರಾದ ಲಕ್ಷ್ಮಿಕಾಂತ್ ಪಾಟೀಲ್ ತಿಳಿಸಿದ್ದಾರೆ.
ರೈತರ ಜಮೀನುಗಳಿಗೆ ಕಾಲುವೆ ನೀರು ಹರಿಸುವುದನ್ನು ಬಿಟ್ಟು ಮಾರ್ಚ್ 25ಕ್ಕೆ ದಿಢೀರನೆ ನೀರು ಹರಿಸುವುದನ್ನು ನಿರ್ಬಂಧ ಏರಿದ ಸರ್ಕಾರದ ವಿರುದ್ಧ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಈ ವಿಷಯಕ್ಕೆ ಸಂಬಂಧಪಟ್ಟಂತೆ ಬೆಂಗಳೂರಿನ ಉನ್ನತ ಅಧಿಕಾರಿಗಳ ಗಮನಕ್ಕೆ ತಂದರು ಪ್ರಯೋಜನಯಾಗಿಲ್ಲ,ಇದೇ ರೀತಿ ಮುಂದುವರೆದರೆ ರೈತರು ಬೆಳೆದ ಬೆಳೆಗಳು ಸಂಪೂರ್ಣ ನಾಶವಾಗುತ್ತವೆ ಎಂದು ತಿಳಿಸಿದರು.
ನೀರು ಹರಿಸುವ ವಿಚಾರ ಕೈ ಬಿಟ್ಟು ರೈತರಿಗೆ ಅನ್ಯಾಯ ಮಾಡಲಾಗುತ್ತಿದೆ,ಈ ನಿರ್ಣಯವನ್ನು ಸಾವಿರಾರು ರೈತರು ಖಂಡಿಸಿ,ಬೀದಿಗಿಳಿದು,ರಸ್ತೆ ಬಂದ್ ಮಾಡಿ ಹೋರಾಟ ಮಾಡುವುದು ಅನಿವಾರ್ಯ.